ರಾಷ್ಟ್ರೀಯ

ರಾಯಗಢ ಕಟ್ಟಡ ಕುಸಿತ; 19 ಜನರು ನಾಪತ್ತೆ

ರಾಯಗಢ ಕಟ್ಟಡ ಕುಸಿತ; 19 ಜನರು ನಾಪತ್ತೆ

ಥಾಣೆ,  ಆಗುಸ್ಟ್ 25: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹದ್‌ ಪ್ರದೇಶದಲ್ಲಿ ಆರು ಮಹಡಿ ಕಟ್ಟಡ  ಕುಸಿತದಲ್ಲಿ 19 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು  ವಿಪತ್ತು ನಿರ್ವಹಣಾ ಸಮಿತಿ (ಡಿಡಿಎಂಸಿ) ಮಂಗಳವಾರ ತಿಳಿಸಿದೆ.

ಈ ನಡುವೆ, ಥಾನೆ ಸ್ಥಳೀಯ ಆಡಳಿತದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯವನ್ನು ಪರಿಶೀಲಿಸುತ್ತಿದ್ದಾರೆ. ಸೋಮವಾರ ಸಂಜೆ ಕಟ್ಟಡ ನೆಲಕಚ್ಚಿತ್ತು. 

ಎನ್‌ಡಿಆರ್‌ಎಪ್‌ನ ಮೂರು ತಂಡಗಳು, ಮತ್ತು ಜಿಲ್ಲೆಯ ಇತರ ತಂಡಗಳಿಂದ ತ್ವರಿತ ರಕ್ಷಣಾ ಕಾರ್ಯ ನಡೆಯುತ್ತಿದೆ.

ಇಲ್ಲಿಯವರೆಗೆ ಕಟ್ಟಡದ ಅವಶೇಷಗಳಿಂದ 8 ಮಂದಿಯನ್ನು ಹೊರತೆಗೆಯಲಾಗಿದೆ. ಈಪೈಕಿ ಓರ್ವ ಮೃತಪಟ್ಟಿದ್ದು, ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಬೇಕು.

ಸುದ್ದಿ ಓದಿ