ರಾಣೆಬೆನ್ನೂರ

ಕುಮಾರಸ್ವಾಮಿಗಳ ಮಠಕ್ಕೆ ನೂತನ ರಥ ಲೋಕಾರ್ಪಣೆ

ಕುಮಾರಸ್ವಾಮಿಗಳ ಮಠಕ್ಕೆ ನೂತನ ರಥ ಲೋಕಾರ್ಪಣೆ

ಮಹಿಳೆಯರಿಗೆ ಶೇ.50 ಮೀಸಲಾತಿ ಹಾನಗಲ್ಲ ಕುಮಾರಸ್ವಾಮಿಗಳು ಸಾಧಿಸಿದ್ದರು-ಮುಂಡರಗಿ ಜಗದ್ಗುರುಗಳು

ರಾಣೀಬೆನ್ನೂರ 07: ಜಂಗಮ ಕ್ಷೇತ್ರ ಖ್ಯಾತಿಯ ಹಾನಗಲ್ಲ ಕುಮಾರಮಹಾಸ್ವಾಮಿಗಳವರ ತಪೋಭೂಮಿ ಜೋಯಿಸರ ಹರಳಹಳ್ಳಿ ಗ್ರಾಮದಲ್ಲಿ  ಇತ್ತೀಚೆಗೆ ಕುಮಾರಶ್ರೀಗಳವರ 154ನೇ ಜಯಂತ್ಯೋತ್ಸವ ಹಾಗೂ ನೂತನ ರಥ ಲೋಕಾರ್ಪಣೆ ಧಾರ್ಮಿಕ ಕಾರ್ಯಕ್ರಮ ಜರು ಗಿತು. 

ದಿವ್ಯ ಸಾನಿದ್ಯ ವಹಿಸಿದ್ದ ಮುಂಡರಗಿ ಜಗದ್ಗುರು  ಅನ್ನದಾನೀಶ್ವರ ಮಹಾಸ್ವಾಮಿ ಗಳು, ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳು, ರಟ್ಟೀಹಳ್ಳಿ ಶಿವಲಿಂಗ ಸ್ವಾಮಿಗಳು, ಲಿಂಗನಾಯಕನ ಹಳ್ಳಿ ಪ್ರ.ಚನ್ನವೀರ ಸ್ವಾಮಿಗಳು, ಗೋಡಗೇರಿಯ ಕಾಶೀನಾಥ ಸ್ವಾಮಿಗಳು ಸಹ ಸ್ರಾರು ಭಕ್ತರ ಹರ್ಷೋದ್ಗಾರ ಗಳ ಮದ್ಯ ನೂತನ ರಥವನ್ನು ಎಳೆದು ಪ್ರಥಮ ರಥೋತ್ಸವಕ್ಕೆ ಚಾಲನೆ ನೀಡಿದರು. 

