ವರಸಿದ್ಧ ವಿನಾಯಕ ಮೂರ್ತಿಯ ಭವ್ಯ ಮೆರವಣಿಗೆ
ಲೋಕದರ್ಶನ ವರದಿ
ಶಿಗ್ಗಾವಿ 28: ಪಟ್ಟಣದ ಪುರಸಭೆ ಆವರಣದಲ್ಲಿ ಇದೇ ದಿ. 28 ರಂದು ಪ್ರತಿಷ್ಟಾಪನೆ ಗೊಳ್ಳಲಿರುವ ವರಸಿದ್ದಿ ವಿನಾಯಕ ಮೂರ್ತಿಯ ಭವ್ಯ ಮೆರವಣಿಗೆ, ಕುಂಭಗಳ ಮೆರವಣಿಗೆ ಪಟ್ಟಣದಲ್ಲಿ ನೂರಾರು ಭಕ್ಯರ ಮದ್ಯ ಪುರಸಭೆ ವತಿಯಿಂದ ಜರುಗಿತು.
ಮೆರವಣಿಗೆಗೆ ಗಂಜೀಗಟ್ಟಿ ಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು, ಪುರಸಭೆ ಆವರಣದಲ್ಲಿ ಪ್ರತಿಷ್ಟಾಪನೆ ಗೊಳ್ಳಲಿರುವ ನೂತನವಾಗಿ ನಿರ್ಮಿಸಿದ ವರಸಿದ್ಧಿ ವಿನಾಯಕ ಮೂರ್ತಿ ಮೆರವಣಿಗೆಯು ಪಟ್ಡಣದ ಅಂಚೆ ಕಚೇರಿಯಿಂದ ಆರಂಭವಾಗಿ ಟೆಂಪೋ ಸರ್ಕಲ್, ಹಳೆ ಬಸ್ ಸ್ಟ್ಯಾಂಡ್, ಮೈಲಾರಲಿಂಗೇಶ್ವರ ದೇವಸ್ಥಾನ, ಹಳೆಪೇಟೆಯ ಐತಿಹಾಸಿಕ ಇಡಗುಂಜಿ ಗಣಪತಿ ದೇವಸ್ಥಾನ ಮೂಲಕ ಹಾಯ್ದು ಚನ್ನಮ್ಮ ಸರ್ಕಲ್ ನಲ್ಲಿರುವ ಪುರಸಭೆ ಆವರಣ ಬಂದು ಸೇರಿತು.
ಇದೇ 28 ರಂದು ನಡೆಯುವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಪ್ರಯುಕ್ತ ಇಂದು ಭವ್ಯ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಯಿತ್ತು.
ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ರಂಗು ತಂದರು, ಪುರಸಭೆ ಸದಸ್ಯರಾದ ಶ್ರೀಕಾಂತ್ ಬುಳ್ಳಕ್ಕನವರ್. ಪರಶುರಾಮ ಸೊನ್ನದ್. ಸಂಗಪ್ಪ ಕಂಕನವಾಡ. ರೂಪಾ ಬನ್ನಿಕೊಪ್ಪ, ಅನುರಾಧಾ ಮಾಳವಾದೆ ಪುರಸಭೆ ಸಿಬ್ಬಂದಿಗಳಾದ ಶೈಲಜಾ ಪಾಟೀಲ ಎಸ್ ವಿ ಪಾಟೀಲ ಹಾಗೂ ಪುರಸಭೆಯ ಸಿಬ್ಬಂದಿಗಳು. ಪೌರಕಾಮರ್ಿಕರೊಳಗೊಂಡು, ಸ್ವ ಸಹಾಯ ಸಂಘಗಳ ಸದಸ್ಯರು, ಪಟ್ಟಣದ ವಿವಿಧ ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.