ಶಿಗ್ಗಾವ್

ಬೇಡ ಜಂಗಮ ಸಂಘಕ್ಕೆ 1 ಲಕ್ಷ ರೂಪಾಯಿ ಧನ ಸಹಾಯ : ದುಂಡಿಗೌಡ್ರ

ಬೇಡ ಜಂಗಮ  ಸಂಘಕ್ಕೆ 1 ಲಕ್ಷ ರೂಪಾಯಿ ಧನ ಸಹಾಯ :  ದುಂಡಿಗೌಡ್ರ

ಶಿಗ್ಗಾವಿ,21 : ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘಕ್ಕೆ 1 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿ ಠೇವಣಿ ಇಟ್ಟ ಹಣವನ್ನು ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮಕ್ಕೆ ಬಳಸಬೇಕೆಂದು ಭಾರತ್ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಆಶಯವನ್ನು ವ್ಯಕ್ತಪಡಿಸಿದರು. 

ನೂತನವಾಗಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘಕ್ಕೆ   ಗೌರವಾಧ್ಯಕ್ಷರಾಗಿ ಆಯ್ಕೆಯಾದ  ಸಂಗಮೇಶ ಕಂಬಾಳಿಮಠ ಮತ್ತು ಅಧ್ಯಕ್ಷ ಶಶಿಧರ ಸುರಗೀಮಠರವರಿಗೆ  ಗೌರವಿಸಿ ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಮುಖಂಡರಾದ ಸಂತೋಷ್ ಕುಲಕರ್ಣಿ,ಶ್ರೀಕಾಂತ ಶಿಲೋಚನಮಠ,ವಿಶ್ವನಾಥ ಗಾಣಿಗೇರ, ಷಣ್ಮುಖ ಪಾಟೀಲ ಸೇರಿದಂತೆ ಇತರರು ಉಪಸ್ಥಿರಿದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