ನಂತರ ನಡೆದ ಧಾರ್ಮಿಕ ಸಭೆಯಲ್ಲಿಶಿವಲಿಂಗಸ್ವಾಮಿಗಳು ಸಂದೇಶಾಮೃತ ನೀಡಿ ಲಿಂ.ಹಾನ ಗಲ್ಲ ಕುಮಾರಸ್ವಾಮಿಗಳ ಕತೃತ್ವ ಶಕ್ತಿ ಅಪಾರವಾಗಿದ್ದರಿಂದಲೇ ಭವ್ಯ ರಥ ನಿರ್ಮಾಣಗೊಂಡು ಇಂದು ರಥೋತ್ಸವ ನಡೆದಿರು ವುದೇ ಸಾಕ್ಷಿ ಎಂದರು. ಕಾಶೀನಾಥ ಸ್ವಾಮಿಗಳು ಮಾತನಾಡಿ ಕುಮಾರಸ್ವಾಮಿಗಳು ಜನ್ಮ ತಾಳಿದ ಈ ಭೂಮಿ ಪುಣ್ಯ ಭೂಮಿ ಇಲ್ಲಿ ಪೂಜ್ಯರ ಮಠ ನಿರ್ಮಾಣ ಗೊಂಡಿದೆ. ಪೂಜ್ಯರು 63 ವರ್ಷ ಬದುಕಿದ್ದರಿಂದ 63 ಅಡಿ ಗೋಪುರವನ್ನು ಮಠಕ್ಕೆ ನಿರ್ಮಿಸಲಾಗಿದ್ದು 63 ದಿನದಲ್ಲಿ ರಥದ ನಿರ್ಮಾಣವನ್ನು ಕಲಾವಿದ ಚನ್ನಪ್ಪ ಬಡಿಗೇರ ಅವರು ನಿರ್ಮಿಸಿರುವುದು ಕುಮಾರ ಸ್ವಾಮಿಗಳು ಪವಾಡ ಪುರುಷರು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು. ಉದಾರದಾನಿ ಚೌಡಪ್ಪಳವರ ಕುಟುಂಬದವರ ಭಕ್ತಿಸೇವೆ ಅತ್ಯಂತ ಪ್ರಶಂಸನೀಯ ವಾಗಿದೆ.  ಕುಮಾರಸ್ವಾಮಿಗಳ ತೇರು ಸಮಾಜದ ತೇರಾಗಿ ಸದಾ ಕಾಲ ಪ್ರಜ್ವಲಿಸಲಿ ಎಂದು ಆಶಿಸಿದರು. 

