ವಿಶ್ವಜನಸಂಖ್ಯಾ ದಿನಾಚರಣೆ ನಿಮಿತ್ಯ ಜಾಗೃತ ಜಾಥಾ
ಲೋಕದರ್ಶನ ವರದಿ
ಶಿಗ್ಗಾವಿ 21: ಪಟ್ಟಣದಲ್ಲಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆಯ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಿಂದ ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕ ಆರೋಗ್ಯ ಇಲಾಖೆಯ ಕಾರ್ಯಾ ಲಯದಿಂದ ಪ್ರಾರಂಭವಾದ ಜಾಥಾ ಪಟ್ಟಣದ ಹೊಸ್ ಬಸ್ ನಿಲ್ದಾಣದ ವರೆಗೆ ಸಂಚರಿಸಿತು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಹನುಮಂತಪ್ಪ ಪಿ ಎಚ್, ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ, ಡಾ ಗೌಬು ನಾಯಕ, ಡಾ ಸುರೇಶ ಪೂಜಾರ, ಡಾ ನೇಮಾವತಿ,ಶ್ರಿಕಾಂತ ಸರ್ಜಾಪೂರ, ಪ್ರವೀಣ ಹಳ್ಳಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು