ಚಿಕ್ಕೋಡಿ

ಕಾಯ್ದೆಗಳನ್ನು ಸರಳಿಕರಣಗೊಳಿಸುವ ಸುಮಾರು 23ಬಿಲ್ ಪಾಸ್

ಕಾಯ್ದೆಗಳನ್ನು ಸರಳಿಕರಣಗೊಳಿಸುವ ಸುಮಾರು 23ಬಿಲ್ ಪಾಸ್

ಚಿಕ್ಕೋಡಿ 16: ಸಂಸತ್ತಿನ ಇತಿಹಾಸದಲ್ಲಿಯೇ ಲೋಕಸಭೆ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಸುಮಾರು 23 ಬಿಲ್ ಪಾಸ ಮಾಡುವ ಮೂಲಕ ದೇಶದ ಜನರಿಗೆ ಕೇಂದ್ರ ಸರಕಾರ ಅನುಕೂಲ ಮಾಡಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. 

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ಹಳೆಯ ಬ್ರಿಟಿಷ್ ಕಾಲದ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಜನರಿಗೆ ಬೇಕಾದ ರೀತಿಯಲ್ಲಿ ಕಾಯ್ದೆಗಳನ್ನು ಸರಳಿಕರಣಗೊಳಿಸುವ ಸುಮಾರು 23 ಬಿಲ್ ಪಾಸ್ ಮಾಡಲಾಗಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಎರಡು ಗಂಟೆಗಳ ಕಾಲ ಸಂಸತ್ತಿನ ಅಧಿವೇಶನದಲ್ಲಿ ಸುದೀರ್ಘ ಮಾತನಾಡಿ ದೇಶದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು. 

ವಿರೋಧಿ ಪಕ್ಷದ ನಾಯಕರು ಮಣಿಪುರ ವಿಷಯ ಪ್ರಸ್ತಾಪಿಸಿ ಸುಖಾಸುಮನೆ ಸಂಸತ್ತಿನ ಸಮಯ ಹಾಳು ಮಾಡಲು ಯತ್ನ ಮಾಡಿದರೂ ಕೂಡಾ ಪ್ರಯೋಜನವಾಗಲಿಲ್ಲ. ಏನೇ ಪ್ರಶ್ನೆ ಉದ್ಭವವಾದರೂ ಸಮರ್ಥವಾಗಿ ನಮ್ಮ ಸಚಿವರು ಉತ್ತರಿಸಿದ್ದಾರೆ ಎಂದರು. 

ಸಂಸತ್ತಿನಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ವಿಷಯ ಪ್ರಸ್ತಾಪಿಸಿ ಎಲ್ಲರೂ ಸೇರಿ ಮಣಿಪುರ ವಿಷಯ ಬಗೆಹರಿಸೋಣ ಎಂದಿದ್ದಾರೆ. ಆದರೂ ವಿರೋಧ ಪಕ್ಷಗಳು ಸುಖಾಸುಮನೆ ಗದ್ದಲು ಮಾಡಿದರೂ ಪ್ರಯೋಜನವಾಗಿಲ್ಲ ಎಂದರು. 

ಕಳೆದ ನಾಲ್ಕು ವರ್ಷದ ನನ್ನ ಅವಧಿಯಲ್ಲಿ 269 ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲದಕ್ಕೂ ಸಮರ​‍್ಕ ಉತ್ತರ ಸಿಕ್ಕಿದೆ. ಅದರಲ್ಲಿ ಬಹಳಷ್ಟು ಪ್ರಶ್ನೆಗಳು ಸ್ಟಾರ ಪ್ರಶ್ನೆಗಳಾಗಿವೆ. ಲೋಕಸಭೆ ಅಧೀವೇಶನದಲ್ಲಿ ಹಾಜರಾತಿ ಮುಖ್ಯವಾಗಿರುತ್ತದೆ. ಹೀಗಾಗಿ ನಾನು ಎಲ್ಲ ಅಧೀವೇಶನದಲ್ಲಿ ಪಾಲ್ಗೊಂಡು ಕಾರ್ಯ ಕಲಾಪದಲ್ಲಿ ಹಾಜರಾಗಿ ದೇಶದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಾನೊಬ್ಬ ಸಂಸದನಾಗಿರುವುದು ಹೆಮ್ಮೆ ಎಣಿಸುತ್ತದೆ ಎಂದರು. 

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಅನೇಕ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಸಚಿವರ ಜೊತೆ ಮಾತುಕತೆ ನಡೆಸಿ ಚರ್ಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ನೀತೀನ ಗಡ್ಕರಿ ಜೊತೆ ಮಾತುಕತೆ ನಡೆಸಲಾಗಿದೆ. ಕಳೆದ 9 ವರ್ಷದ ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ನೀಡಿದೆ. ಅತೀ ಹೆಚ್ಚು ಗುಣಮಟ್ಟದ ಹೆದ್ದಾರಿ ನಿರ್ಮಾಣ ಮಾಡಿರುವ ಕೀರ್ತಿ ಸಚಿವ ನೀತೀನ ಗಡ್ಕರಿ ಅವರಿಗೆ ಸಲ್ಲುತ್ತದೆ ಎಂದರು. 

ಪುರಸಭೆ ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ, ಸಿದ್ದಪ್ಪ ಡಂಗೇರ, ವಿಜಯ ರಾವುತ ಇದ್ದರು. 

ಚಿಕ್ಕೋಡಿ ಜಿಲ್ಲೆ ಘೋಷಣೆ ಅವಶ್ಯಕವಾಗಿದೆ 

ಅಖಂಡ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಅವಶ್ಯಕವಾಗಿದೆ. ಈಗಾಗಲೇ ಜಿಲ್ಲೆಯಾಗುವ ಎಲ್ಲ ಅರ್ಹತೆ ಹೊಂದಿರುವ ಚಿಕ್ಕೋಡಿಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹೊರತು ಪಡಿಸಿ ಉಳಿದೆಲ್ಲ ಕಚೇರಿಗಳು ಕಾರಾ​‍್ಯರಂಭ ಮಾಡಿವೆ. ಹೀಗಾಗಿ ಚಿಕ್ಕೋಡಿ ಜಿಲ್ಲೆ ಘೋಷಣೆ ಅವಶ್ಯಕವಾಗಿದೆ.  

ಅಣ್ಣಾಸಾಹೇಬ ಜೊಲ್ಲೆ ಸಂಸದರು ಚಿಕ್ಕೋಡಿ 


ಸುದ್ದಿ ಓದಿ