ರಾಣೆಬೆನ್ನೂರ

ಪ್ಲಾಸ್ಟಿಕ್ ಮಾರಾಟ ಅಂಗಡಿಕಾರರಿಗೆ ಎಚ್ಚರಿಕೆ

ಪ್ಲಾಸ್ಟಿಕ್ ಮಾರಾಟ ಅಂಗಡಿಕಾರರಿಗೆ ಎಚ್ಚರಿಕೆ

ರಾಣೆಬೆನ್ನೂರು 27:  ನಗರದಲ್ಲಿ ಸರಕಾರದ ನಿಯಮವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ, ದೂರಿನ ಮೇರೆಗೆ, ನಗರಸಭೆ ಪೌರಾಯುಕ್ತರು  ದಾಳಿ ಮಾಡಿ, ಎರಡು ನೂರು ಕೆಜಿ ಪ್ಲಾಸ್ಟಿಕ್ ವಸಪಡಿಸಿಕೊಂಡು, ಮಾಲೀಕರಿಗೆ 3000 ರೂಗಳ ದಂಡ ವಿಧಿಸಿದ್ದಾರೆ. ನಗರದ ನೆಹರು ಮಾರುಕಟ್ಟೆಯ ಕೆಲವು ಅಂಗಡಿಗಳಲ್ಲಿ ದಾಳಿ ನಡೆಸಲಾಗಿದೆ. ನಗರದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಮಾರಾಟ ಮಾಡಬಾರದು ಎಂದು ಸೂಚಿಸಿರುವ ಪೌರಾಯುಕ್ತ ಉದಯಕುಮಾರ್ ಬಿ ಟಿ ಅವರು, ಸೂಚನೆ ಉಲ್ಲಂಘಿಸಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದ್ದೆ ಆದರೆ, ನಗರಸಭೆಯಿಂದ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ರಾಘವೇಂದ್ರ. ಗಾವಡೆ, ಮಧುರಾಜ್ ಕಂಬಳಿ, ಮತ್ತು ನಗರಸಭಾ ಸಿಬ್ಬಂದಿ ಪಾಲ್ಗೊಂಡಿದ್ದರು.

 

ಸುದ್ದಿ ಓದಿ