ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ: ಡಾ .ಎಸ್. ಮಂಜುನಾಥ್
ಬಳ್ಳಾರಿ : ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕವು ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದರು.ನಂತರ ಅಲ್ಲಂ ಕರಿಬಸಪ್ಪ ಮತ್ತು ಅಲ್ಲಂ ಸುಮಂಗಳಮ್ಮ ದತ್ತಿ, ಕೋಳೂರು ಪಂಪನಗೌಡ ಮತ್ತು ನೀಲಮ್ಮ ದತ್ತಿ, ಜಾನೆಕುಂಟೆ ಸಿದ್ದ ಬಸಪ್ಪ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾತನಾಡುತ್ತಾ , ವಚನ ಸಾಹಿತ್ಯವನ್ನು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದ ನೋಡದೆ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಇರುವ ಉಪಾಯವನ್ನು ತಿಳಿದು ಬಾಳಬೇಕಿದೆ ಎಂದು ಡಾಕ್ಟರ್ ಎಸ್ ಮಂಜುನಾಥ್ ತಿಳಿಸಿದರು.ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ್ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಕನ್ನಡ ಅಭಿಮಾನವನ್ನು ಯುವಕರಲ್ಲಿ ಬಿತ್ತಿ ಬೆಳೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವಿಮ್ಸ್ ಕನ್ನಡ ಸಂಘದ ಅಧ್ಯಕ್ಷ ಡಾ. ಪರಸಪ್ಪ ಬಂದ್ರಕಳ್ಳಿ, ನಿವೃತ್ತ ಪೊಲೀಸ ಅಧಿಕಾರಿ ಹುಸೇನ್ ಸಾಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾಲೇಜಿನ ಉಪನಿರ್ದೇಶಕ ಡಾ. ಶೈಲಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಸ್ತಾವಿಕ ನುಡಿಗಳನ್ನಾಡಿದರು.ಡಾ. ಬಸವರಾಜ್ ಗದಗಿನ ಸ್ವಾಗತಿಸಿದರು. ಕಪಗಲ್ಲು ಬಿ ಚಂದ್ರಶೇಖರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.