ತಾಳಿಕೋಟಿ

ಕೆಲಸ ಮಾಡದ ಅಧಿಕಾರಿಗಳು ಜಾಗ ಖಾಲಿ ಮಾಡಿ

ಕೆಲಸ ಮಾಡದ ಅಧಿಕಾರಿಗಳು ಜಾಗ ಖಾಲಿ ಮಾಡಿ

ಪುರಸಭೆ ಪ್ರಗತಿ ಪರಿಶೀಲಿಸಿ ಶಾಸಕ ನಾಡಗೌಡ : ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವತರ್ಿಸಿ

ತಾಳಿಕೋಟೆ: ರಾಜ್ಯದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಪುರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ. ಪುರಸಭೆ ಮತ್ತೆ ನಂಬರ್ 1 ಪಟ್ಟ ಸಿಗುವಂತೆ ಕೆಲಸ ಮಾಡಬೇಕು. ಯಾವ ನೌಕರರು ಕೆಲಸ ಮಾಡುವದಿಲ್ಲವೋ ಅವರು ಜಾಗ ಖಾಲಿ ಮಾಡಿ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿ ಸಬೇಕು ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುರಸಭೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕರ ವಸೂಲಾತಿಯಲ್ಲಿ ಮತ್ತು ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಪುರಸಭೆಯಲ್ಲಿ ಸದ್ಯ ಎಲ್ಲ ಬಜೇಟ್ ಇಲ್ಲದಿರುವದು ಖೇದರಕರ. ಅಧಿಕಾರಿಗಳು ಕರ ವಸೂಲಾತಿ ಸರಿಯಾಗಿ ಮಾಡಿಲ್ಲ. ಕರ ವಸೂಲಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು. ಯಾರು ಕರ ಕಟ್ಟುವದಿಲ್ಲವೋ ಅವರಿಗೆ ನೋಟಿಸ್ ನೀಡಬೇಕು. ನವೆಂಬರ್ ಒಳಗೆ ಎಲ್ಲ ಕರ ವಸೂಲಿ ಮಾಡಬೇಕು. ಜನರ ಪುರಸಭೆ ತೆರಿಗೆಯನ್ನು ನಿಗದಿತ ಕಾಲಾವಧಿಯೊಳಗೆ ಕಟ್ಟಿ ಸ್ಥಳಿಯ ಸಂಸ್ಥೆಗಳ ಆಡಳಿತ ಸುಗಮವಾಗಲು ಸಹಕರಿಸಬೇಕು ಎಂದರು. ಸದ್ಯಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ರಾಡಿ ನೀರು ಬರದಂತೆ ಸ್ವಚ್ಚತೆ ಕೈಕೊಳ್ಳಲು ಸೂಚಿಸಲಾಯಿತು. ಬೀದಿ ದೀಪಗಳ ಬದಾಲವಣೆಗೆ ಎರಡು ಬಾರಿ ಟೆಂಡರ್ ಕರೆದರೂ ಅರ್ಜಿ ಹಾಕಿಲ್ಲ. ಶಾರ್ಟ ಟೆಂಡರ್ ಕರೆಯಲು ಸೂಚಿಸಲಾಯಿತು. ಮುಖ್ಯಾಧಿಕಾರಿಗಳು ಸ್ವಚ್ಚತೆ ಬಗ್ಗೆ ಮೊದಲ ಆಧ್ಯತೆ ನೀಡಬೇಕು. ಪ್ರತಿ ಮನೆಯಿಂದಲೂ ಕಸ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಮುಖ್ಯಾಧಿಕಾರಿಗಳು ಪ್ರತಿ ದಿನ 2 ವಾರ್ಡಗಳಿಗೆ ಬೇಟಿ ನೀಡಿ ಅಲ್ಲಿ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಚರ್ಚೆಸಿ ಅಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಬೇಕು. ಹೆಚ್ಚಿನ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ಸಿಸಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಅವುಗಳ ಗುಣಮಟ್ಟದಿಂದ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಕೆಲವರು ಬಂದ್ ಮಾಡಿಸಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಂದು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಅರ್ಧ ಕಾಮಗಾರಿ ಮಾಡಿ ಪೂರ್ಣ ಬಿಲ್ ಎತ್ತಿದ್ದಾರೆ. ಅದನ್ನು ಸರಿಪಡಿಸಿ ಎಂದರೆ ಅಪಪ್ರಚಾರ ಮಾಡುತ್ತಿದ್ದಾರೆ. ಎಷ್ಟೆ ಅಪಪ್ರಚಾರ ಮಾಡಿದರೂ ನಾನು ಬಗ್ಗೊಲ್ಲ. ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಲೇಔಟಗಳಲ್ಲಿ ಪ್ಲಾಟಗಳ ಉತಾರೆ ಸಲುವಾಗಿ ಸಾರ್ವಜನಿಕರ ಸುಖಾ ಸುಮ್ಮನೆ ತಿರುಗಾಡಿಸುವದು ಬೇಡ. ಲೇಔಟ ನಿರ್ಮಾಣ ಮಾಡುವಾಗ ಎಲ್ಲ ದಾಖಲೆ ನೀಡಿರುತ್ತಾರೆ. ಆದರೂ ಸಹ ಜನರಿಗೆ ದಾಖಲೆಗಳಿಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಇದು ನಿಲ್ಲಬೇಕು. ಉತಾರೆಗಳನ್ನು 45 ದಿನಗಳಲ್ಲಿ ಪೂರೈಸಬೇಕು. ಇಲ್ಲದಿದ್ದರೆ ಜನರು ಯೋಜನಾ ನಿರ್ದೇಶಕರು ಅಥವಾ ನನಗೆ ನೇರವಾಗಿ ದೂರು ನೀಡಿ, ಅಂತವರ ಮೇಲೆ ಶಿಸ್ತು ಕ್ರಮ ಕೈಕೊಳ್ಳಲಾಗುವದು. ಅಕ್ರಮ ಲೇಔಟಗಳಿಗೆ ಉತಾರೆಗಳನ್ನು ನೀಡಿರುವದು ತನಿಖೆ ನಡೆಯುತ್ತಿದೆ. ಅವಧಿ ಮುಗಿದ ಮಳಿಗೆಗಳ ಬಾಡಿಗೆದಾರರ ಮನವೊಲಿಸಿ  ಖಾಲಿ ಮಾಡಿಸಿ, ಸಿಬ್ಬಂದಿಗಳಿಗೆ ಬಯೋಮೇಟ್ರಿಕ್ ಹಾಜರಾತಿ ಪದ್ದತಿಯನ್ನು ಜಾರಿಗೊಳಿಸಿ, ಆಡಳಿತ ವಿಭಾಗ ಚುರುಕುಗೊಳಿಸಬೇಕು. ಯಾವುದೇ ಲೋಪವಾಗದಂತೆ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಬೇಕು ಎಂದರು.

