ಯಲ್ಲಮ್ಮದೇವಿ ದರ್ಶನದ ವಾಹನಕ್ಕೆ ಚಾಲನೆ
ಲೋಕದರ್ಶನ ವರದಿ
ಸವದತ್ತಿ 21: ಕನ್ನಡ ಕಿರುತೆರೆಗೆ ಹಲವಾರು ಮಹತ್ವದ ಪೌರಾಣಿಕ ಧಾರಾವಾಹಿಗಳನ್ನು ನೀಡಿ ವೀಕ್ಷಕರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೂಮ್ಮೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರದ ಹಲವಾರು ಭಾಗಳಲ್ಲಿ ಭಕ್ತರನ್ನು ಹೊಂದಿರುವ ಶ್ರೀರೇಣುಕಾ ಯಲ್ಲಮ್ಮ ಮಹ್ಮಾತೆಯ ಕುರಿತಾದ ಉದೋ ಉದೋ ರೇಣುಕಾ ಯಲ್ಲಮ್ಮ ಧಾರಾವಾಹಿಯನ್ನು ಇದೇ ದಿ.23 ರಿಂದ ಪ್ರಸಾರ ಮಾಡಲಿದೆ.
ಈ ಧಾರಾವಾಹಿಯ ಪ್ರಸಾರಕಾಲಕ್ಕೆ ಈ ದೇವಿಯ ದರ್ಶನವನ್ನೂ ರಾಜ್ಯಾದ್ಯಂತ ಭಕ್ತರಿಗೆ ಮಾಡಿಸುವ ಉದ್ದೇಶದಿಂದ ವಾಹಿನಿ ಟೆಂಪಲ್ ಆನ್ ವೀಲ್ಸ್ ಕಾರ್ಯಕ್ರಮದ ಅಂಗವಾಗಿ ಗುರುವಾರ ಇಲ್ಲಿಂದ ಈ ದೇವಿ ದರ್ಶನದ ವಾಹನಕ್ಕೆ ಚಾಲನೆ ನೀಡಲಾಯಿತು.
ಸುವರ್ಣ ಸಂಕಲ್ಪ ಖ್ಯಾತಿಯ ಡಾ. ಗೋಪಾಲ ಶರ್ಮಾ ಗುರೂಜೀ ಈ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಯಲ್ಲಮ್ಮ ದೇವಾಲಯದ ಹಿರಿಯ ಸ್ವಾಮೀಜಿಗಳಾದ ಯಡಿಯೂರಯ್ಯ ಮತ್ತಿತರರು ಹಾಜರಿದ್ದು ಈ ಮಹತ್ವದ ಕಾರ್ಯಕ್ರಮಕ್ಕೆ ಶುಭಕೋರಿದರು.
ಮನೆಯಲ್ಲೇ ದೇವಿ ದರ್ಶನ: ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಗೋಪಾಲಶರ್ಮಾ ಗುರೂಜೀ ಅವರು ಸ್ಟಾರ್ ಸುವರ್ಣ ವಾಹಿನಿಯವರು ಉತ್ತರ ಕನರ್ಾಟಕದ ಶಕ್ತಿದೇವಾತೆಯಾದ ಯಲ್ಲಮ್ಮದೇವಿಯ ಕನ್ನಡ ಮಣ್ಣಿನ ಸೊಗಡಿನ ಕತೆಯನ್ನು ಎಲ್ಲ ಭಕ್ತರ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಲೋಕ ಕಲ್ಯಾಣದ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತಾಗಲಿ, ಈ ಧಾರಾವಾಹಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಸ್ಟಾರ್ ಸುವರ್ಣ ವಾಹಿನಿಯ ಪ್ರಫುಲ್ ಪಟೇಲ್ ಮಾತನಾಡಿ ಪೌರಾಣಿಕ ಈ ಧಾರವಾಹಿಯನ್ನು ಅದರ ಮೂಲಸ್ವರೂಪದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವೀಕ್ಷಕರಿಗೆ ನೀಡುತ್ತಿದ್ದೇವೆ. ಸವದತ್ತಿ ಕ್ಷೇತ್ರದ ಹಲವಾರು ಸ್ಥಳಗಳಲ್ಲೂ ಇದರ ಚಿತ್ರೀಕರಣ ನಡೆಸಲಾಗಿದೆ ಎಂದರು.
ಉದೋ ಉದೋ ವಿಶೇಷ : ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿ ಜನವರಿ 23 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8;30 ಕ್ಕೆ ಪ್ರಸಾರವಾಗಲಿದೆ.
ಈ ಮೆಗಾ ಧಾರವಾಹಿಯಲ್ಲಿ ಕನ್ನಡದಲ್ಲಿ ಇದೇ ಪ್ರಥಮ ಬಾರಿಗೆ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಕನ್ನಡ ವೀಕ್ಷಕರು ಇದೇ ಮೊದಲಬಾರಿಗೆ ಹಲವಾರು ಹೊಸ ತಂತ್ರಜ್ಞಾನದ ಅನುಭವ ಕಾಣಲಿದ್ದರೆ.
ಬೃಹತ್ ನಿರ್ಮಾಣ ಸಂಸ್ಥೆಯಾದ ನಂದಿ ಪ್ರೋಡಕ್ಷನ ಈ ಧಾರಾವಾಹಿ ನಿರ್ಮಾಣ ಮಾಡಿದೆ.ಇದಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಭಾರಿ ಸೆಟ್ ಗಳನ್ನು ಹಾಕಲಾಗಿದ್ದು ಧಾರವಾಹಿಯಲ್ಲಿ ಭಾರಿ ತಾರಾಬಳಗ ಕಾಣಬಹುದಾಗಿದೆ.
ರಾಜ್ಯ ಹಾಗೂ ನಾಡಿನಾದ್ಯಂತ ಇರುವ ಯಲ್ಲಮ್ಮದೇವಿ ಭಕ್ತರು ಈ ಧಾರಾವಾಹಿಯನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿ ಭಕ್ತಾಧಿಗಳಿಗೆ ಭಕ್ತಿ, ಜ್ಞಾನದ ಜತೆಗೆ ಮನರಂಜನೆಯನ್ನು ಉಣಬಡಿಸಲಿದೆ