ಸಿಂಧಗಿ

ಪ್ರೇಮಾ ಭೀ. ಕರ್ಜಗಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ

ಪ್ರೇಮಾ ಭೀ. ಕರ್ಜಗಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯಕ್ಕೆ  ಶೇ.100 ರಷ್ಟು ಫಲಿತಾಂಶ

ಸಿಂದಗಿ 12: ಪಟ್ಟಣದ ಪಿ.ಇ.ಎಸ್‌. ಸಂಸ್ಥೆಯ ಪ್ರೇಮಾ ಭೀ. ಕರ್ಜಗಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಶೇ.100 ರಷ್ಟು ಫಲಿತಾಂಶ ಬಂದಿದೆ. 

ಅಮೃತಾ ಯಾತನೂರ ಶೇ.91 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಶಾರದಾ ಗಾಡದ ಶೇ. 90 ರಷ್ಟು ಪಡೆದು ದ್ವಿತೀಯ ಸ್ಥಾನ, ಶಿಲ್ಪಾ ಮಠ ಶೇ. 89.85 ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಶ್ವರ್ಯ ಉಡಚಾಣ ಶೇ. 89.14, ಭಾಗ್ಯಶ್ರೀ ಗುತ್ತರಗಿ ಶೇ.88.57 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.  

ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಕಾರ್ಯದರ್ಶಿ ಬಿ. ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್‌.ಬಿ. ಬಿರಾದಾರ ಪ್ರಾಚಾರ್ಯ ಜಿ.ಎಸ್‌. ಕಡಣಿ ಮಾರ್ಗದರ್ಶಕ ಕೆ.ಎಚ್‌. ಸೋಮಾಪೂರ, ಆರ್‌.ಬಿ. ಗೋಡಕರ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