**ಎಕರೆ ಜಮೀನು ನಾಪತ್ತೆ :- ಪಟ್ಟಣ ಬಡವರಿಗಾಗಿ ಜಿ ಪ್ಲಸ್ 2 ಮನೆಗಳ ನಿರ್ಮಿಸುವ ಉದ್ದೇಶದಿಂದ 8 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಆದರೆ 7 ಎಕರೆ ಇದೆ ಎಂದು ಸಭೆಗೆ ಮುಖ್ಯಾಧಿಕಾರಿಗಳು ತಿಳಿಸುತ್ತಿದ್ದಂರೆ ಗರಂ ಆದ ಶಾಸಕು 8 ಎಕರೆ ಅಲ್ಲೇನ್ರೀ ಗುರುತಿಸಿದ್ದು. ನಾನು ಶಾಸಕ ಇದ್ದಾಗಲೇ ಪೈನಲ್ ಮಾಡಿತ್ತು. ಈಗ 7 ಎಕರೆ ಇದೆ ಅಂದರೆ ಹೇಗೆ? ಇನ್ನೊಮ್ಮೆ ಸರ್ವೇ  ಮಾಡಿಸಿ 8 ಎಕರೆ ಜಮೀನನ್ನು ಗುರುತಿಸಿ ಶೀಘ್ರದಲ್ಲಿಯೇ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವದು ಎಂದರು. 

 ನಗರಾಬಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಇಇ ಅನೀಲಕುಮಾರ ಮುದ್ದಾ, ನಗರ ನೀರು ಸರಬರಾಜು ವಿಭಾಗದ ಎಇಇ ಶ್ರೀನಿವಾಸ, ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪರಶುರಾಮ ತಂಗಡಗಿ, ಸೈನಾಬಿ ಚಿತ್ತರಗಿ, ಕಸ್ತೂರಿಬಾಯಿ ಬಿರಾದಾರ, ಮುಸ್ತಫಾ ಚೌದ್ರಿ, ಮುತ್ತಪ್ಪ ಚಮಲಾಪೂರ, ಅಣ್ಣಪ್ಪ ಜಗತಾಪ, ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ನಿಂಗರಾಜ ಕುಂಟೋಜಿ, ದುಂಡಪ್ಪಗೌಡ ಪಾಟೀಲ, ಯಾಸೀನ ಮಮದಾಪೂರ, ಮುದಕಪ್ಪ ಬಡಿಗೇರ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