ಕಾಗವಾಡ

ಶಿರೋಳ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುರೇಶ ಪಾಟೀಲರಿಗೆ ಸನ್ಮಾನ

ಶಿರೋಳ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುರೇಶ ಪಾಟೀಲರಿಗೆ ಸನ್ಮಾನ

ಲೋಕದರ್ಶನ ವರದಿ 

 ಕಾಗವಾಡ 20 :  ತಾಲೂಕಿನ ಮಂಗಾವತಿ ಗ್ರಾಮದ ಸುಪುತ್ರರಾದ ಸುರೇಶ ಜಗ್ಗೌಡ ಪಾಟೀಲ ಇವರು ಮಹಾರಾಷ್ಟ್ರದ ಶಿರೋಳ ತಾಲೂಕಿನ ಶಿರೋಳ ಪಟ್ಟಣದ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 15 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಇತ್ತಿಚಿಗೆ ನಿವೃತ್ತರಾಗಿದ್ದು, ಅವರನ್ನು ಶಿರಗುಪ್ಪಿಯ ಹೆಸರಾಂತ ದಂತ ವೈದ್ಯರು, ಅಮೋಲ್ ಜನಕಲ್ಯಾಣ ಪ್ರತಿಷ್ಠಾನ ಸ್ಥಾಪಿಸಿ, ಜನರಿಗೆ ಸಾಮಾಜಿಕ ಸೇವೆ ನೀಡುತ್ತಿರುವ ಡಾಕ್ಟರ್ ಅಮೋಲ್ ಸರಡೆ ಅವರು ಸನ್ಮಾನಿಸಿ, ಅವರ ನಿವೃತ್ತ ಜೀವನಕ್ಕೆ ಶುಭ ಕೋರಿದ್ದಾರೆ. 

ಈ ವೇಳೆ ಡಾ. ಅಮೋಲ್ ಸರಡೆ ಮಾತನಾಡಿ, ಮಂಗಾವತಿ ಗ್ರಾಮದ ಸುಪುತ್ರರು, ಹಿತೈಷಿಗಳು, ಆತ್ಮೀಯರಾದ ಸುರೇಶ ಪಾಟೀಲ ಅವರು ಶಿರೋಳ್‌ನ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ವಿಭಾಗದಲ್ಲಿ ಸುಮಾರು 15 ವರ್ಷಗಳ ವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ, ನಿವೃತ್ತರಾದ ಪ್ರಯುಕ್ತ ನಮ್ಮ ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಅವರನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಿದ್ದೇವೆ. ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ, ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸುತ್ತೇವೆ ಎಂದರು. 

ಇನ್ನೂ ಸನ್ಮಾನ ಸ್ವೀಕರಿಸಿದ ಸುರೇಶ್ ಪಾಟೀಲ್ ಮಾತನಾಡಿ, ನನ್ನನ್ನು ಸನ್ಮಾನಿಸಿ, ಶುಭಾಶಯ ಕೋರಿದ ಡಾಕ್ಟರ್ ಅಮೋಲ್ ಸರಡೆ ಅವರಿಗೂ ಅಮೋಲ್ ಜನಕಲ್ಯಾಣ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೂ ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ವೇಳೆ  ಮುಖಂಡರಾದ ಶೇಖರ ಪಾಟೀಲ, ಲಕ್ಷ್ಮಣ ಗುಂಜಾಳೆ, ಕಾಡಗೊಂಡ ಪಾಟೀಲ, ರಾಜಗೊಂಡ ಪಾಟೀಲ, ದೀಲೀಪ ಪಾಟೀಲ, ದಾದಗೊಂಡ ಪಾಟೀಲ ಸತೀಶ ಬೆಕ್ಕೇರಿ, ಅನೀಲ ಸುಂಠೆ, ನಂದು ಪಾಟೀಲ, ಸಿದಗೊಂಡ ಪಾಟೀಲ, ಅನೀಲ ಘಟಗೆ, ಗೀರೀಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