ರಾಷ್ಟ್ರೀಯ

ಅನಾರೋಗ್ಯ ಹಿನ್ನೆಲೆ; ಮನಮೋಹನ್‌ ಸಿಂಗ್‌, ಚಿದಂಬರಂ ಸೇರಿ 14 ಸಂಸದರಿಗೆ ರಜೆ ಮಂಜೂರು

ಅನಾರೋಗ್ಯ ಹಿನ್ನೆಲೆ; ಮನಮೋಹನ್‌ ಸಿಂಗ್‌, ಚಿದಂಬರಂ ಸೇರಿ 14 ಸಂಸದರಿಗೆ ರಜೆ ಮಂಜೂರು

ನವದೆಹಲಿ,  ಸೆಪ್ಟೆಂಬರ್ 16: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌,  ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ 14 ರಾಜ್ಯಸಭಾ ಸದಸ್ಯರಿಗೆ ಕಲಾಪದಿಂದ  ಗೈರಾಗಲು ಅನುಮತಿ ನೀಡಲಾಗಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ 14 ಸಂಸದರಿಗೆ ಚಳಿಗಾಲದ ಅಧಿವೇಶನದಿಂದ ರಜೆ ಮಂಜೂರು ಮಾಡಿ ರಾಜ್ಯಸಭೆ ಬುಧವಾರ ಆದೇಶ ಹೊರಡಿಸಿದೆ.

14  ಸಂಸದರ ಪೈಕಿ 11 ಮಂದಿ ಸಂಪೂರ್ಣ ಕಲಾಪದಿಂದ ಗೈರು ಹಾಜರಾಗಲು ಅನುಮತಿ ಕೋರಿದ್ದು,  ಕೋವಿಡ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಾಪದಿಂದ ಹಾಜರಾಗಲು ಅನುಮತಿ  ಕೋರಿದ್ದರು.

ಸ್ವತಂತ್ರ ಸಂಸದ ಡಾ.ನರೇಂದ್ರ ಜಾಧವ್, ಮನಸ್ ರಂಜನ್ ಭುನಿಯಾ (ತೃಣಮೂಲ ಕಾಂಗ್ರೆಸ್),

ಪರಿಮಲ್  ನಾಥ್ವಾನಿ (ವೈಎಸ್ಆರ್ಸಿಪಿ), ಎ ನವನೀತ್ ಕೃಷ್ಣನ್ (ಎಐಎಡಿಎಂಕೆ), ಸುಶೀಲ್ ಗುಪ್ತಾ  (ಎಎಪಿ), ಆಸ್ಕರ್ ಫರ್ನಾಂಡಿಸ್ (ಕಾಂಗ್ರೆಸ್), ಡಾ.ಅನ್ಬುಮಣಿ ರಾಮದಾಸ್ (ಎಂಡಿಎಂಕೆ),  ಹಿಶೆ ಲಾಚುಂಗ್ಪಾ (ಎಸ್‌ಡಿಎಫ್), ವಿ ಲಕ್ಷ್ಮೀಕಾಂತ ರಾವ್ (ಟಿಆರ್‌ಎಸ್), ಪರಿಮಲ್  ನಾಥ್ವಾನಿ (ವೈಎಸ್‌ಆರ್‌ಸಿಪಿ), ಮಹೇಂದ್ರ ಪ್ರಸಾದ್ (ಜೆಡಿ-ಯು), ಕೆಜಿ ಕೆನ್ಯೆ  (ಎನ್‌ಪಿಎಫ್) ಮತ್ತು ಬಂಡಾ ಪ್ರಕಾಶ್ (ಟಿಆರ್‌ಎಸ್) ರಜೆಯ ಅನುಮತಿ ಕೋರಿದ್ದರು.

ಸುದ್ದಿ ಓದಿ