ಸ್ವಚ್ಛ ಪರಿಸರದಿಂದ ಆರೋಗ್ಯಕರ ಸಮಾಜ ನಿರ್ಮಾಣ
ಯಲಬುರ್ಗಾ 07: ಪರಿಸರ ಸ್ವಚ್ಛತೆಯಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು, ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕೃಷಿ ತಾಲೂಕು ತಾಂತ್ರಿಕ ಅಧಿಕಾರಿ ಶರಣಪ್ಪ ಗುಂಗಾಡಿ ಹೇಳಿದರು.ತಾಲೂಕಿನ ವಣಗೇರಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾದ ನೈರ್ಮಲ್ಯ ಜಾಗೃತಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಕಲ್ಯಾಣ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯನ್ನು ಈಗಾಗಲೇ ಬಯಲು ಶೌಚಾಲಯ ಮುಕ್ತ (ಒಡಿಎಫ್) ಎಂದು ಘೋಷಿಸಲಾಗಿದೆ. ಹಾಗಿದ್ದರೂ ನಗರ ಹಾಗೂ ಗ್ರಾಮೀಣಭಾಗಗಳಲ್ಲಿ ಶೇ 100ರμÀ್ಟು ಮಂದಿ ಶೌಚಾಲಯಗಳನ್ನು ಬಳಸುತ್ತಿಲ್ಲ. ಶೌಚಾಲಯಗಳ ಬಳಕೆಗೆ ಜನರನ್ನು ಪ್ರೇರೇಪಿಸುವುದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಘನತ್ಯಾಜ್ಯದ ಸಮರ್ಪಕ ವಿಲೇವಾರಿ, ಜಲಮೂಲಗಳ ಸುತ್ತ ನೈರ್ಮಲ್ಯ ಕಾಪಾಡುವುದು, ನೀರಿನ ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಜನರಿಗೆ ತಿಳಿ ಹೇಳಿದರು.
ಶೌಚಾಲಯಗಳ ಬಳಕೆ ಘನ ತ್ಯಾಜ್ಯ ನಿರ್ವಹಣೆಯ ವಿಧಾನಗಳು, ಹಸಿ ಕಸ ಹಾಗೂ ಒಣಕಸ ಬೇರ್ಡಿಸುವಿಕೆ, ಶೌಚ ಗುಂಡಿಯ ನಿರ್ಮಾಣ ಮತ್ತು ಉಪಯೋಗ, ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಾಲಯಗಳ ಉಪಯೋಗ, ಮಕ್ಕಳಲ್ಲಿ ಶುಚಿತ್ವದ ಅಭ್ಯಾಸಗಳನ್ನು ರೂಢಿ ಮಾಡುವುದು ಸೇರಿದಂತೆ ವಿವಿಧ ವಿμÀಯಗಳ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶರಣಪ್ಪ ಗುಂಗಾಡಿ ಯುವ ಬಳಗ ಮಾಡುತ್ತಿದೆ.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜ ರಾವಣಕಿ ಮಾತನಾಡಿದರು. ಸೋಮಣ್ಣ ಪೂಜಾರಿ, ಶ್ರೀನಿವಾಸ ಗದ್ದಿ, ಮಂಜುನಾಥ ಹೊಸಳ್ಳಿ, ರಾಜಪ್ಪ ಗುದಗಿ, ಶಿವಶರಣಪ್ಪ ಬೆಲ್ಲದ, ಪ್ರವೀಣ ಬಂಡಿಹಾಳ, ಬಸವರಾಜ ರಾವಣಕಿ, ಶಾಂತಪ್ಪ ಕುಂಬಾರ, ಅಬ್ದುಲ ರೇಹಮಾನ್ ರವಿ ಬೆಲ್ಲದ, ಮುತ್ತಣ್ಣ ಬೆಲ್ಲದ, ರಾಜು ಕಬ್ಬಿಣದ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಬುಗೌಡ ಕಲ್ಲಯ್ಯ ಶಶಿಮಠ, ಸುರೇಶ ಡೊಳ್ಳಿನ ಹನುಮಂತ ಭೋವಿ, ಬಸವರಾಜ ಮಣಕೊಡದ, ಹನುಮಂತ ಹರಿಜನ, ವಣಗೇರಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಯುವಕರು ಭಾಗಿಯಾಗಿದ್ದರು.