ಕಥೆ ಮತ್ತು ವಿಶೇಷ ಲೇಖನಗಳು

ಇಹದ ಪರಿಮಳದ ಹಾದಿ

ಇಹದ ಪರಿಮಳದ ಹಾದಿ

-ಡಾ. ವೈ.ಎಂ.ಯಾಕೊಳ್ಳಿ, ಬೆಳಗಾವಿ

ಕಬ್ಬಿಗರ ಕನಸುಗಳೇ ಧಾರುಣಿಯ ಮೂಲಸಿರಿ' ಎನ್ನುತ್ತಾರೆ ಕವಿ ವಿ. ಕೃ. ಗೋಕಾಕ. ಕವಿಗಳದ್ದು ಬರಡಾದ ಲೋಕಕ್ಕೆ ಸೌಂದರ್ಯದ ಲೇಪ ಹಚ್ಚುವ ಕೆಲಸ. ಲೋಕದಲ್ಲಿ ಕಷ್ಟವಿದೆ, ಸಾವಿದೆ, ಅಳುವಿದೆ. ಆದರಷ್ಟೇ ಅಲ್ಲ, ಈ ಬದುಕು ಬದುಕಲೂ ಯೋಗ್ಯವಾಗಿದೆ. ಬದುಕುವ ಅವಕಾಶ ದೊರಕಿದೆಯಲ್ಲ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು? ಎಂಬ ಭರವಸೆಯೊಂದಿಗೆ ಬದುಕಬೇಕು ಎನ್ನುವದು ಕವಿಯ ಆದರ್ಶ ಸಂದೇಶ. "ಹಾಗೆಯೇ ಹೀಗೆಯೋ ಹೇಗೆ ಹೇಗೆಯೋ ಮುಗಿವುಂಟೆಂಬ ಭಾಗ್ಯವನು ನೆನೆದು ನಲಿ' ಎನ್ನುತ್ತಾರೆ ಡಿ. ವಿ. ಜಿ. 

ಬದುಕಲ್ಲಿ ನೋವಿರುವದನ್ನು ಯಾರೂ ಅಲ್ಲಗಳೆಯಲಾರರು. ಆದರೆ ನೋವಷ್ಟೇ ಇದೆ ಎಂದು ಯಾರೂ ವಾದಿಸಲಾರರು. ಆದರೆ ಅದನ್ನೇ ನಾವು ನೆನೆಯುತ್ತ ಕುಳಿತರೆ ಸಾವಿಗೆ ಮೊದಲೇ ಸತ್ತು ಹೋಗುತ್ತೇವೆ. ಹೀಗೆ ನಿತ್ಯ ಅಳುತ್ತಲೇ ಇರುವ ನಮ್ಮಂಥವರನ್ನು ನೋಡಿಯೇ 'ಒಚಿಟಿ ಜಜಜ ಣಡಿಣಥಿ ಛಣಡಿಡಿಜಜ ಚಿಣ ಥಣಥಿ' ಎಂಬ ಮಾತು ಬಂದಿರಬಹುದು. ಹೀಗೆ ಬದುಕು ಇರುವಾಗಲೇ ಅವನು ಕಳೆದುಕೊಳ್ಳುವ ಆಸೆ ಇದೆಯಲ್ಲ, ಅಂಥ ನಿರಾಶಾದಯಕ ಸಂಗತಿ ಇನ್ನೊಂದು ಇರಲಾರದು. ಆದ್ದರಿಂದಲೇ ನಾರ್ಮನ್ ಕಸಿನ್ಸ್ ಎಂಬ ಚಿಂತಕ- "ಸಾವು ಬದುಕಿನ ದೊಡ್ಡ ನಷ್ಟವೇನೂ ಅಲ್ಲ, ನಾವು ಬದುಕಿದ್ದಾಗ ನಮ್ಮೊಳಗೆ ಏನೇನು ಸಾಯುತ್ತದೆಯೋ ಅದೇ ದೊಡ್ಡನಷ್ಟ" ಎನ್ನುತ್ತಾನೆ. 

ಯಾರೂ ತಮ್ಮ ಬದುಕು ಹೀಗೆಯೇತಿರುವನ್ನು ಪಡೆದುಕೊಳ್ಳುತ್ತದೆ. ಎಂದು ತಿಳಿದಿರಲಾರರು. ತನ್ನ ಪ್ರಯೋಗಾಲಯದಲ್ಲಿ ಸದಾ ನೂರಾರು ಸಂಶೋಧನೆ ಮಾಡಿ ಯಶಸ್ವಿಯಾದ ವಿಜ್ಞಾನಿ ಕೂಡ, ಅಥವಾ ಜಗತ್ತಿಗೆ ಬದುಕಿನ ಮಾರ್ಗದರ್ಶನ ಮಾಡಿದ್ದೇನೆ ಎಂದು ನಂಬಿದ ತತ್ವಜ್ಞಾನಿಗೆ ಕೂಡ ಅದರ ಅಚ್ಚರಿಯ ತಿರುವುಗಳು ತಿಳಿದಿರಲಾರವು. ಇಲ್ಲಿ ಎಲ್ಲರೂ ಅನನುಭವಸ್ತರೇ ಅದಕ್ಕೆ ನಮ್ಮ ದಾರ್ಶನಿಕ ಕವಿ ಡಿ. ವಿ. ಜಿ.

