ಬೈಲಹೊಂಗಲ

ಬೈಲಹೊಂಗಲ ತಾಲೂಕಿನಲ್ಲಿ 22 ಜನರಿಗೆ ಕೊರೊನಾ

ಬೈಲಹೊಂಗಲ ತಾಲೂಕಿನಲ್ಲಿ 22 ಜನರಿಗೆ ಕೊರೊನಾ

ಬೈಲಹೊಂಗಲ: ಪಟ್ಟಣದಲ್ಲಿ 12 ಸೇರಿದಂತೆ ತಾಲೂಕಿನಲ್ಲಿ 22 ಜನರಿಗೆ ಶುಕ್ರವಾರ ಕೊರೊನಾ ದೃಢಪಟ್ಟಿದೆ.  

ಪಟ್ಟಣದ ಮೌನೇಶ್ವರ ನಗರದ 65 ರ್ಷದ ಮಹಿಳೆ, ನಮೋ ನಗರದ 22 ವರ್ಷದ ಯುವಕ, ವಿದ್ಯಾನಗರ 3ನೇ ಕ್ರಾಸಿನ 46 ವರ್ಷದ ಮಹಿಳೆ, 49 ವರ್ಷದ ಪುರುಷ,74 ವರ್ಷದ ವೃದ್ಧ, ಶಿವಾನಂದ ಭಾರತಿ ನಗರ ಸತ್ಯಮಾರ್ಗದ 30 ವರ್ಷದ ಪುರುಷ, ಮಹಾಂತೇಶ ನಗರದ 45 ವರ್ಷದ ಪುರುಷ, ಶೆಟಗಾರ ಚಾಳದ 35 ವರ್ಷದ ಪುರುಷ, ಸಾರ್ವಜನಿಕ ಆಸ್ಪತ್ರೆ 48 ವರ್ಷದ, ಆರ್ಯುವೇದಿಕ್ ಕಾಲೇಜಲ್ಲಿ 24 ವರ್ಷದ ಯುವತಿ, ಹೊಸೂರ ರಸ್ತೆಯ ಎಲ್‌ಐಸಿ ಆಫೀಸ್ ಹಿಂದೆ 47 ವರ್ಷದ ಪುರುಷ ಹಾಗೂ ತಾಲೂಕಿನ ತಿಗಡಿ, ಉಡಿಕೇರಿ, ಕಿತ್ತೂರಲ್ಲಿ ತಲಾ ಎರಡು, ಎಂ.ಕೆ. ಹುಬ್ಬಳ್ಳಿ, ನಾಗನೂರ, ಬೆಳವಡಿ, ದೇಶನೂರ ಗ್ರಾಮಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.  

ಶುಕ್ರವಾರ 21 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

 

ಸುದ್ದಿ ಓದಿ