ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ: ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 04: ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂಡಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ವಕ್ಪ್ ನೊಟಿಫಿಕಿಷನ್ ರದ್ದು ಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ರಾಜ್ಯ ಸರ್ಕಾರ ವಕ್ಪ್ ಬೋರ್ಡ್ ಮೂಲಕ ರೈತರಿಗೆ ನೊಟೀಸ್ ನೀಡಿರುವುದನ್ನು ಖಂಡಿಸಿ ಶಿಗ್ಗಾವಿ ಮಂಡಲ ಬಿಜೆಪಿ ವತಿಯಿಂದ ಏರಿ್ಡಸಿದ್ದ ಬೃಹತ್ ಪ್ರತಿಭಟನಾರ???ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಶಿಗ್ಗಾವಿ ತಾಲೂಕಿನ ಸರ್ವೆ ನಂಬರ್ 417ರಲ್ಲಿ ನೂರಾರು ಜನ ಬಡವರಿಗೆ ಕೊಳಚೆ ಮಂಡಳಿಯಿಂದ ಮನೆ ಕಟ್ಟಲು ಅನುಮತಿ ನೀಡಿದ್ದೇವೆ. ಅದು ವಕ್ಪ್ ಆಸ್ತಿ ಅಂತದಾವೆ ಹೂಡಿದ್ದಾರೆ. ಶಿಗ್ಗಾವಿ ಬಡವರಿಗೆ ತಲೆ ಮೇಲೆ ಸೂರು ಇಲ್ಲದಂತ ವ್ಯವಸ್ಥೆ ಈ ವಕ್ಪ್ ಬೋರ್ಡ್ನಿಂದ ಆಗಿದೆ ಎಂದು ಆರೋಪಿಸಿದರು.
ಶಿಗ್ಗಾವಿಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಮಾಡಲು ಹೋದಾಗ ಅದು ವಕ್ಪ್ ಆಸ್ತಿ ಎಂದು ಅದರ ವಿರುದ್ದ ಕೊರ್ಟ್ಗೆ ಹೊಗಿದ್ದಾರೆ. ಅದನ್ನು ಹೋರಾಡಿಗೆದ್ದಿದ್ದೇವೆ. ವಿದ್ಯುತ್ ಸ್ಟೇಷನ್ ಮಾಡಿದ್ದೇವೆ. ಕಿತ್ತೂರು ರಾಣಿಚನ್ನಮ್ಮನ ಮೂರ್ತಿ ಸ್ಥಾಪನೆ ಮಾಡಲು ಅಡ್ಡಿ ಮಾಡಿದರು ಅದರ ವಿರುದ್ದ ಹೋರಾಡಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಿದ್ದೇನೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಕೆಲವೇ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಡಸ್ ಬಳಿ ಲಂಬಾಣಿ ತಾಂಡಾ ಇರುವ 19 ಎಕರೆ ಜಮೀನು ವಕ್ಪ್ ಆಸ್ತಿ ಎಂದು ಮಾಡಿದ್ದಾರೆ ಎಂದರು.