ಚಿಕ್ಕೋಡಿ

ಅನ್ನಪೂಣೇಶ್ವರಿ ಫೌಂಡೇಶನದಿಂದ ಕ್ಷೇತ್ರದ ಜನರಿಗೆ 10 ಸಾವಿರ ಲಸಿಕೆ

ಅನ್ನಪೂಣೇಶ್ವರಿ ಫೌಂಡೇಶನದಿಂದ ಕ್ಷೇತ್ರದ ಜನರಿಗೆ 10 ಸಾವಿರ ಲಸಿಕೆ

ಸಂಸದ ಪ್ರಕಾಶ, ಶಾಸಕ ಗಣೇಶ ಹುಕ್ಕೇರಿ ಹೇಳಿಕೆ: ಡಾ, ಕೋರೆ ಆಸ್ಪತ್ರೆಗೆ ಮೊದಲ ಹಂತದಲ್ಲಿ 2 ಸಾವಿರ ಲಸಿಕೆಯ 15.60 ಲಕ್ಷ ರೂ. ಹಣ  

ಚಿಕ್ಕೋಡಿ 16: ಚಿಕ್ಕೋಡಿ-ಸದಲಗಾ ಕ್ಷೇತ್ರದ 18 ವರ್ಷ ಮೇಲ್ಪಟ್ಟ ಜನರಿಗೆ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 10 ಸಾವಿರ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಕೆಎಲ್‌ಇ ಸಂಸ್ಥೆಯ ಡಾ, ಪ್ರಭಾಕರ ಕೋರೆ ಆಸ್ಪತ್ರೆ ಒಪ್ಪಿಕೊಂಡಿದ್ದು, ಮೊದಲ ಹಂತದ 2 ಸಾವಿರ ಡೋಸ್ ಖರೀದಿಸಲು 15.60 ಲಕ್ಷ ರೂ ಹಣವನ್ನು ಆಸ್ಪತ್ರೆಯ ಆಡಳಿತಾಧಿಕಾರಿಗೆ ನೀಡಲಾಗಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಹೇಳಿದರು. 

ಬುಧವಾರ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ 25 ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಮೊದಲ ಹಂತದಲ್ಲಿ ಉಚಿತವಾಗಿ 2 ಸಾವಿರ ಲಸಿಕೆಯ ಹಣವನ್ನು ಡಾ, ಕೋರೆ ಆಸ್ಪತ್ರೆಗೆ ನೀಡಿದರು. 

ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು,  ಕೆ.ಎಲ್‌.ಇ ಸಂಸ್ಥೆಯ   18 ವರ್ಷ ಮೇಲ್ಪಟ್ಟ ಜನರಿಗೆ ವ್ಯಾಕ್ಸಿನ ನೀಡುವ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಅನ್ನಪೂಣೇಶ್ವರಿ ಫೌಂಡೇಶನ ವತಿಯಿಂದ ಕ್ಷೇತ್ರದ ಜನರಿಗೆ 10 ಸಾವಿರ ಲಸಿಕೆ ನೀಡಲಾಗುತ್ತಿದೆಂದು ವಾಗ್ದಾನ ಮಾಡಿದ್ದರು. ಅದರಂತೆ ಕೆಎಲ್‌ಇ ಸಂಸ್ಥೆಯ ಕಾರಾ​‍್ಯಧ್ಯಕ್ಷ ಡಾ, ಪ್ರಭಾಕರ ಕೋರೆ ಜೊತೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು. 

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಈಗಾಗಲೇ 64590 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇದು ಬೆಳಗಾವಿ ಜಿಲ್ಲೆಯಲ್ಲಿಯೇ ಹೆಚ್ಚು ಲಸಿಕೆ ಪಡೆದುಕೊಂಡಿರುವುದು ಹೆಗ್ಗಳಿಕ್ಕೆ. ಈಗ 18 ವರ್ಷದ ಮೇಲ್ಪಟ್ಟವರಿಗೆ 10 ಸಾವಿರ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಕ್ಷೇತ್ರದ 25 ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊದಲ ಹಂತದಲ್ಲಿ ತಲಾ 100 ಜನರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. 

