ಶಿಗ್ಗಾವ್

ಕೊಟ್ಟ ಮಾತಿಗೆತಪ್ಪಿ ನಡೆದರೆ ಮೆಚ್ಚನಾ ಮತದಾರನು: ಮ್ಯಾಗೇರಿ

ಕೊಟ್ಟ ಮಾತಿಗೆತಪ್ಪಿ ನಡೆದರೆ ಮೆಚ್ಚನಾ ಮತದಾರನು: ಮ್ಯಾಗೇರಿ

ಲೋಕದರ್ಶನ ವರದಿ

ಶಿಗ್ಗಾವಿ 03:  ಚುನಾವಣೆಯ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರಕಾರ ನಡೆಯದಿದ್ದರೆ ಮತದಾರನ ಪಿತ್ತ ನೆತ್ತಿಗಿರುವುದರಲ್ಲಿ ಯಾವ ಸಂದೇಹವು ಇಲ್ಲ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚುನಾವಣೆ ಪೂರ್ವದಲ್ಲಿ ಅಧಿಕಾರ ಪಡೆಯಬೇಕೆಂಬ ಆತುರತೆಯಲ್ಲಿ ಮುಂದಾಲೋಚನೆ ಇಲ್ಲದೆ ಆರ್ಥಿಕ ಸ್ಥಿತಿಗತಿ ತಿಳಿಯದೆ ಬಾಯಿಗೆ ಬಂದಂತೆ ಮತದಾರರಿಗೆ ಹೇಳಿ ಯಾಮರಿಸಿ ಪ್ರಣಾಳಿಕೆಯಲ್ಲಿ ಮುದ್ರಿಸಿ ಗ್ಯಾರಂಟಿಕಾರ್ಡ್  ಮನೆ ಮನೆಗೆ ತಲುಪಿಸಿ. ನಿಮಗೂ ಫ್ರೀ ನಮಗೂ ಫ್ರೀಎಲ್ಲರಿಗೂ ಫ್ರೀಎಂದು ಹೇಳಿದ ಕಾಂಗ್ರೆಸ್ಸಿಗರು ಈಗ ಅನೇಕ ಷರತ್ತುಗಳನ್ನು ಹಾಕುತ್ತಿರುವುದು ಯಾವ ನ್ಯಾಯ ಎಂದು ಮತದಾರರ ಪಿತ್ತ ನೆತ್ತಿಗೇರಿ ರೊಚ್ಚಿಗೆಬಿಸಿದೆ. 

ಅನೇಕ ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಅನೇಕ ಗದ್ದಲಗಳನ್ನು ತಂಟೆ ತಕರಾರುಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ ಬಸ್ಸುಗಳಲ್ಲಿ ಮಹಿಳೆಯರು ಟಿಕೆಟ್ ಪಡೆಯುವುದಿಲ್ಲ ಎಂದು ಕಂಡಕ್ಟರ್ ಜೊತೆ ವಾದ ಮಾಡುತ್ತಿರುವುದನ್ನು  ಮನೆ ಒಡತಿಗೆ 2000 ಕೊಡುವುದಾಗಿ ಹೇಳಿದ ದಿನದಿಂದಲೇ ಅತ್ತೆ ನನಗೆ ಸೊಸಿ ನನಗೆ ಕೊಡಬೇಕು ಎಂದು ಜಗಳ ಪ್ರಾರಂಭವಾಗಿ ಇವರ ಗ್ಯಾರೆಂಟಿ ಮನೆ ಒಡತಿ ಹೋಗಿ ಮನೆ ಒಡೀತಿಎನ್ನುವ ಹಾಗೆ ಆಗಿದೆ. ಪದವೀಧರರಿಗೆ 3000 ಡಿಪ್ಲೋಮಾ ಪದವೀಧರರಿಗೆ 1500 ಕೊಡುವುದಾಗಿ ಹೇಳಿ ಈಗ ಅನೇಕ ಶರತ್ತಗಳನ್ನು ಹೇರುತ್ತಿರುವುದು ಇದುಯಾವ ನ್ಯಾಯ  ಇವೆಲ್ಲ ಸಮಸ್ಯೆಗಳಿಗೆ  ಯಾರು ಕಾರಣಿಕರ್ತರು ಎಂಬುದನ್ನು ಕನರ್ಾಟಕದ ಜನತೆ ನೋಡುತ್ತಿದೆ ಕೊಟ್ಟ ಮಾತಿನಂತೆ ನಡೆಯದಿದ್ದರೆ. ಮತ ಚಲಾಯಿಸಿದವರೇ ಬೀದಿಗಿಳಿದು ಪ್ರತಿಭಟನೆ  ಮಾಡುವ ಸ್ಥಿತಿಗೆ  ಬರಬಹುದು ಕೂಡಲೆ ಎಚ್ಚೆತ್ತು ಯಾವುದೇ ಷರತ್ತು ಇಲ್ಲದೆ ಕೊಟ್ಟ ಮಾತಿನಂತೆಐದು ಗ್ಯಾರಂಟಿಗಳನ್ನು ಕೂಡಲೇ ಜಾರಿಗೊಳಿಸಬೇಕು ಇಲ್ಲದೆ ಹೋದರೆ ಕಾಂಗ್ರೆಸ್ ಪಕ್ಷ ವಚನಭ್ರಷ್ಟ ಎಂದು ಹೆಗ್ಗಳಿಕೆಗೆ ಕಾರಣವಾಗುತ್ತಿದೆಎಂದು ಟೀಕಿಸಿದರು 

ಸುದ್ದಿ ಓದಿ