ಜಮಖಂಡಿ

ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸ್ಫೋಟ: ಇಬ್ಬರು ಮಕ್ಕಳಿಗೆ ಗಂಭೀರ

ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸ್ಫೋಟ: ಇಬ್ಬರು ಮಕ್ಕಳಿಗೆ ಗಂಭೀರ
ಜಮಖಂಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕುಕ್ಕರ್ ಬ್ಲಾಸ್ಟ್ದಲ್ಲಿ ಗಾಯಗೊಂಡಿರುವ ಇಬ್ಬರು ಸಹೋದರರು ಚಿಕಿತ್ಸೆಯನ್ನು ಪಡೆದು

ಲೋಕದರ್ಶನ ವರದಿ

ಜಮಖಂಡಿ 10: ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಬ್ಲಾಸ್ಟ್ದಿಂದ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಸಾವಳಗಿ ಗ್ರಾಮದ ಬ್ಯಾಡಗಿ ತೋಟದ ವಸತಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಲು ಕುಕ್ಕರ್ನಲ್ಲಿ ಬೆಳೆ ಕಾಳು ಬೆಯುಸುತ್ತಿದ್ದ ಸಮಯದಲ್ಲಿ ಕುಕ್ಕರ್ ಬ್ಲಾಸ್ಟ್ ಗೊಂಡಿದ್ದು. ಕುಕ್ಕರ್ ಬ್ಲಾಸ್ಟ್ದಿಂದ ಅಡುಗೆ ಕೋಣೆಯ ಮೇಲ್ಛಾವಣೆ ಭಾಗಕ್ಕೆ ಸಿಡಿದ ಪರಿಣಾಮ ಸಮರ್ಥ ಹನಮಂತ ಅಟ್ಯಾಳ (3), ಅದ್ವೀಕ ಹನಮಂತ ಅಟ್ಯಾಳ (5) ಇಬ್ಬರು ಸಹೋದರರು ಆಟವಾಡುವ ಸಮಯದಲ್ಲಿ ಕುಕ್ಕರ್ ಬ್ಲಾಸ್ಟ್ ಗೊಂಡಿದ್ದು. ಸಮರ್ಥನಿಗೆ ಕಿವಿ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು. ಗಾಯಗೊಂಡಿದ್ದಾನೆ. ಮತ್ತೋರ್ವ ಸಹೋದರ ಅದ್ವೀಕನಿಗೆ ತಲೆ ಭಾಗಕ್ಕೆ ಪೆಟ್ಟು ಬಿದ್ದು ಗಂಭೀರ ಗಾಯಗೊಂಡಿದ್ದಾನೆ. 

ಇಬ್ಬರು ಮಕ್ಕಳನ್ನು ಸಾವಳಗಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಸಹೋದರರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.



ಸುದ್ದಿ ಓದಿ