ಭಾರತೀಯ ರೈಲ್ವೆಗೆ 173 ವರ್ಷ-ಗದಗ ರೈಲ್ವೆಗೆ 143 ವರ್ಷಗಳ ಸಂಭ್ರಮ
173 years of Indian Railways - 143 years of celebration for Gadag Railway
ಲೋಕದರ್ಶನ ವರದಿ
(ಎ. 16 ರಂದು ಭಾರತೀಯ ರೈಲ್ವೆಗೆ 172 ವರ್ಷ ಪೂರ್ಣಗೊಂಡ ನಿಮಿತ್ತ ಲೇಖನ)
ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ನಡೆದ ಹಲವು ಶೋಧಗಳಲ್ಲಿ ರೈಲು ಇಂಜಿನ್ ಕೊಡ ಮುಖ್ಯವಾದದ್ದು. ಆರಂಭದಲ್ಲಿ ಸರಕು ಸೇವೆಗೆ ಅದನ್ನು ಬಳಸಿಕೊಂಡರೂ ಕೆಲವೇ ಸಮಯದಲ್ಲಿ ಪ್ರಯಾಣಿಕ ವಾಹನವನ್ನಾಗಿ ಅದನ್ನು ಪರಿವರ್ತಿಸಲಾಯಿತು.
ಭಾರತೀಯ ರೈಲಿನ ಯಾತ್ರೆಯ ಕನಸು ಕಂಡವರು ಬಾಂಬೆ ಸರಕಾರದ ಮುಖ್ಯ ಇಂಜನಿಯರ್ ಆಗಿದ್ದ ಜಾರ್ಜ್ ಕ್ಲಾರ್ಕ್ ಭಾರತದ ಮೊದಲ ರೈಲು 1853 ಎಪ್ರಿಲ್ 16ರಂದು ಮುಂಬಯಿ ಠಾಣೆಗಳ ನಡುವಿನ 21 ಮೈಲು ಸಂಚಾರ ನಡೆಸಿತು. ಮುಂಬಯಿಯ ಭೋರಿಬಂದರ್‌ನಿಂದ 14 ಬೋಗಿಗಳಲ್ಲಿ, 400 ಅತಿಥಿಗಳನ್ನು ಹೊತ್ತ ರೈಲು ಅಂದು ಮಧ್ಯಾಹ್ನ 3.30ಕ್ಕೆ ಸಂಚಾರ ಆರಂಭಿಸಿತು. ಕೇವಲ ಅತಿಥಿಗಳನ್ನು ಹೊತ್ತ ರೈಲು ಇದಾಗಿದ್ದರಿಂದ ಸಾರ್ವಜನಿಕರಿಗೆ ಇದರಲ್ಲಿ ಅವಕಾಶವಿರಲಿಲ್ಲ.
ಆದರೆ, 1854ರ ಆಗಸ್ಟ್ 15ರಂದು. ಕೋಲ್ಕತ್ತದ ಹೌರಾ ನಿಲ್ದಾಣದಿಂದ ಹೊಗ್ಲಿಗೆ 24 ಮೈಲು ಸಂಚರಿಸಿದ ಇಸ್ಟ ಇಂಡಿಯಾ ಕಂಪನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೆಲವೇ ವರ್ಷಗಳಲ್ಲಿ ಭಾರತದ ಎಲ್ಲಾ ಮಹತ್ವ ಪಟ್ಟಣಗಳಿಗೂ ರೈಲು ಸಂಪರ್ಕ ದೊರಕಿತು. ಸ್ವತಂತ್ರಾ ನಂತರ 1951 ರಲ್ಲಿ ಭಾರತ ಸರಕಾರ ರೈಲು ಜಾಲವನ್ನು ರಾಷ್ಟ್ರೀಕರಿಸಿತು.
ಗದಗ ನಗರಕ್ಕೆ 1882ರಲ್ಲಿ ರೈಲು ಸಂಚಾರ ಆರಂಭವಾಯಿತು. ಗದಗ-ಬೆಟಗೇರಿ ಅವಳಿ ನಗರಕ್ಕೆ ರೈಲು ಬಂದು ಇಂದಿಗೆ 143 ವರ್ಷಗಳಾಗಿದ್ದು ಇಂದು ನಮಗೆಲ್ಲ 143 ರ ಸಂಭ್ರಮಾಚರಣೆ ದಿನವಾಗಿದೆ.