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಪ್ರತಿ ಡೋಸ್ ಲಸಿಕೆಗೆ  780 ರೂಪಾಯಿ ದರ ನಿಗದಿ ಮಾಡಿದೆ. ಹಾಗಾಗಿ ನಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸರ್ಕಾರ ನಿಗದಿ ಮಾಡಿದ ಬೆಲೆಯಂತೆ,  ಒಂದು ಡೋಸ್‌ಗೆ 780 ರೂಪಾಯಿ ಯಂತೆ ಒಟ್ಟು 10 ಸಾವಿರ ಡೋಸ್ ಕೆ.ಎಲ್‌.ಇ ಸಂಸ್ಥೆಯಿಂದ  ಖರೀದಿ ಮಾಡಿ,  ಕ್ಷೇತ್ರದ  ಜನರಿಗೆ ಉಚಿತವಾಗಿ ಕೊವಿಶಿಲ್ಡ್‌ ಲಸಿಕೆಯನ್ನು ನೀಡಲಾಗುತ್ತದೆ.  ಕ್ಷೇತ್ರದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲು ನಾನು ಮತ್ತು ನಾಯಕರಾದ ಪ್ರಕಾಶ ಹುಕ್ಕೇರಿಯವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು. 

ಸರ್ಕಾರ ಕೆ.ಎಲ್‌.ಇ ಸಂಸ್ಥೆಗೆ ಕೊಡುತ್ತಿರುವ ಲಸಿಕೆಯಲ್ಲಿ,  10 ಸಾವಿರ ಲಸಿಕೆಯನ್ನು ನಮ್ಮ ಫೌಂಡೇಶನ್ ವತಿಯಿಂದ ಖರೀದಿ ಮಾಡಿ ಜನರಿಗೆ ನೀಡಲು ತೀರ್ಮಾನಿಸಿದ್ದೂ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಲಸಿಕೆ ನೀಡಲು ಸರ್ಕಾರ ಒಪ್ಪಿದರೇ ಅದನ್ನೂ ಸಹಿತ ಖರೀದಿ ಮಾಡಿ ಜನರಿಗೆ ನೀಡಲಾಗುವುದು. ಮೊದಲ ಹಂತದಲ್ಲಿ 2 ಸಾವಿರ ಡೋಸ್ ಲಸಿಕೆ ಖರೀದಿ ಮಾಡಿ ಸುಮಾರು 15.60 ಲಕ್ಷ ರೂ ಆಸ್ಪತ್ರೆಗೆ ಹಣ ನೀಡಲಾಗಿದೆ. ಕ್ಷೇತ್ರದ ಕಾರ್ಯರ್ಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಕೆಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರಶಾಂತ ಪೂಜಾರಿ, ಸುರೇಶ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ರಾಮಾ ಮಾನೆ, ಶಾಮ ರೇವಡೆ,  ಸಾಭೀರ ಜಮಾದಾರ, ಬಸವರಾಜ ಗುಂಡಕಲ್ಲೆ, ಸುದರ್ಶನ ಖೋತ, ರವಿ ಪಾಟೀಲ, ರಣಜೀತ ಶಿರಸೇಟ, ಸುನೀಲ ಸಪ್ತಸಾಗರೆ, ಮಹೇಶ ಕಾಗವಾಡೆ, ಪಾಂಡು ಮಾನೆ, ವಿನೋದ ಕಾಗೆ, ಅನಿಲ ಮಾನೆ, ಅರುಣ ದೇಸಾಯಿ, ಪಿರಗೌಡ ಪಾಟೀಲ, ಪುಂಡಲಿಕ ಖೋತ ಮುಂತಾದವರು ಇದ್ದರು. 


ಸುದ್ದಿ ಓದಿ