205 ಮಕ್ಕಳಿಗೆ ಉಚಿತ ಖತ್ನ ಕಾರ್ಯಕ್ರಮ
ಹೊಸಪೇಟೆ 27: ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಮುಂಜಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಅಂಜುಮನ್ ಕಮಿಟಿಯ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕ ಎಚ್. ಎನ್. ಎಫ್ ಮಹಮ್ಮದ ಇಮಾಮ್ ನಿಯಾಜಿ ರವರು ಹೇಳಿದರು.
ಪರ್ವಾಜ್ ಪ್ಲಾಜಾ ಬೇಸ್ಮೆಂಟ್ ಫ್ಲೋರ್ನಲ್ಲಿ ದಿ. 27ರಂದು ಎಚ್. ಮಹಮ್ಮದ ಇಮಾಂ ನಿಯಾಜಿ ರವರ ನೇತೃತ್ವದಲ್ಲಿ ನಡೆದ 13ನೇ ವರ್ಷದ ಸುನ್ನತಿ ಇಬ್ರಾಹಿಂ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿ ಭಗವಂತನ ಆದೇಶದ ಮೇರೆಗೆ ಸುಮಾರು 5500 ವರ್ಷಗಳ ಹಿಂದೆ ಹಜರತ್ ಇಬ್ರಾಹಿಂ ಖಲೀಲುಲ್ಲಾ ರವರು ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಖತ್ನಾ (ಮುಂಜಿ) ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದೆ ಎಂದಿದ್ದರು. ಹಾಗೂ ಇತ್ತೀಚೆಗೆ ವೈಜ್ಞಾನಿಕವಾಗಿಯೂ ಈ ಖತ್ನ ಕಾರ್ಯಕ್ರಮದಿಂದ ಭವಿಷ್ಯದಲ್ಲಿ ಯಾವುದೇ ರೋಗ ರುಜಿನಗಳು ಬರುವುದಿಲ್ಲವೆಂಬುದು ಸಾಬೀತು ಮಾಡಲಾಗಿರುತ್ತದೆ. ಈ ಆಚರಣೆಯನ್ನು ನಡೆಸಲು ಅರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಬಾಂಧವರಿಗೆ ಬಹಳ ಕಷ್ಟ ಸಾಧ್ಯವಾಗಿರುತ್ತದೆ, ಇಂತಹವರಿಗೆ ನೆರವಾಗಲು ಉಚಿತವಾದ ಖತ್ನ ಕಾರ್ಯಕ್ರಮವನ್ನು 13 ವರ್ಷಗಳಿಂದ ಹಮ್ಮಿಕೊಂಡು ಬರಲಾಗಿದ್ದು ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ದೇವರ ಕೃಪೆಯಿಂದ ಕೋವಿಡ್ ಇಲ್ಲದಿರುವ ಕಾರಣಕ್ಕೆ 205 ಮಕ್ಕಳಿಗೆ ಉಚಿತ ಖತ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಈ ಕಾರ್ಯಕ್ರಮದಲ್ಲಿ ಸುಮಾರು 205 ಮಕ್ಕಳು ಮುಂಜಿ ಕಾರ್ಯದ ಉಪಯೋಗವನ್ನು ಪಡೆದುಕೊಂಡಿದ್ದು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ಅನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಮಾಜಿ ನಗರಸಭಾ ಅಧ್ಯಕ್ಷ ಅಬ್ದುಲ್ ಖದೀರ್, ಅನ್ಸ್ಸರ್ ಬಾಷಾ, ಖಾಜಾ ಹುಸ್ಸೇನ್ ನಿಯಾಜಿ, ನಗರಸಭಾ ಸದಸ್ಯರಾದ ಅಬ್ದುಲ್ ಖಾದರ್, ಡಾ. ಖಾದರ್, ಬಾಬಾ ಮಿಯಾ, ಬಿ ಬಾಬಾ, ಅಫೀಸ್ ಸಾಬ್ ಗಳಾದ ಜಾಫರ್ ಸಾದಿಕ್, ನಾಸಿರ್, ಫೈರೋಜ್ ಸಾಬ್, ರೆಹೆಮಾನ್, ಜಫ್ರುಲ್ಲಾ ಖಾನ್, ನೂರಾರು ಪಾಲಕರು ಪೋಷಕರು ಉಪಸ್ಥಿತರಿದ್ದರು