ಸಭೆಯ ಅಧ್ಯಕ್ಷತೆ ವಹಿ ಸಿದ್ದ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಮಾತನಾಡಿ ಲಿಂ.ಸದಾಶಿವ ಸ್ವಾಮಿ ಗಳು ಲಿಂಗೈಕ್ಯರಾದಾಗ ಈ ತಪೋ ಭೂಮಿಗೆ ಧಾರವಾಡದ ಲಿಂ. ಮಹಂತಪ್ಪಗಳು ನಮ್ಮನ್ನು ಕರೆದು ಕೊಂಡು ಬಂದಿದ್ದರು. ಲಿಂ. ಕುಮಾರ ಸ್ವಾಮಿಗಳ ಮಠ ನಿರ್ಮಿ ಸುವ ಸಂಕಲ್ಪವಿದ್ದುದರಿಂದ ಎಲ್ಲ ಮಠದ ಮಠಾಧೀಶರು 1000 ರೂ.ನಂತೆ ದೇಣಿಗೆ ಸಂಗ್ರಹಿಸಿ 50 ಸಾವಿರ ರೂ.ದೇಣಿಗೆಯನ್ನು ನೀಡಿ ದ್ದೆವು. ಮಠ ನಿರ್ಮಾಣಗೊಂಡು ಈಗ ನೂತನ ರಥದಿಂದ ರಥೋ ತ್ಸವ ಜರುಗಿಸುತ್ತಿರುವುದು ಶ್ಲಾಘನೀಯವಾಗಿದ್ದು ಇಲ್ಲಿಯ ಭಕ್ತರು ದೇಹವನ್ನೇ ದೇಗುಲ ಮಾಡಿ ಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈ ರಥ ಆಧ್ಯಾತ್ಮಿಕತೆಯಿಂದ ಕೂಡಿದ್ದು ಗೋಡಗೇರಿ ಶ್ರೀಗಳ ಸೇವೆ ಅಪಾರವಾಗಿದೆ.  ಕುಮಾರ ಸ್ವಾಮಿಗಳ ಮೇಲೆ ಇರುವ ಭಯ ಭಕ್ತಿಗೆ ಎಲ್ಲೆಯೇ ಇಲ್ಲದಂತಾಗಿದೆ. ಕುಮಾರ ಶ್ರೀಗಳ ತಾಯಿಯ ಊರು ಈ ಪುಣ್ಯ ಭೂಮಿ ಯಾಗಿದ್ದು ಈಗ ಸರ್ಕಾರ ಮಹಿಳೆ ಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದು ಐತಿಹಾಸಿಕ ನಿರ್ಧಾರ ವನ್ನು ಲಿಂ. ಕುಮಾರ ಸ್ವಾಮಿಗಳು  ಅಂದು ಮಹಿಳೆಯರಿಗಾಗಿಯೇ ಪ್ರತ್ಯೇಕ ಧರ್ಮಸಭೆ ನೆರವೇರಿಸಿ ಮಹಿಳೆಯರಿಗೆ ಸಮಾನತೆ ನೀಡಿ ದ್ದರು. ಎಲ್ಲ ಮಹಿಳೆಯರು ಮೀಸ ಲಾತಿಯ ಪ್ರಯೋ ಜನ ಪಡೆದು ಕೊಳ್ಳಬೇಕು. ತಾವು ಅಧಿಕಾರ ನಡೆಸುವಂತವರಾಗಿ ದೇಶದ ಅಭಿವೃದ್ಧಿ ಸಾಧಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಡಿ.ಎಸ್.ಪಾಟೀಲ, ನ್ಯಾಯವಾದಿ ಶಿವಕುಮಾರ ಮುದ್ದ ಪ್ಪಳವg,À ನಗರಯೋಜನಾ ಪ್ರಾದಿ üಕಾರದ ಅಧ್ಯಕ್ಷ ಚೋಳಪ್ಪ ಕಸ ವಾಳ, ವರ್ತಕರಾದ ಜಿ.ಜಿ. ಹೊಟ್ಟಿ ಗೌಡ್ರ, ಎ.ಎನ್.ಹೊಟ್ಟಿಗೌಡ್ರ, ಆರ್.ಎಚ್. ಕುಂಚೂರ, ಗದಿಗೆಪ್ಪ ಮುದ್ದಪ್ಪಳವರ, ಮಾದೇವಪ್ಪ ಕಡ್ಲೇರ ಮತ್ತಿತರ ಗಣ್ಯರು ಉಪ ಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹುತಾತ್ಮರ ತಂದೆ ಕರಿಯಪ್ಪ ಶಿರಗಂಬಿ, ನಿವೃತ್ತ ಯೋಧ ಬಸವ ರಾಜ ಕನ್ನಗೌಡ್ರ, ಅರ್ಚಕ ಗದಿ ಗೆಯ್ಯ ಸಾಲಿಮಠ, ರಥದ ನಿರ್ಮಾತೃ ಚನ್ನಪ್ಪ ಬಡಿಗೇರ, ಪುರಾಣ ಪ್ರವಚನಕಾರÀ ಶಿವಾ ನಂದೀಶ್ವರ ಶಾಸ್ತ್ರಿಗಳು, ಆರ್.ಮಲ್ಲಿ ಕಾರ್ಜುನ, ಅ ಭಾ ವೀರಶೈವ ಮಹಾಸಭಾ ಘಟಕದ ತಾ.ಅಧ್ಯಕ್ಷ ಕೆ.ಎನ್.ಕೋರಧಾನ್ಯಮಠ ಕಾರ್ಯದರ್ಶಿ ಚಂದ್ರಣ್ಣ ಸೊಪ್ಪಿನ, ದಾನಿಗಳಾದ ಚೌಡಪ್ಪಳವರ ಕುಟುಂಬದವರನ್ನು ಸನ್ಮಾನಿಸ ಲಾಯಿತು.  ಪ್ರವೀಣ ಮಳೇಮಠ ಸ್ವಾಗತಿಸಿದರು. ಗುರುಶಾಂತಪ್ಪ ಮುದ್ದಪ್ಪಳವರ ನಿರೂಪಿಸಿ ವಂದಿಸಿದರು.

ಪೋಟೋ:ಹೆಚ್-07-ಆರ್ ಎನ್ ಆರ್01:-ರಾಣೇಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಲಿಂ. ಹಾನಗಲ್ಲ ಕುಮಾರಸ್ವಾಮಿಗಳವರ ಮಠಕ್ಕೆ ನೂತನವಾಗಿ ನಿರ್ಮಿಸಲಾದ ರಥ ಲೋಕಾರ್ಪಣೆ ಸಮಾರಂಭದಲ್ಲಿ ರಟ್ಟಿಹಳ್ಳಿ ಶ್ರೀಗಳು ಮಾತನಾಡಿದರು.

ಸುದ್ದಿ ಓದಿ