ರಾಣೆಬೆನ್ನೂರ

ರೈತರ ಸಂಕಷ್ಠಗಳಿಗೆ ಸ್ಪಂಧಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ರೈತರ ಸಂಕಷ್ಠಗಳಿಗೆ ಸ್ಪಂಧಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಲೋಕದರ್ಶನ ವರದಿ

ರಾಣೇಬೆನ್ನೂರು 27: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ರೈತರ ಬೆಳೆಹಾನಿ, ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿ ಬೀದಿಯಲ್ಲಿ ಜೀವನ ಮಾಡುವ ದು:ಸ್ಥಿತಿ ಬಂದೊದಗಿದ್ದು ಜಿಲ್ಲಾಡಳಿತ ರೈತರ ಸಂಕಷ್ಠಗಳಿಗೆ ಸ್ಪಂಧಿಸಿ ಸಮರೋಪಾದಿ ಪರಿಹಾರಕ್ಕೆ ಮುಂದಾಗಬೇಕೆಂದು ಜಿಲ್ಲಾರೈತ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಒತ್ತಾಯಿಸಿದ್ದಾರೆ. 

ನಗರದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವಅವರು, ಕಳೆದ 2021-2022 ರಲ್ಲಿ ಬೆಳೆ ಪರಿಹಾರ ಮತ್ತು ಬೆಳೆವಿಮೆ ಸಕರ್ಾರ ಮಂಜೂರ ಮಾಡುವಲ್ಲಿ ವಿಫಲವಾಗಿದೆ.ಅಧಿಕಾರಿಗಳು ತಕ್ಷಣಎಚ್ಚೆತ್ತುಕೊಂಡುರೈತರ ನೆರವಿಗೆಧಾವಿಸಬೇಕೆಂದು ತಿಳಿಸಿದರು.ಸಕರ್ಾರ ನೀಡುವ ಪರಿಹಾರ ವಿತರಣೆಯಲ್ಲಿತಾರತಮ್ಯ ಮಾಡದೇಎಲ್ಲ ಹೊಬಳಿಗಳಿಗೆ ಸಮಾನರೀತಿಯಿಂದಕಾಣಬೇಕು.ಅಧಿಕಾರಿಗಳು ಕೇವಲ ಕಣ್ಣೊರೆಸುವತಂತ್ರಗಾರಿಕೆ ಮಾಡುತ್ತಾರಾಜಕೀಯ ಬೆರೆಸದೇ ಕೇವಲ ಕೆಲವೇ ರೈತರಿಗೆ ಈ ಸೌಲಭ್ಯ ನೀಡಿ ಕೈ ತೊಳೆದು ಕೊಳ್ಳುವ ಕೆಲಸವನ್ನು ಮಾಡಬಾರದುಎಂದುಕೃಷ್ಣಮೂತರ್ಿ ಎಚ್ಚರಿಸಿದರು.

ಜಿಲ್ಲಾ ಸಂಘಟನಾ ಕಾರ್ಯದಶರ್ಿ ಬಿ.ಕೆ.ರಾಜನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಅನೇಕ ಮನೆಗಳು ಬಿದ್ದಿದ್ದು ಸರಿಯಾದ ಸಮೀಕ್ಷೆ ಮಾಡಿಅರ್ಹ ಫಲಾನುಭವಿಗಳನ್ನು ಗುತರ್ಿಸಿ ಪರಿಹಾರ ನೀಡಬೇಕು. ಮತ್ತು ಪಂಪ್ಸೆಟ್ಗಳು ಹಾಳಾಗಿದ್ದು ಅವುಗಳನ್ನು ಮಂಜೂರ ಮಾಡಬೇಕುಜೊತೆಗೆ ಹೆಸ್ಕಾಂ ಇಲಾಖೆಯವರು ಸಮರ್ಪಕವಾದರೀತಿಯಲ್ಲಿರೈತರಿಗೆ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂದರು 

ಸುದ್ದಿ ಓದಿ