ಶಿಗ್ಗಾವ್

ಬದುಕಿನಲ್ಲಿ ನೆಮ್ಮದಿ ಅರಳಿಸುವ ಸಾಧನೆವೇ ಯೋಗ: ಮ್ಯಾಗೇರಿ

ಬದುಕಿನಲ್ಲಿ ನೆಮ್ಮದಿ ಅರಳಿಸುವ ಸಾಧನೆವೇ ಯೋಗ: ಮ್ಯಾಗೇರಿ

ಲೋಕದರ್ಶನ ವರದಿ

ಶಿಗ್ಗಾವಿ : ಮನುಷ್ಯನ ದೇಹ ಮತ್ತು ಮನಸ್ಸನ್ನು ಕೇಂದ್ರೀಕೃತಗೊಳಿಸಿ ಬದುಕಿನಲ್ಲಿ ನೆಮ್ಮದಿ ಅರಳಿಸುವ ಸಾಧನೆವೇ ಯೋಗ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

 ಏಕಾಗ್ರತೆಯಿಂದ ಧ್ಯಾನ ಮಾಡಿ ಶಾಂತಿ ಸಮಾಧಾನದಲ್ಲಿ ಜ್ಞಾನ ಪಡೆದು ಇಂದಿನ ಆಹಾರ ಮತ್ತು ಕಲುಷಿತ ನೀರಿನ ಮುಖಾಂತರ ಮಲೀನವಾದ ವಾಯು ಸೇವನೆ ಮತ್ತು ಅನೇಕ ಚಿಂತೆಗಳಲ್ಲಿ ಸಿಕ್ಕು ಮನುಷ್ಯನ ಮನಸ್ಸು ಸ್ಥಿರತೆ ಕಳೆದುಕೊಂಡು ನೆಮ್ಮದಿ ಮತ್ತು ವಿಶ್ರಾಂತಿ ರಹಿತ ಬದುಕಿನಲ್ಲಿ ದೈಹಿಕವಾಗಿ ನಿಶಕ್ತರಾಗುತ್ತಿರುವ ನಾವು ಪ್ರತಿ ದಿನ ಯೋಗ ಅಭ್ಯಾಸ ಮಾಡಿ ಆರೋಗ್ಯವಂತರಾಗೋಣ  ಅನೇಕರಿಗೆ ಸಂಧಿವಾತ, ಕೀಲು ನೋವು, ಬೆನ್ನು ನೋವು, ನರಗಳ ದೌರ್ಬಲ್ಯ, ಶುಗರ್, ಬಿಪಿ ತಲೆನೋವು ಇನ್ನು ಅನೇಕ ಕಾಯಿಲೆಗಳಿಂದ ಯೋಗ ಮತ್ತು ಪ್ರಾಣಾಯಾಮದಿಂದ  ಅನೇಕ ಜನರು ಮೆಟ್ಟಿ ನಿಂತಿದ್ದಾರೆ ಬದುಕಿನಲ್ಲಿ ಸೋತವರು ಯೋಗದಿಂದ ಗೆದ್ದಿದ್ದಾರೆ ಪ್ರತಿದಿನ ನಾವೆಲ್ಲರೂ ಮುಂಜಾನೆ ಏಳೋಣ ಬೇಗ. ಮಾಡೋಣ ನಮಗೆ ಬಂದ ಭಂಗಿಯಲ್ಲಿ ಯೋಗ, ನಮ್ಮ ಹತ್ತಿರ ಬರುವುದಿಲ್ಲ ಯಾವ ರೋಗ ಎಂದು ನುಡಿದರು.

ಯೋಗ ಶಿಕ್ಷಕ ಈಶ್ವರ್ ಗುರುಗಳು ಯೋಗ ಅಭ್ಯಾಸ ಮಾಡಿಸಿದರು, ಕೆಎಂಎಫ್ ನಿರ್ದೇಶಕ ಬಸನಗೌಡ್ರು ಮೇಲಿನಮನಿ, ರಮೇಶ ಸಾತಣ್ಣವರ್, ಉದಯಶಂಕರ್ ಹೊಸಮನಿ, ಪ್ರಶಾಂತ ಬಡ್ಡಿ, ಮಂಜುನಾಥ್ ಮಿರ್ಜಿ, ನಂದೀಶ್ ಲಂಡತ್ತಿನವರ, ವಿಜಯಕುಮಾರ್ ಹಾಗೂ ಸತ್ಯಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು 

ಸುದ್ದಿ ಓದಿ