ಜಮಖಂಡಿ

ಸ್ಕೂಟಿಯಲ್ಲಿದ್ದ 1.5 ಲಕ್ಷ ನಗದು ಕಳ್ಳತನ

ಸ್ಕೂಟಿಯಲ್ಲಿದ್ದ 1.5 ಲಕ್ಷ ನಗದು ಕಳ್ಳತನ
ಸ್ಕೂಟಿಯಲ್ಲಿದ್ದ 1.5 ಲಕ್ಷ ನಗದು ಕಳ್ಳತನದಿಂದ ಕಳೆದುಕೊಂಡ ಬ್ಯಾಂಕ ನಿವೃತ್ತ ಅಧಿಕಾರಿ

ಲೋಕದರ್ಶನ ವರದಿ,

ಜಮಖಂಡಿ 5: ಪುತ್ರಿ ಮದುವೆಗೆಂದು ಬ್ಯಾಂಕಿನಿಂದ ಹಣ ತೆಗೆದುಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ಕಳ್ಳರ ಕೈಚಳಕದಿಂದ 1.5ಲಕ್ಷ ನಗದು ಹಣ ಕಳ್ಳತನವಾದ ಘಟನೆ ಸಂತೆಯ ದಿನದಂದು ನಗರದ ಉಮಾರಾಮೇಶ್ವರ ಆವರಣದಲ್ಲಿ ನಡೆದಿದೆ.

ಪ್ರತಿಷ್ಠಿತ ಬ್ಯಾಂಕ ನಿವೃತ್ತ ಅಧಿಕಾರಿ ಮಹಾಂತೇಶ ನಗರದ ನಿವಾಸಿ ಆರ್.ಜಿ.ಕುಲಕಣರ್ಿ ತಮ್ಮ ಪುತ್ರಿಯ ಮದುವೆ ನಿರ್ಣಯಿಸಿದ್ದು, ಮದುವೆ ಸಿದ್ದತೆಗೆ ಬೇಕಾಗುವ  ಸಾಮಗ್ರಿ ಖರೀದಿಗಾಗಿ ಎಸ್ಬಿಐ ಬ್ಯಾಂಕಿನಿಂದ 1.5 ಲಕ್ಷ ವಿಥ್ ಡ್ರಾ ಮಾಡಿಕೊಂಡು ಹಣವನ್ನು ತಮ್ಮ ಟಿವ್ಹಿಎಸ್ ಸ್ಕೂಟಿಯಲ್ಲಿಟ್ಟು, ಬೇರೊಂದು ಕೆಲಸಕ್ಕೆ ಪಕ್ಕದ ಅಂಗಡಿಗೆ ತೆರೆಳಿದ್ದನ್ನು ಗಮನಿಸಿದ ಕಳ್ಳರು ಸ್ಕೂಟಿ ಸೀಟ್ ಮುರಿತು ಅದರಲ್ಲಿದ್ದ ಹಣ ದೊಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಅಲ್ಲ-ಸ್ವಲ್ಪ ಸೆರೆಯಾಗಿದ್ದು. ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು. ಆರೋಪಿಗಳ ಪತ್ತೆ ಹೆಚ್ಚಿನ ತನಿಖೆಗೆ ಪೋಲೀಸರು ಜಾಲ ಬಿಸಿದ್ದಾರೆ. 


ಸುದ್ದಿ ಓದಿ