ಸೌಂದತ್ತಿ

ವಾಲ್ಮೀಕಿ ರಾಮಾಯಣ ಉತ್ತಮ ಮಾರ್ಗದರ್ಶಕ: ಶಿವಲಿಂಗಶ್ರೀ

ವಾಲ್ಮೀಕಿ ರಾಮಾಯಣ ಉತ್ತಮ ಮಾರ್ಗದರ್ಶಕ: ಶಿವಲಿಂಗಶ್ರೀ

ಸವದತ್ತಿ 10: ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ನಮ್ಮೆಲ್ಲರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದು, ಅದರಂತೆ ಡಾ. ಬಿ.ಆರ್.ಅಂಬೇಡಕರವರು ಬರೆದ ಸಂವಿಧಾನ ನಮ್ಮೆಲ್ಲರಿಗೂ ಪ್ರಜಾಪ್ರಭುತ್ವದ ವ್ಯವಸ್ಥೆಯ ಜೊತೆಗೆ ಕಾನೂನಿನ ನೆರವು ನೀಡುತ್ತದೆ ಎಂದು ಬಿದರಿ ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು.

     ಸ್ಥಳೀಯ ಗುರ್ಲಹೊಸೂರಿನ ಮಹರ್ಷಿ ವಾಲ್ಮೀಕಿ ಸಭಾಭವನದಲ್ಲಿ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿ ಶಾಸಕ ಆನಂದ ಮಾಮನಿ ಖಾಯಿಲೆಗೆ ಒಳಗಾಗಿದ್ದಾರೆ. ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಖಾಯಿಲೆಗಳಿಗೆ ಒಳಗಾಗುವುದು ಸಹಜ, ಆದರೆ  ಗುಣಮುಖರಾಗಿ ಬರುತ್ತಿದ್ದಾರೆ. ಎಲ್ಲರೂ ಸೇರಿ ಅವರು ಆರೋಗ್ಯವಂತರಾಗಿ ಬರಲಿ ಎಂದು ಬಿದರಿ ಕುಮಾರೇಶ್ವರ, ಮಹರ್ಷಿ ವಾಲ್ಮೀಕಿಯವರಲ್ಲಿ  ಮತ್ತು ತಾಯಿ ರೇಣುಕಾಮಾತೆಯಲ್ಲಿ ಪ್ರಾರ್ಥಿಸೋಣ ಎಂದರು 

     ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿಯವರ ಪುತ್ರಿ ಚೇತನಾ ಮಾಮನಿಯವರು ಸಂದೇಶ ವಾಚನ ಮಾಡಿದರು.ಡಾ.ಎಚ್.ಎಫ್.ಗೋಟಿ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಉಪನ್ಯಾಸ ನೀಡಿದರು .ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶೀಂತ್ರಿ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ ಜಿ.ಬಿ.ಜಕ್ಕನಗೌಡರ, ಇಓ ಯಶ್ವಂತಕುಮಾರ, ಚಿನ್ಮಯ ಆನಂದ ಮಾಮನಿ, ಅಭಿಯಂತರ ಎಚ್.ಎ.ಕದ್ರಾಪುರ,  ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಪೂಜಾರ, ತಾಲೂಕಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಭೀಮಗೋಳ. ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ, ಆಯ್.ಪಿ.ಪಾಟೀಲ, ದ್ಯಾಮಣ್ಣ ಸುತಗಟ್ಟಿ  ವೈ.ವೈ.ಕಾಳಪ್ಪನವರ ಉಪಸ್ಥಿತರಿದ್ದರು.

 ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ  ಸ್ವಾಗತಿಸಿದರು, ಆಶಾ ಪರೀಟ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