ಬೈಲಹೊಂಗಲ ತಾಲೂಕಿನಲ್ಲಿ 20 ಜನರಿಗೆ ಕೊರೊನಾ
ಬೈಲಹೊಂಗಲ: ಪಟ್ಟಣದಲ್ಲಿ 4 ಸೇರಿದಂತೆ ತಾಲೂಕಿನಲ್ಲಿ 20 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಪಟ್ಟಣದ ವಿದ್ಯಾನಗರದ 57 ವರ್ಷದ ಪುರುಷ, ಪೊಲೀಸ್ ಕ್ವಾಟರ್ಸ್ನ 75 ವರ್ಷದ ವೃದ್ಧ, ಬಾಗವಾನ ಚಾಳದ 4ನೇ ಅಡ್ಡ ರಸ್ತೆಯ 65 ವರ್ಷದ ಪುರುಷ ಹಾಗೂ ತಾಲೂಕಿನ ಗೋವನಕೊಪ್ಪದಲ್ಲಿ 5, ಮೂಗಬಸವ 2, ನಯಾನಗರ 2, ಎಂ.ಕೆ.ಹುಬ್ಬಳ್ಳಿ 2, ದೊಡವಾಡ, ಚಿಕ್ಕಬೆಳ್ಳಿಕಟ್ಟಿ, ಗುಡಿಕಟ್ಟಿ, ಆನಿಗೋಳ, ಉಡಿಕೇರಿಯಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿವೆ. ಸೋಮವಾರ ಪೇಟೇಯ ವಡ್ಡರ ಚಾಳದ 61 ವರ್ಷದ ವ್ಯಕ್ತಿ ಮೃತರಾಗಿದ್ದು, 26 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.