2020ರ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಿವರು ...!
ಚೆನ್ನೈ, ಡಿ 14: ಈಗ ಸೋಷಿಯಲ್ ಮೀಡಿಯಾ ಯುಗದ ಹವಾ
ಜೋರು... ತಮ್ಮ ಅಚ್ಚು ಮೆಚ್ಚಿನ ವ್ಯಕ್ತಿಗಳ ಕುರಿತು
ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುವುದು,
ಹ್ಯಾಶ್ಟ್ಯಾಗ್ಗಳೊಂದಿಗೆ ಪೋಸ್ಟ್ ಮಾಡುವುದು ನೆಟಿಜನ್ ಗಳಿಗೆ ಒಂದು ಅಭ್ಯಾಸವಾಗಿಬಿಟ್ಟಿದೆ. ಈ ಅವಧಿಯಲ್ಲಿ ಯಾವ ಹೀರೋಗಳು, ಹೀರೋಯಿನ್ ಗಳ ಕುರಿತು ಟ್ವೀಟರ್ ನಲ್ಲಿ
ಹೆಚ್ಚು ಚರ್ಚೆ ನಡೆದಿದೆ. ಯಾರ ಹೆಸರಿನಲ್ಲಿ ಹೆಚ್ಚು ಟ್ವೀಟ್ ಮಾಡಿದ್ದಾರೆ ಎಂಬುದನ್ನು ಟ್ವಿಟರ್ ಅಧಿಕೃತವಾಗಿ ಪ್ರಕಟಿಸಿದೆ. 'ನೀವೆಲ್ಲರೂ ಕಾಯುತ್ತಿದ್ದ
ಕ್ಷಣ ಬಂದೇಬಿಟ್ಟಿದೆ..! . 2020 ರಲ್ಲಿ ಹೆಚ್ಚು
ಟ್ವೀಟ್ ಮಾಡಿದ ದಕ್ಷಿಣ ಭಾರತ ಸೂಪರ್ ಸ್ಟಾರ್ ಗಳು
ಇವರೇ ಎಂದು ಟಾಪ್ -10 ಪಟ್ಟಿಯನ್ನು ಟ್ವಿಟರ್ ಇಂಡಿಯಾ ಹಂಚಿಕೊಂಡಿದೆ.
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್ 2 ನೇ ಸ್ಥಾನದಲ್ಲಿದ್ದಾರೆ. ತಮಿಳು ಸೂಪರ್ಸ್ಟಾರ್ ವಿಜಯ್ 3 ನೇ, ಎನ್ ಟಿ ಆರ್ 4ನೇ ಹಾಗೂ ಸೂರ್ಯ 5 ನೇ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ನಾಯಕಿನಟಿಯರ ವಿಷಯದಲ್ಲಿ .. ಕೀರ್ತಿ ಸುರೇಶ್ ಪ್ರಥಮ ಸ್ಥಾನ, ಕಾಜಲ್, ಸಮಂತಾ, ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ನಂತರ ಸ್ಥಾನದಲ್ಲಿರುವುದು ವಿಶೇಷ.