ಬೈಲಹೊಂಗಲ

ಬೇಂದ್ರೆಯವರ ಭಾವಗೀತೆಗಳು ಸಾಹಿತ್ಯಕ್ಕೆ ಅಪೂರ್ವ ಕೊಡುಗೆ

ಬೇಂದ್ರೆಯವರ ಭಾವಗೀತೆಗಳು ಸಾಹಿತ್ಯಕ್ಕೆ ಅಪೂರ್ವ ಕೊಡುಗೆ
ನೇಸರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರಕವಿ ದ.ರಾ.ಬೇಂದ್ರೆ ಯವರ 125ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ದಂಗವಾಗಿ

ಬೈಲಹೊಂಗಲ 2: ತಾಲೂಕಿನ ನೇಸರಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಾ ಕೋಶದ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ನೇಸರ ಕನ್ನಡ ಸಂಘ ಹಾಗೂ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ವರಕವಿ ದ.ರಾ.ಬೇಂದ್ರೆ ಯವರ 125ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಸೋಮವಾರ ನಡೆಯಿತು.

ಪ್ರಾಧ್ಯಾಪಕ ವಿನಯ ಕುಲಕರ್ಣಿ, ಬೆಂದ್ರೆಯವರು ರಚಿಸಿದ ಗೆಳೆಯರ ಗುಂಪಿನ ಸಾಧನೆ ಹಾಗೂ ಬೇಂದ್ರೆಯವರ ಭಾವಗೀತೆಗಳಲ್ಲಿಯ ಸತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಾದ ಈಶ್ವರ ಹಸಬಿ ಹಾಗೂ ಲಗಮವ್ವಾ ಕುಂದರಗಿ ಇವರು ಅಂಬಿಕಾತನಯದತ್ತರ ಜೀವನ ಹಾಗೂ ಅವರ ಕವನಗಳ ಕುರಿತು ಭಾಷಣ ಮಾಡಿದರು. 

ಕನ್ನಡ ಪ್ರಾಧ್ಯಾಪಕ ಡಾ.ಪದ್ಮಾ ಹೊಸಕೋಟೆಯವರು ಬೇಂದ್ರೆಯವರ ಬೆಳಗು ಕವನವನ್ನು ಪ್ರಸ್ತುತ ಪಡಿಸಿದರು. ಡಾ. ಎನ್.ಟಿ.ರೇಣಕಿಗೌಡರ ಇವರು ಸ್ವರಚಿತ ಕವನ ವಾಚನ ಮಾಡಿದರು. ಗ್ರಂಥಪಾಲಕ ಎಂ.ಸಿ.ಕುಂಬಾರ ಅವರು ಬೇಂದ್ರೆಯವರ ರಾಗರತಿ ಭಾವಗೀತೆಯನ್ನು ಪ್ರಸ್ತುತ ಪಡಿಸಿದರು.

ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಂ.ವಾಯ್.ಹಿತಾರಗೌಡರ ವಹಿಸಿದ್ದರು. ಸಿಬ್ಬಂದಿಗಳಾದ ಶಂಭುಲಿಂಗಪ್ಪ ಕಾಯಕದ, ಪೃಥ್ವಿರಾಜ್ ಎನ್., ಎಂ.ಬಿ.ಕೊಪ್ಪದ,ಎಸ್.ಟಿ.ನರವಾಡೆ, ವಿದ್ಯಾರ್ಥಿಗಳು ಇದ್ದರು. ಗೌರಮ್ಮಾ ಬೀರನ್ನವರ  ಸ್ವಾಗತಿಸಿದರು. ಸಕ್ಕೂಬಾಯಿ ಪೂಜೇರಿ ನಿರೂಪಿಸಿದರು, ಶಿವಾನಂದ ಹಿರೇಮಠ ವಂದಿಸಿದರು. 

ಸುದ್ದಿ ಓದಿ