ಬಳ್ಳಾರಿ

ಮನೆತನದ ಘನತೆಯನ್ನು ಬೆಳಗಿದ ಮಹಾಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ

ಮನೆತನದ ಘನತೆಯನ್ನು ಬೆಳಗಿದ ಮಹಾಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ

ಬಳ್ಳಾರಿ,26: ಆಂಧ್ರಪ್ರದೇಶದ ವೆಲ್ಲಟೂರು ಜಿಲ್ಲೆಯ ರಾಮಾಪುರದಲ್ಲಿ ಜನಿಸಿದ ಮಲ್ಲಮ್ಮ, ಸಿದ್ದಾಪುರದ ಕುಮಾರಗಿರಿಯ ಹೇಮರೆಡ್ಡಿ ಮನೆತನದ ಸೊಸೆಯಾಗಿ ನಾಡಿನ ರೆಡ್ಡಿ ಜನಾಂಗದ ಆರಾಧ್ಯ ದೇವತೆಯಾದಳು. ಶ್ರೀಶೈಲ ಮಲ್ಲಿಕಾಜರ್ುನನ  ಪರಮಭಕ್ತೆಯಾಗಿ,ಪತಿವ್ರತಾ ಶ್ರೇಷ್ಠಳಾಗಿ ,ಮನೆತನದ ಘನತೆಯನ್ನು ಬೆಳಗಿದ ಮಹಾಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಎಂದು ಸರ್ಕಾರಿ ಪ.ಪೂ (ಮಾಜಿ ಪುರಸಭೆ) ಕಾಲೇಜಿನ ಉಪನ್ಯಾಸಕ ಕೆ.ವಿ.ನಾಗರೆಡ್ಡಿಯವರು ನುಡಿದರು.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ತಾಳೂರು ರಸ್ತೆಯ ಶ್ರೀನಗರದ 5ನೇ ಅಡ್ಡರಸ್ತೆಯಲ್ಲಿಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಂತಿಧಾಮದಲ್ಲಿ ಹಮ್ಮಿಕೊಂಡಿದ್ದ 286ನೇ ಮಹಾಮನೆ, ಲಿಂ. ಬಿ.ಎಂ.ಬಸವರಾಜ ದತ್ತಿ ಮತ್ತು ಲಿಂ. ಫಕೀರಪ್ಪ ತಲ್ವಾರ್ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತಾ, ಆದರ್ಶ ಸಂಸಾರದ ಆಧಾರವಾದ ಮಹಿಳೆಗೆ ಇರಬೇಕಾದ ತಾಳ್ಮೆ, ಸಹನೆ, ಸಮರ್ಪಣಾ ಭಾವಗಳ ಪ್ರತಿರೂಪ ಹೇಮರೆಡ್ಡಿ ಮಲ್ಲಮ್ಮನೆಂದು, ಅಚಲವಾದ ದೈವಭಕ್ತಿಯಿಂದ ಪರಮಾತ್ಮನು ಒಲಿವನೆಂಬುದಕ್ಕೆ ನಿದರ್ಶನವೆಂದು ಅಭಿಪ್ರಾಯ ಪಟ್ಟರು.

ಅಮರ್ ಏಜೆನ್ಸಿಯ ಮಾಲೀಕ ಮರಿಗೌಡ ಪಾಟೀಲರು ಜ್ಯೋತಿ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯ ಶಾಂತಿ, ಸಹನೆಗಳೇ ಮನೆಯ ನೆಮ್ಮದಿಗೆ ನಾಂದಿಯೆಂದರು. ಬಸವರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಮಹಾಬಲೇಶ್ವರಗೌಡರು ಅಧ್ಯಕ್ಷತೆ ವಹಿಸಿದ್ದರು. ಕಾಯಕವೇ ಪೂಜೆಯೆಂದು ನಂಬಿದ, ಬಡವರ ವೈದ್ಯರೆಂದೇ ಗುರುತಿಸಿ ಕೊಂಡಿರುವ ಡಾ.ಕೆರೇನಳ್ಳಿ ರಾಜಶೇಖರರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಸರ್ವರನ್ನು ಸ್ವಾಗತಿಸಿ  ನಿರೂಪಿಪಣೆ ಮಾಡಿದರು. ಸಮಾಜದ ಹಿರಿಯರಾದ ಕೋಳೂರು ಜಿತೇಂದ್ರ ಗೌಡ, ಡಾ. ಬಿ.ಹೆಚ್.ಮಂಜುನಾಥ್, ಆರ್.ಸದಾಶಿವಪ್ಪ, ಸಂಡೂರಿನಿಂದ ಆಗಮಿಸಿದ್ದ ಪ್ರೇಮಲೀಲಾ, ಜಿ.ನೀಲಾಂಬಿಕ, ಈರಮ್ಮ, ಪತ್ರಕರ್ತ ಸಿಂಗಾಪುರ ನಾಗರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲವಾಯಿತು 

ಸುದ್ದಿ ಓದಿ