ಆದಿಕವಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಯಾಸೀರಖಾನ್ ಪಠಾಣ
ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದಲ್ಲಿ ತಾಲೂಕ ಆಡಳಿತ ಹಾಗೂ ಸ್ಥಳೀಯ ಆಡಳಿತದ ಸಂಯುಕ್ತಾಶ್ರಯದಲ್ಲಿ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ಸಂಯೋಜನೆಯಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಉತ್ಸವ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಸಮಾಜದಲ್ಲಿ ಸೌಹಾರ್ದತೆ ಶಾಂತಿ ನೆಲೆಸಿರುವುದೇ ಇಂತಹ ಮಹಾಪುರುಷರ ತಪಸ್ಸಿನಿಂದ ಇದನ್ನು ನಾವೆಲ್ಲ ಉಳಿಸಿಕೊಂಡು ಹೋಗಬೇಕು ಎಂದು ಕೆಪಿಸಿಸಿ ಸಂಯೋಜಕ ಯಾಶೀರ್ಖಾನ್ ಪಠಾಣ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕ ಬ್ಲಾಕ್ ಸಮಿತಿ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ್ ಪಕ್ಷದ ಮುಖಂಡರುಗಳಾದ ಮಲ್ಲಿಕಾಜರ್ುನ ಗೌಡ ಪಾಟೀಲ್, ಗುರುನ ಗೌಡ ಪಾಟೀಲ, ಮಂಜುನಾಥ ಮನ್ನಣ್ಣವರ್, ಎಸ್.ಎಫ್ ಮಣಕಟ್ಟಿ, ಪರವೀಜ್ ಮುಲ್ಲಾ, ಮುದುಕಪ್ಪ ತಳವಾರ್, ಮಹೇಶ್ ತಳವಾರ್, ಚಂದ್ರು ಕೊಡ್ಲಿವಾಡ, ಬಿಸಿ ಪಾಟೀಲ್, ಶ್ರೀಕಾಂತ ಪೂಜಾರ, ಅಶೋಕ ಗಾಣಿಗೇರ, ಹಲವಾರು ಪಕ್ಷದ ಮುಖಂಡರು ರೈತ ಮುಖಂಡರು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.