ಉಗರಗೋಳ: ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಉಗರಗೋಳ 01: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಬುಧವಾರ ಬೆಳಗ್ಗೆಯಿಂದಲೇ ಜನರು ಶುಭ್ರವಾದ ಬಟ್ಟೆ ಧರಿಸಿ, ಮನೆಗಳಿಗೆ ಗಣೇಶ ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿದರು. ಬಳಿಕ, ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಶಕ್ಕೆ ಅಂಟಿರುವ ಕರೊನಾ ತೋಲಗಿದ ಕಾರಣ. ಪ್ರತಿಯೋಬ್ಬರಿಗೋ ವಿಘ್ನ ದೂರವಾಗಲಿ ಎಂದು ಪ್ರಾರ್ಥಿಸಿದರು. ಗ್ರಾಮದ ದೇವಸ್ಥಾನಗಳಲ್ಲಿ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ರಮೇಶ ಪಾಟೀಲ, ರಾಜಶೇಖರ ಹಿರೇಮಠ, ಮಲ್ಲನಗೌಡ ಪಾಟೀಲ, ಸುಮಂತ ಸವದತ್ತಿ, ದಿಲಾವರ ಬಾರಿಗಿಡದ, ರಾಜು ಪಾಟೀಲ, ನವೀನ ಕಲಾಲ, ಶೇಖನಗೌಡ ಪಾಟೀಲ, ಸದ್ದಾಂ ಗುಡುನವರ, ರಾಯನಗೌಡ ಪಾಟೀಲ, ಇಮಾಮಹುಸೇನ್ ಗೂಡುನವರ, ಸನ್ಮೀತ್ ಪಾಟೀಲ, ಆಶಾರಾಣಿ, ಉಷಾರಾಣಿ, ಸ್ಪೂರ್ತಿ,ಸ್ಪಧ್ರಾ, ಹಾಗೂ ಇತರರು ಇದ್ದರು