ವಜ್ರ ಕವಚ ಶೋಭಾಯಾತ್ರೆ
ಲೋಕದರ್ಶನ ವರದಿ
ಸವದತ್ತಿ 23: ಸಮೀಪದ ಮುನವಳ್ಳಿ ಪಟ್ಟಣದ ಆರಾಧ್ಯದೈವ, ಐತಿಹಾಸಿಕ ಪ್ರಸಿದ್ಧ ಪಂಚಲಿಂಗೇಶ್ವರ ದೇವರಿಗೆ ಹಾಗೂ ವಸ್ತಿ ವೀರಭದ್ರೇಶ್ವರ ದೇವರಿಗೆ ಡಾ. ವೆಂಕಟೇಶ ನಾಯಿಕ ದಂಪತಿ ಅಪರ್ಿಸಿದ ವಜ್ರ ಕವಚಗಳ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು. ನಾಯಿಕ ಆಸ್ಪತ್ರೆಯಿಂದ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಕಲ ಮಂಗಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ಜರುಗಿತು. ವೀರಯ್ಯ ಶಾಸ್ತ್ರಿಗಳು, ಡಾ. ವೆಂಕಟೇಶ ನಾಯಿಕ, ಸುಜಾತಾ ನಾಯಿಕ, ಸಂತ ಮಂಡಳಿ, ಶಾರದಾ ಭಜನಾ ಮಂಡಳಿ, ಪಂಚಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಗಣ್ಯರು ಇದ್ದರು