ನಾನು ವಕ್ಪ್ ಬೋರ್ಡ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿದ್ದವರು ಕಾಂಗ್ರೆಸ್ನವರು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಚೀಟಿ ಕೊಟ್ಟರು, ಕಾಂಗ್ರೆಸ್ನ ದೊಡ್ಡದೊಡ್ಡ ನಾಯಕರೇ ವಕ್ಪ್ ಆಸ್ತಿ ನುಂಗಿದ್ದಾರೆ ಅದನ್ನು ವಾಪಸ್ ಪಡೆಯಬೇಕು ಎಂದು ವಕ್ಪ್ ಬೋರ್ಡ್ಗೆ ಹೇಳಿದ್ದೆ, ಅದನ್ನು ಈಗ ತಿರುಚಿ ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂದು ತಿರುಚುತ್ತಿದ್ದಾರೆ. ನಾನು ಹಾಗೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೊಟಿಸ್ ವಾಪಸ್ ಪಡೆದರೆ ಸಾಲದು, ವಕ್ಪ್ಗೆಜೆಟ್ ನೊಟೀಫಿಕೇಶನ್ ವಾಪಸ್ ಪಡೆಯಬೇಕು, ಅಷ್ಟೇಅಲ್ಲ, ವಕ್ಪ್ಕಾಯ್ದೆರದ್ದಾಗಬೇಕುಎಂದುಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಪ್ರಧಾನಿ ಮೋದಿಯವರು ಆ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿದ್ದಾರೆಎಂದರು. ನಿಮ್ಮಜಮೀನುರಕ್ಷಣೆ ನನ್ನದು:ಶಿಗ್ಗಾವಿ ಸವಣೂರುರೈತರು ನಿಮಗೆ ವಕ್ಪ್ ಬೋರ್ಡ್ ನಿಂದ ಬಂದ ನೊಟಿಸನ್ನು ನನ್ನಕಚೇರಿಗೆತಂದುಕೊಡಿ ನಿಮ್ಮ ಪರವಾಗಿ ನಾನು ನ್ಯಾಯಾಲಯದಲ್ಲಿ ಹೊರಾಟ ಮಾಡುತ್ತೇನೆ. ಶಿಗ್ಗಾವಿ ಸವಣೂರಿನರೈತರ ಒಂದಿಂಚು ಜಮೀನು ಬಿಡುವುದಿಲ್ಲ. ನಿಮ್ನಜಮೀನಿನ ಜವಾಬ್ದಾರಿ ನನಗೆ ಬಿಡಿ, ನಾನು ರಕ್ಚಣೆ ನೀಡುತ್ತೇನೆಎಂದು ಭರವಸೆ ನೀಡಿದರು.ಈಗ ಉಪ ಚುನಾವಣೆ ನಡೆಯುತ್ತಿರುವುದು ಬಿಜೆಪಿ ಹಾಗೂ ಲ್ಯಾಂಡ್ಜಿಹಾದ್ ನಡೆಸುತ್ತಿರುವಕಾಂಗ್ರೆಸ್ ವಿರುದ್ದ, ಈ ಕ್ಷೇತ್ರದಲ್ಲಿ ಸೌಹಾರ್ದತೆಇರಬೇಕು, ಹೆಣ್ಣುಮಕ್ಕಳು ಸುರಕ್ಷಿತವಾಗಿ ಶಾಲಾ ಕಾಲೇಜಿಗೆ ಹೋಗಬೇಕು. ಪೊಲಿಸ್ ದೌರ್ಜನ್ಯ ನಿಲ್ಲಬೇಕು.ಅದಕ್ಕಾಗಿ ಈಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಅವರಿಗೆ ಪಾಠ ಕಲಿಸಬೇಕು ಎಂದರು.ನಮ್ಮ ಸಣ್ಣ ಸಣ್ಣ ಮಕ್ಕಳನ್ನು ಪೊಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕಡಕೋಳ್ ಪ್ರಕರಣವನ್ನುಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದುಎಚ್ಚರಿಕೆ ನೀಡಿದರು.ಅಲ್ಲದೇ ಉಳಿಸೇ ಉಳಿಸುತ್ತೇವೆ. ರೈತರ ಭೂಮಿ ಉಳಿಸುತ್ತೇವೆ ಎಂದುಇದೇ ವೇಳೆ ಪ್ರತಿಜ್ಞೆ ಮಾಡಿದರು.ಪ್ರತಿಭಟನಾ???ಯಾಲಿಯಲ್ಲಿಮಾಜಿಸಚಿವರಾದಸಿ.ಟಿ. ರವಿ, ರಾಜುಗೌಡ, ಸಿ.ಸಿ.ಪಾಟೀಲ್, ಮಾಜಿಸಂಸದಪ್ರತಾಪ್ಸಿಂಹ, ಮಾಜಿಶಾಸಕರಾದಪಿ. ರಾಜೀವ್ ,ದತ್ತಾತ್ರೇಯಪಾಟೀಲ್ರೇವೂರಹಾಜರಿದ್ದರು.