ಬಳ್ಳಾರಿ

ಸುಕೋ ಬ್ಯಾಂಕಿನಿಂದ ಮತದಾರರ ಜಾಗೃತಿ ಜಾಥಾ

ಸುಕೋ ಬ್ಯಾಂಕಿನಿಂದ  ಮತದಾರರ ಜಾಗೃತಿ ಜಾಥಾ

ಲೋಕದರ್ಶನ ವರದಿ

ಬಳ್ಳಾರಿ 18: ಮತದಾನವು ಮೂಲಭೂತ  ಹಕ್ಕುಗಳಲ್ಲಿ ಒಂದಾಗಿದ್ದು ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕು ಎಂದು ಸುಕೋ ಬ್ಯಾಂಕ ನ ಆಡಳಿತ ಮಂಡಳಿ  ಕಾರ್ಯದರ್ಶಿಯಾದ  ವೆಂಕಟೇಶ್ ರಾವ್ ಅವರು ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ . 

ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ನಡೆಯಲಿರುವ  ಹಿನ್ನೆಲೆಯಲ್ಲಿ ಸುಕೋ ಬ್ಯಾಂಕಿನ ಸಿಬ್ಬಂದಿಗಳು ಮಂಗಳವಾರ ಏ. 18 ಮಂಗಳವಾರ ರಂದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರರು ತಪ್ಪದೆ ಮತದಾನ ಮಾಡುವುದು ಮಹತ್ತರವಾದದ್ದು. ಮತದಾನದ ಮೂಲಕ ಪ್ರತಿಯೊಬ್ಬರೂ ಸಂವಿಧಾನಬದ್ಧ ಹಕ್ಕನ್ನು ಚಲಾವಣೆ ಮಾಡಿ ತಮ್ಮ ಜನನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.   

    ಸುಕೋ ಬ್ಯಾಂಕಿನ ಮುಖ್ಯ ಕಚೇರಿಯಿಂದ  ಆರಂಭವಾದ ಜಾಥಾವು ಪಟೇಲ್ ನಗರ  ರಸ್ತೆಯ ಮೂಲಕ ಗಡಿಗಿ ಚನ್ನಪ್ಪ ವೃತ್ತದಲ್ಲಿ ಸಮಾರೋಪಗೊಂಡಿತು. ಬಳ್ಳಾರಿಯ ಮುಖ್ಯ ಕಚೇರಿಯ ಸಿಬ್ಬಂದಿಗಳು, ಮುಖ್ಯ ಶಾಖೆ, ರಾಯಲ್ ಸರ್ಕಲ್ ಶಾಖೆ ಹಾಗೂ  ಪಟೇಲ್ ನಗರ ಶಾಖೆಯ ಎಲ್ಲ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.  

    ಸುಕೋ ಬ್ಯಾಂಕಿನ ನಿರ್ದೇಶಕಿ  ಸಾವಿತ್ರಿ ಡಿ ಅವರು ಅತಿಥಿಗಳಾಗಿ ಮಾತನಾಡಿ ನಿಮ್ಮ ಮತವು ನಿಮ್ಮ ಧ್ವನಿ ಹಾಗೂ ನಿಮ್ಮ ಹಕ್ಕಾಗಿದ್ದು ತಪ್ಪದೆ ಮತ ಚಲಾವಣೆ ಮಾಡಿರಿ ಎಂದರು. 

   ಸುಕೋ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಡಿ.ಎಫ್.ಸಣ್ಣಕ್ಕಿ, ಜಾಥಾದ ಸಂಯೋಜಕಿ ದೀಪಾ ಪಾಟೀಲ್  ಅವರು ಪ್ರಜಾ ಪ್ರಭುತ್ವದ ಯಶಸ್ಸು ಮತದಾನದಲ್ಲಿದೆ. ಕಾರಣ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು. 

ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ, ಚೀಫ್ ಆಪರೇಟಿಂಗ್ ಆಫೀಸರ್ ಈಶ್ವರನ್ ಟಿ.ಎನ್ ಅವರೂ ಜಾಥಾದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