ಟಾಟಾ ಏಸ್ ವಾಹನ ಪಲ್ಟಿ: 15 ಜನರಿಗೆ ಗಂಭೀರ ಗಾಯ
ಸಿಂದಗಿ 08: ಪಟ್ಟಣದ ಹೊರವಲಯದ ಎನ್ಎಚ್50 ರಸ್ತೆಯ ಯರಗಲ್ಲ ಸಮೀಪ ಟಾಟಾ ಏಸ್ ವಾಹನ ಪಲ್ಟಿಯಾಗಿ 15 ಜನರಿಗೆ ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ಅಪಘಾತವಾಗಿದೆ.
ಈ ಅಪಘಾತದಲ್ಲಿ ಲಕ್ಷ್ಮೀ ಚೇತನ ಸೇಗುಣಸಿ, ದ್ರಾಕ್ಷಾಣಿ ಮರತುಜಾ ಹಿರೇಮಠ, ಅನುರಾದಾ ದೇವಪ್ಪ ಮೇಟಿ, ನಿಲವ್ವ ಬಸಪ್ಪ ಮೇಟಿ ಎಂಬುವರು ಸೇರಿದಂತೆ ಮಕ್ಕಳು ಸೇರಿ 15 ಜನರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುನಗುಂದ ತಾಲೂಕಿನ ಬೆವಿನಾಳ ಗ್ರಾಮದಿಂದ ಅಫಜಲಪುರ ತಾಲೂಕಿನ ಘತ್ತರಗಿ ಭಾಗ್ಯವಂತಿದೇವಿ ದೇವಸ್ಥಾನಕ್ಕೆ ಜವುಳ ಕಾರ್ಯಕ್ಕೆ ನಂಬರ್ ಇಲ್ಲದ ಟಾಟಾ ಏಸ್ ಗೂಡ್ಸ್ ವಾಹಾನದಲ್ಲಿ 19 ಜನರು ಹೊರಟಿದ್ದಾಗ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಪಲ್ಟಿಯಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಆರೋಪ; ಅಪಘಾತ ನಡೆದ ಬಗ್ಗೆ 108ಗೆ ಸಂಪರ್ಕ ಮಾಡಿ ಒಂದು ಗಂಟೆಯಾದರು ಅಂಬುಲೆಸ್ಸ ಬರದೇ ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ತಂದು ತಾಲೂಕು ಆಸ್ಪತ್ರೆಗೆ ದಾಖಲಿಸಿದರು ಕೂಡಾ ಚಿಕಿತ್ಸೆ ನೀಡಲು ವೈದ್ಯರು ಬರಲೇ ಇಲ್ಲ ಕೆಲ ಸಿಬ್ಬಂದಿ ಗಾಯಾಳುಗಳಿಗೆ ಸ್ವಲ್ಪ ಮಟ್ಟಿಗೆ ಚಿಕಿತ್ಸೆ ನೀಡಿದರು. 100 ಹಾಸಿಗೆಗಳ್ಳುಳ ತಾಲುಕೂ ಆಸ್ಪತ್ರೆಯಲ್ಲಿ 24 ಗಂಟೆಗಳ ಚಿಕಿತ್ಸೆ ಸಿಗುತ್ತಿಲ್ಲ ಹೀಗೆ ಮುಂದುವರೆದರೆ ಆಸ್ಪತ್ರೆಗೆ ಬೀಗ್ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಉತ್ತರ ವಲಯ ಸಂಚಾಲಕ ಪೀರು ಕೆರೂರ ಏಚ್ಚರಿಕೆ ನೀಡಿದರು.