ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ: ಸಕ್ರಮಕ್ಕೆ ಅಜರ್ಿ ಸಲ್ಲಿಕೆಗೆ ಅವಕಾಶ

ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ: ಸಕ್ರಮಕ್ಕೆ ಅಜರ್ಿ ಸಲ್ಲಿಕೆಗೆ ಅವಕಾಶ

ಬಳ್ಳಾರಿ 14: ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೆ ಸಕ್ರಮಗೊಳಿಸಲು ಸರಕಾರವು ಕನರ್ಾಟಕ ಭೂ ಕಂದಯ ಕಾಯ್ದೆ 1964ರ ಕಲಂ 94ಎ(4)ಗೆ ತಿದ್ದುಪಡಿ ತಂದು ಮತ್ತು ಕನರ್ಾಟಕ ಭೂ ಕಂದಾಯ ನಿಯಮಗಳು 1966ಕ್ಕೆ ಹೊಸ ನಿಯಮ 108ಸಿಸಿಸಿ ಸೇರ್ಪಡೆಗೊಳಿಸಿ ಸಾಗುವಳಿದಾರರಿಂದ ನಮೂನೆ-57ರಲ್ಲಿ ಅಜರ್ಿಗಳನ್ನು ಸ್ವೀಕರಿಸಲು ಆದೇಶಿಸಲಾಗಿದ್ದು, 

ಈ ಸಂಬಂಧ ಸರಕಾರವು ಅಜರ್ಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಅನಧಿಕೃತ ಸಾಗುವಳಿಕೆಯನ್ನು ಸಕ್ರಮಗೊಳಿಸುವುದಕ್ಕಾಗಿ ಈ ಹಿಂದೆ ಇದ್ದಂತಹ ಕಟ್ ಅಪ್ 14-04-1990ದಿನಾಂಕವನ್ನು 01-01-2005 ಎಂದು ದಿನಾಂಕ ನಿಗದಿಪಡಿಸಲಾಗಿದೆ. ಅಂತ ಸಾಗುವಳಿದಾರರು ನಮೂನೆ-57ನ್ನು ಡಿ.17ರಿಂದ 2019ರ ಮಾಚರ್್ 16ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಗರ ವ್ಯಾಪ್ತಿಯಲ್ಲಿ ಬರುವ ಜಮೀನುಗಳನ್ನು ಕನರ್ಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(5)ರ ಅಡಿ ಬರುವ ಜಮೀನುಗಳನ್ನು ಸಕ್ರಮಗೊಳಿಸಬಾರದೆಂದು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಮೂನೆ-57 ಅಜರ್ಿಯ ಜೊತೆಗೆ 100 ರೂ.ಗಳ ಚಲನ್ ಜಮೀನಿಗೆ ಸಂಬಂಧಿಸಿದ ದಾಖಲೆಗಲೊಂದಿಗೆ ನಮೂನೆ-57ರಲ್ಲಿ ಅಜರ್ಿಯನ್ನು ಸಂಬಂಧಿಸಿದ ತಹಸೀಲ್ದಾರ್ ಕಾಯರ್ಾಲಯಕ್ಕೆ ಸಲ್ಲಿಸಬೇಕು ಎಂದು ಅವರು   ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಹಸೀಲ್ದಾರ್ ಕಾಯರ್ಾಲಯವನ್ನು ಸಂಪಕರ್ಿಸಬಹುದು.


ಸುದ್ದಿ ಓದಿ