ಪಿಕಾರ್ಡ ಬ್ಯಾಂಕ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಅವರಿಗೆ ಸನ್ಮಾನ ಗೌರವ
Tribute to Sahebagowda Utnala, Vice President, Picarda Bank
ಪಿಕಾರ್ಡ ಬ್ಯಾಂಕ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಅವರಿಗೆ ಸನ್ಮಾನ ಗೌರವ
ಸಿಂದಗಿ,27 ; ಬಹುದಿನಗಳಿಂದ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಹಿನ್ನಲೆಯಲ್ಲಿ ಇಂದು ಪಿಕಾರ್ಡ ಬ್ಯಾಂಕನ ಉಪಾದ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ಲಭಿಸಲಿ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಸದಸ್ಯ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಹೇಳಿದರು.
ಬಾಗೇವಾಡಿಯ ಪಿಕಾರ್ಡ ಬ್ಯಾಂಕ ಉಪಾದ್ಯಕ್ಷರಾಗಿ ಹಿನ್ನಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಪಿಕಾರ್ಡ ಬ್ಯಾಂಕ ಉಪಾದ್ಯಕ್ಷರಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಮಾತನಾಡಿ, ಹಲವಾರು ವರ್ಷಗಳಿಂದ ಶಾಸಕ ರಾಜುಗೌಡ ಪಾಟೀಲ ಅವರ ಕಟ್ಟಾಭಿಮಾನಿಯಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಪಿಎಲ್‌ಡಿ ಬ್ಯಾಂಕಿನ ಉಪಾದ್ಯಕ್ಷರಾಗಿ ಆಯ್ಕೆ ಮಾಡಿದ ನನಗೆ ಇನ್ನೂ ತಾಲೂಕಿನಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದ ಶಾಸಕರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಅಭಿನಂದನೆಗಳು ಸಲ್ಲಿಸಿದರು.
ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಅಧಿಕಾರ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ ಬಟ್ಟೆ ಮುಳ್ಳಿನ ಮೇಲೆ ಬಿದ್ದರು ಹರಿಯುತ್ತದೆ ಬಟ್ಟೆಯ ಮೇಲೆ ಮುಳ್ಳು ಬಿದ್ದರು ಕೂಡಾ ಹರಿಯುತ್ತದೆ ಅದಕ್ಕೆ ಅಧಿಕಾರ ವಿದ್ದಾಗ ಪರೋಕಾರಿ ಕಾರ್ಯ ಮಾಡಿದ್ದಾಗ ಮಾತ್ರ ಹುದ್ದೆ ಅಲಂಕರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಕಾರಣ ನಿಮ್ಮ ಆಯ್ಕೆ ಸಹಕರಿಸಿದ ಶಾಸಕರಿಗೆ ಚ್ಯೂತಿ ಬಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಉದ್ದಿಮೆದಾರ ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಂಕರಗೌಡ ಬಿರಾದಾರ, ಶಿವು ಉತ್ನಾಳ, ಸೇರಿದಂತೆ ಹಲವರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 