ಗದಗ ನಿಲ್ದಾಣವು ಜಂಕ್ಷನ್ ಆಗಿದ್ದು ಗುಂತಕಲ್ಲ ವಾಸ್ಕೊಡ್ ಗ್ರಾಮಗಳಿಗಲ್ಲದೇ ಹುಟಗಿಗೆ ಸಂಪರ್ಕ ಕಲ್ಪಿಸುವ ಮುಖ್ಯ ನಿಲ್ಲಾಣವಾಗಿದೆ. ಸದ್ಯ ಇಲ್ಲಿ ಮೂರು ಪ್ಲಾಟ್‌ಫಾರ್ಮಗಳಿದ್ದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಮತ್ತಿತರ - ಸಂಘಟನೆಗಳ ಒತ್ತಾಸೆಯ ಮೇರೆಗೆ ಇಲ್ಲಿ ಪ್ರಯಾಣಿಕರಿಗೆ ಗದಗ ರೈಲು ನಿಲ್ದಾಣ ಮಾರ್ಗವಾಗಿ ಗುಂತಕಲ್ಲ ಹಾಗೂ ಹೊಟಗಿ ಮಾರ್ಗಗಳು ವಿದ್ಯುತ್ತೀಕರಣ, ಜೋಡಿ ಮಾರ್ಗಗಳು, ಗದಗ ರೈಲು ನಿಲ್ದಾಣದಲ್ಲಿ ಲಿಪ್ಟ್ ಸೇವೆ ಎಸ್ಟೇಲೇಟರ್ ಸೇವೆ, ಪ್ರತಿನಿತ್ಯ ಗದಗ ಮಾರ್ಗವಾಗಿ ಸುಮಾರು 60ಕ್ಕೂ ಹೆಚ್ಚು ರೈಲುಗಳು ಸಂಚುಸುತ್ತಿರುವುದು ಸೇರಿದಂತೆ ಹಲವು ಸೌಲಭ್ಯಗಳು ದೊರಕಿವೆ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ ಹಲವು ಮಹತ್ವದ ರೈಲುಗಳು ಗದಗ ನಗರದ ಮೂಲಕ ಹಾದು ಹೋಗುತ್ತವೆ.
ಆರಂಭದಲ್ಲಿ ನ್ಯಾರೋಗೇಜ್ ಇದ್ದದ್ದು ನಂತರ ಮೀಟರ್ ಗೇಜ್ ಆಗಿ ಇತ್ತೀಚಿಗೆ ಬಹುತೇಕ ಮಾರ್ಗಗಳೆಲ್ಲಾ ಬ್ರಾಡ್ ಗೇಜಿಗೆ ಬದಲಾಗಿವೆ. ಇತ್ತೀಚೆಗೆ ಮೆಟ್ರೋ ರೈಲು ಓಡುತ್ತಿದೆ. ಬುಲೆಟ್ ರೈಲು, ವಂದೇ ಭಾರತ ರೈಲು ಓಡುತ್ತಿವೆ.
ಮೊದಲು ಕಲ್ಲಿದ್ದಲು ಉರಿಸಿ ಉಗಿಯಿಂದ ಓಡುತ್ತಿದ್ದ ರೈಲು ಇಂಜೆನ್ ನಂತರ ಡಿಸೆಲ್‌ಗೆ ಬದಲಾಗಿ ಇತ್ತೀಚೆಗೆ ವಿದ್ಯುತ್ ಚಾಲಿತ ರೈಲು ಇಂಜಿನುಗಳು ತಮ್ಮವೇಗವನ್ನು ವರ್ಧಿಸಿಕೊಂಡಿವೆ. ಪ್ರಯಾಣಿಕರ ಸಂಚಾರದ ಜೊತೆಗೆ ಸರಕು ಸಾಗಾಣಿಕೆ, ಆಹಾರ ಪೂರೈಕೆ ಅಲ್ಲದೆ ಪ್ರವಾಸೋದ್ಯಮ ಹಿನ್ನೆಲೆಯ ರೈಲುಗಳೂ ಸಂಚರಿಸುತ್ತಿವೆ. ಭಾರತದಲ್ಲಿ ಇದೀಗ ಒಟ್ಟು 16 ರೈಲು ವಲಯಗಳಿವೆ. ತುಂಬಾ ಹೋರಾಟದ ನಂತರ ನೈರುತ್ಯ ರೈಲು ವಲಯ ನಮ್ಮ ಹುಬ್ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಭಾರತೀಯ ರೈಲು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತೀಯ ರೈಲು ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದ್ದು, 7,172 ರೈಲು ನಿಲ್ದಾಣಗಳು 1.15 ಲಕ್ಷ ಕಿಲೋಮೀಟರ್ ಉದ್ದದ 65,436 ಕಿ.ಮಿ. ಉದ್ದದ ರೈಲು ಮಾರ್ಗಗಳಲ್ಲಿ ಪ್ರತಿನಿತ್ಯ 12,617 ರೈಲುಗಳು ಓಡುತ್ತಿವೆ. ಭಾರತೀಯ ರೈಲಿನಲ್ಲಿ ಪ್ರತಿವರ್ಷ 85 ಕೋಟಿ ಜನ ಸಂಚರಿಸುತ್ತಾರೆ. ಅಲ್ಲದೇ ವರ್ಷದಲ್ಲಿ 10,502 ಲಕ್ಷ ಟನ್ ಸರಕು ಸಾಗಾಣಿಕೆಯಾಗುತ್ತದೆ.
