ಪುಲ್ವಾಮಾ : ಎಲ್ಇಟಿ ಉಗ್ರ ಸಂಘಟನೆಯ 2 ಅಡಗುದಾಣ ಪತ್ತೆ
ಶ್ರೀನಗರ, ಆಗಸ್ಟ್ 13: ಭದ್ರತಾ
ಪಡೆಗಳು ಲಷ್ಕರೆತೊಯ್ಬಾ ಉಗ್ರ ಸಂಘಟನೆಯ ಎರಡು
ಅಡಗುತಾಣಗಳನ್ನು ಪತ್ತೆ ಹಚ್ಚಿವೆ. ದಕ್ಷಿಣ
ಕಾಶ್ಮೀರ ಜಿಲ್ಲೆಯಲ್ಲಿನ ಪುಲ್ವಾಮಾದಲ್ಲಿ ಯುದ್ಧ ಸಾಮಗ್ರಿಗಳು ತುಂಬಿದ್ದಂತಹ
ಮಳಿಗೆಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ವಕ್ತಾರರು
ಗುರುವಾರ ತಿಳಿಸಿದ್ದಾರೆ.
ಉಗ್ರರ ಉಪಸ್ಥಿತಿ ಮತ್ತು ಅವರ ಅಡಗುತಾಣಗಳ ಕುರಿತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ, ರಾಷ್ಟ್ರೀಯ ರೈಫಲ್ಸ್ , ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಸಿಆರ್ಪಿಎಫ್ ಪುಲ್ವಾಮಾದ ಬದ್ರೂ ಬಾರ್ಸೂದಲ್ಲಿ ಕಾಡಿನಲ್ಲಿ ಬುಧವಾರ ರಾತ್ರಿ ಶೋಧ ಕಾರ್ಯ ಪ್ರಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ ನಸುಕಿನಲ್ಲಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಎಲ್ಇಟಿಗೆ ಸೇರಿದ ಎರಡು ಅಡಗುತಾಣಗಳನ್ನು ಧ್ವಂಸಗೊಳಿಸಿದ್ದು,
1918 ಎಕ ರೈಫಲ್, ಮದ್ದು ಗುಂಡುಗಳು, ಎರಡು ಗ್ರೆನೇಡ್ಗಳು, 4 ಯುಬಿಜಿಎಲ್ ಗ್ರೆನೇಡ್ಗಳಲ್ಲದೆ ಅಮೋನಿಯಂ ನೈಟ್ರೇಟ್, ಜೆಲೆಟಿನ್ ಕಡ್ಡಿಗಳು, ಕಚ್ಚಾ ಪೈಪ್ ಬಾಂಬ್ ಮತ್ತು ಕೋಡ್ ಶೀಟ್ಗಳನ್ನು ಒಳಗೊಂಡಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆದರೆ, ಕಾರ್ಯಾಚರಣೆಗೆ ಮುನ್ನ ಉಗ್ರರು ತಪ್ಪಿಸಿಕೊಂಡಿದ್ದರಿಂದ ಯಾರನ್ನೂ ಬಂಧಿಸಲಾಗಿಲ್ಲ.
ಸ್ಫೋಟಕ ವಸ್ತು ಕಾಯ್ದೆ, 7/25 ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವಂತಿಪೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.