17 ಸಂಸದರಿಗೆ ಕೊರೊನಾ ಪಾಸಿಟಿವ್
ನವದೆಹಲಿ,ಸೆಪ್ಟೆಂಬರ್ 14: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ಮುಂದುವರಿದಿದೆ. ಶ್ರೀಸಾಮಾನ್ಯನಿಂದ ಹಿಡಿದು ಪ್ರಮುಖವರೆಗೆ ಎಲ್ಲರನ್ನೂ ಸೋಂಕು ವ್ಯಾಪಿಸುತ್ತಿದೆ.
ಹೊಸದಾಗಿ 17 ಮಂದಿ ಸಂಸದರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ ಹಿನ್ನಲೆಯಲ್ಲಿ ಈ ತಿಂಗಳ 13 ರಂದು ಲೋಕಸಭೆ, ರಾಜ್ಯಸಭೆ ಸದಸ್ಯರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ..ವರದಿಗಳು ಬಂದಿವೆ. ಈ ಪೈಕಿ 17 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಸೋಂಕಿಗೆ ಒಳಗಾದವರಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರಿದ 12 ಮಂದಿ.. ವೈ ಸಿ ಪಿಯ ಇಬ್ಬರು, ಶಿವಸೇನ, ಡಿಎಂಕೆ, ಆರ್ ಎಲ್ ಪಿ ಪಕ್ಷದ ತಲಾ ಒಬ್ಬ ಸಂಸದರಿಗೆ ಕೊರೊನಾ ಪಾಸಿಟಿವ್ ನಿರ್ಧರಣೆಗೊಂಡಿದೆ.
ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಇಬ್ಬರು ಸಂಸದರಾದ ಮಾಧವಿ, ರೆಡ್ಡೆಪ್ಪ ಸೋಂಕಿಗೆ ಒಳಗಾಗಿದ್ದಾರೆ. ಸಂಸತ್ತಿನ ಮಳೆಗಾಲದ ಅಧಿವೇಶನ ಹಿನ್ನಲೆಯಲ್ಲಿ ಎಲ್ಲ ಸದಸ್ಯರೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಲೋಕಸಭೆ ರಾಜ್ಯಸಭೆ ಸಚಿವಾಲಯ ನಿಬಂಧನೆ ವಿಧಿಸಿತ್ತು. ಇದರಿಂದ ಸಂಸತ್ ಭವನದ ದ್ವಾರದ ಬಳಿ ಸದಸ್ಯರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 17 ಮಂದಿಗೆ ವೈರಸ್ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.