ಹಿಮಸಾಗರ ಎಕ್ಸಪ್ರೆಸ್ ಹೆಸರಿನ ರೈಲು ಕನ್ಯಾಕುಮಾರಿಯಿಂದ ಜಮ್ಮುವಿಗೆ ಒಟ್ಟು 3745ಕಿ.ಮಿ. ಗಳನ್ನು ಸುಮಾರು 76 ಗಂಟೆಗಳಲ್ಲಿ ಕ್ರಮಿಸುತ್ತದೆ. ಇದು ಭಾರತದ ಅತಿ ಉದ್ದದ ದಾರಿ ಕ್ರಮಿಸುವ ರೈಲಾಗಿದೆ. ದೆಹಲಿ ನಿಜಾಮುದ್ದಿನ ಮತ್ತು ತ್ರಿವೆಂದ್ರಮ್‌ನ ನಡುವೆ ಸಂಚರಿಸುವ ತ್ರಿವೆಂದ್ರಮ್ ರಾಜಧಾನಿ ರೈಲು ವಡೋದರಾ ಮತ್ತು ಕೋಟಾ ಸ್ಟೇಷನ್‌ಗಳ ನಡುವಿನ 528 ಕಿಲೋಮೀಟರ್ ದೂರವನ್ನು ಒಂದೂ ತಡೆಯಿಲ್ಲದೆ ಸುಮಾರು ಆರೂವರೆ ಗಂಟೆಗಳಲ್ಲಿ ತಲುಪುತ್ತದೆ. ಬೋಪಾಲ್ ಶತಾಬ್ಬಿ ಎಕ್ಸಪ್ರೆಸ್ ರೈಲು ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಧಾವಿಸುತ್ತದೆ.
ಹೀಗೆ ಆಧುನಿಕ ಜಗತ್ತಿನ ವಿಸ್ಮಯವೆನಿಸಿರುವ ಭಾರತೀಯ ರೈಲಿಗೆ ಇಂದು 173ನೇ ಸಂಭ್ರಮದ ದಿನ ಬರುವ ದಿನಗಳಲ್ಲಿ ಇನ್ನಷ್ಟು ಆಧುನಿಕವಾಗಿ ಭಾರತೀಯ ಪ್ರಯಾಣಿಕರಿಗೆ ಹಲವು ರೀತಿಯ ಆನುಕೂಲತೆಗಳನ್ನು ಮಾಡಿಕೊಡಲಿ, ಜನಮೆಚ್ಚಿನ ಸಾರಿಗೆ ಸಂಪರ್ಕ ವ್ಯವಸ್ಥೆಯಾದ ರೈಲು, ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸೋಣ. "
ಗದಗ ರೈಲು ನಿಲ್ದಾಣ ಉನ್ನತ ದರ್ಜೆಗೆ ಏರಿ ಸುಮಾರು 133 ಕೋಟಿ. ರೂ.ಗಳು ಅತ್ಯಾಧುನಿಕ ರೈಲು ನಿಲ್ದಾಣ ಸಿದ್ಧಗೊಂಡಿರುವುದು ನಮಗೆಲ್ಲ ಸಂತಸ. 16 ರಂದು ಬೆಳಿಗ್ಗೆ ರೇಲ್ವೆ ಹೋರಾಟ-ಸಮಿತಿಯಿಂದ ಗದಗ ರೈಲು ನಿಲ್ದಾಣದಲ್ಲಿ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ.
ಗಣೇಶಸಿಂಗ್ ಬ್ಯಾಳಿ, ಅಧ್ಯಕ್ಷರು
ಬೆಟಗೇರಿ ರೇಲ್ವೆ ಹೋರಾಟ ಸಮಿತಿ, ಗದಗ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 