ಕಿರಿಕ್ ಸುಂದರಿಗೆ ಅದೃಷ್ಟ ತಂದ 2020
ಬೆಂಗಳೂರು, ಡಿಸೆಂಬರ್ 28: ಸ್ಯಾಂಡಲ್ ವುಡ್ ಗೆ ತೀವ್ರ ಸಂಕಷ್ಟ, ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದ 2020
ಮುಕ್ತಾಯಕ್ಕೆ ಮೂರೇ ದಿನ ಬಾಕಿಯಿದೆ. ಆದಾಗ್ಯೂ ಈ
ವರ್ಷ ಎಲ್ಲರಿಗೂ ಮೋಸ ಮಾಡಿಲ್ಲ. ಹಲವರಿಗೆ ಹೊಸ ಅವಕಾಶಗಳ
ಹಾದಿ ತೆರೆಯಿಸಿದೆ.
ಇಂತಹ
ಹೊಸ ಅವಕಾಶ ಕಂಡುಕೊಂಡವರಲ್ಲಿ ನ್ಯಾಷನಲ್ ಕ್ರಷ್, ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ.
ದಕ್ಷಿಣ
ಭಾರತದ ಸಿನಿಮಾರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಬಾಲಿವುಡ್ ನತ್ತ ಹೆಜ್ಜೆ ಹಾಕಿದ್ದಾರೆ. ಮಿಷನ್
ಮಜ್ನು ಜತೆಗಿನ ಚಿತ್ರ ಮಾತ್ರವಲ್ಲದೆ, ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರಂತೆ.
ಅಮಿತಾಭ್
ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಕಡೆಯಿಂದ ಆಗಲಿ ಅಥವಾ ಸಿನಿಮಾತಂಡದ
ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಅಮಿತಾಬ್
ಮತ್ತು ರಶ್ಮಿಕಾ ಸಿನಿಮಾಗೆ ನಿರ್ದೇಶಕ ವಿಕಾಸ್ ಬಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬಾಲಿವುಡ್
ನಲ್ಲಿ ಕ್ವೀನ್, ಸೂಪರ್ 30 ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವಿಕಾಶ್, ಇದೀಗ ರಶ್ಮಿಕಾ
ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಡೆಡ್ಲಿ'
ಎನ್ನುವ ತಾತ್ಕಾಲಿಕ ಟೈಟಲ್ ಚಿತ್ರಕ್ಕೆ ತಾತ್ಕಾಲಿಕವಾಗಿ ಡೆಡ್ಲಿ ಎಂದು ಹೆಸರಿಡಲಾಗಿದೆ. ಈ ಸಿನಿಮಾ
ಅಪ್ಪ ಮತ್ತು ಮಗಳ ಸಂಬಂಧದ ಬಗ್ಗೆ ಇರುವ ಕಥೆಯಾಗಿದೆ. ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾಗೆ ರಿಲಯನ್ಸ್
ಎಂಟರ್ ಟೈನ್ ಮೆಂಟ್ ನಿರ್ಮಾಣ ಮಾಡುತ್ತಿದೆ. ಸದ್ಯ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಜೋರಾಗಿ ನಡೆಯುತ್ತಿದ್ದು,
ಸಿನಿಮಾ ಮುಂದಿನ ವರ್ಷ 2021ರಲ್ಲಿ ಸೆಟ್ಟೇರಲಿದೆಯಂತೆ.
ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ. 1970ರ ಕಾಲಘಟ್ಟದ ನೈಜ ಘಟನೆಯಿಂದ ಪ್ರೇರೇಪಿತಗೊಂಡಿದ್ದು, ಪಾಕಿಸ್ತಾನದಲ್ಲಿ ಭಾರತದ ಅತ್ಯಂತ ಧೈರ್ಯಶಾಲಿ ರಾ ಕಾರ್ಯಚರಣೆ ಬಗ್ಗೆ ಇರುವ ಸಿನಿಮಾವಾಗಿದೆ.
ಒಟ್ಟಾರೆ 2020 ರಶ್ಮಿಕಾಗೆ ಅದೃಷ್ಟ ತಂದುಕೊಟ್ಟಿದ್ದು, 2021ರಲ್ಲೂ ಮತ್ತಷ್ಟು ಯಶಸ್ಸು ಸಿಗುವ ಸೂಚನೆಯಿತ್ತಿದೆ.