ಪಂಡಿತರು ಶಾಸ್ತ್ರಿಗಳು ಸೂಕ ಚತುರತೆಯಿಂದ ಚಚರ್ಿನೆಹರುಭಯ ಅವರ ಪಾಡೇನಾಯ್ತು ಲೋಕಗಳ ಮರುಮಗಳ ಮಣ್ಣು ಬಾಯನು ಮುಚ್ಚಿ ಉಳಿದವರಂತವರೆಲ್ಲ. ಸೋತು ಮಲಗಿದರು ಎನ್ನುತ್ತಾರೆ ಪಂಡಿತ, ಶಾಸ್ತ್ರೀ, ವಿಜ್ಞಾನಿ, ಸಂಶೋಧಕ, ಜ್ಯೋತಿಷ್ಯ ಹೇಳುವ ಜ್ಯೋತಿಷಿ ಎಲ್ಲ ಸಾಮಾನ್ಯರಂತೆ ಮಣ್ಣ ಕೆಳಗೆ ಮಲಗಲೇ ಬೇಕು. ಆದ್ದರಿಂದಲೇ ಉಮರ್ ಖಯ್ಯಾಂ ಹೇಳುವದು ನಾವು ನಾಳೆಗಳ ಕಂಡಿಲ್ಲ ಎಂದು ಎನ್ನುತ್ತಾನೆ.

ಮುಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ 

ಹಿಂದೆಸೆಯ ತೆರೆ ಎತ್ತಿ ನೋಡಲಳವಲ್ಲ

ಈ ದೆಸೆಯ ಲೇರಡು ದಿನ ನಾವು ನೀವೆಂಬ ನುಡಿ

ಆಡುವೆವು ಬಳಿಕಿಲ್ಲ ನಾವು-ನೀವು 

ಇಲ್ಲಿರುವದು ಕವಿಯ ತಿಳಿವಿನ ಬೆಳಕು. ಈ ಬದುಕನ್ನು ಬಂದಂತೆ ನಾವು ಸ್ವೀಕರಿಸಬೇಕೆಂಬ ಬಹುದೊಡ್ಡ ಸತ್ಯ. ಈ ಸತ್ಯ ತಿಳಿಸಿಕೊಡುವ ಕೆಲಸವನ್ನು ನಮ್ಮ ಕವಿಗಳು ಕಾಲ-ಕಾಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ. ಆ ಕಾಲದಿಂದಲೂ ಇವತ್ತಿನವರೆಗೂ ಅವರು ಇರುವ ಬದುಕನ್ನು ಸಹ್ಯವಾಗಿಸುವ ಕಲೆ ಕಲಿಸುತ್ತಬಂದಿದ್ದಾರೆ 12ನೆಯ ಶತಮಾನದ ವಚನಕಾರರು ತಮ್ಮ ವಚನಗಳನ್ನು ಇಹ-ಪರಗಳ ನಡುವಿನ ದಾರಿ ಎನ್ನುತ್ತಾರೆ. ಕವಿ ನರಸಿಂಹಸ್ವಾಮಿಯವರ ಪ್ರಕಾರ ಇದು ಇಹದ ಪರಿಮಳದ ಹಾದಿ.  ಇಲ್ಲೆಲ್ಲ ಇರುವದು ಇಹದ ಪರಿಮಳದ ಮಾತೇ. ಪರಿಮಳ ಬದುಕಿನಲ್ಲಿ ತುಂಬಿದೆ. ಆದರೆ ಅದನ್ನು ಕಾಣುವ ಕಣ್ಣು ಬೇಕು. ಅದನ್ನು ತೋರಿಸುವ, ಕಾಣಿಸುವ ಕಲಿಸುವ, ಕೆಲಸ ಮಾಡಿದವರೇ ನಮ್ಮ ಕಬ್ಬಿಗರು. ಈ `ಕಬ್ಬಿಗರ ಹಾಡು' ನಮ್ಮ ಬದುಕಿನ ಪಾಡೂ ಆಗಬೇಕು.

ಕವಿಗಳು ಬರೀ ತಮ್ಮ ದುಃಖ ತೋಡಿಕೊಂಡಿಲ್ಲ 'ನನ್ನ ಪಾಡು ನಿಮಗೆ ಬೇಡ, ಅದು ನನಗೇ ಇರಲಿ, ನಿನ್ನ ಸುಖ-ಸಂತೋಷ ಹೆಚ್ಚಿಸಿದರೆ ನನ್ನ ಬರಹ ಸಾರ್ಥಕ' ಎಂದು ಬರೆಯುತ್ತ ಬಂದಿದ್ದಾರೆ. ಅಂತೆಯೆ ವರಕವಿ ಬೇಂದ್ರೆ `ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ, ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆ ದೆಯು ಕರಗಿದರೆ ಆ ಸವಿಯ ನೀಡು ನನಗೆ' ಎನ್ನುತ್ತಾರೆ. ಇಲ್ಲಿ ಕವಿಯ ಮುಖ್ಯ ಗಮನ ಇರುವದು ರಸಿಕನ ಕಲ್ಲು ಸಕ್ಕರೆಯಂಥ ಕರಗಬೇಕು ಎಂಬುದೇ ಆಗಿದೆ. ಆ ಸಕ್ಕರೆಯ ಹರಿವಿನಲ್ಲಿ ಎಲ್ಲವೂ ತಣಿಯಬೇಕು. ಅದಕ್ಕೆ ತನ್ನ ಕಾವ್ಯ ಪೂರಕವಾದರೆ, ಪ್ರೇರಕವಾದರೆ ತನ್ನ ಪ್ರಯತ್ನ ಸಾರ್ಥಕ ಎನ್ನುತ್ತಾನೆ. 

ಬರೀ ನೋವಿನ ಹಾಡು ಹಾಡುತ್ತ ಕುಳಿತರೆ, ಸಂಭ್ರಮ ಪಡುವುದಕ್ಕೆ, ಸಂತೋಷಕ್ಕೆ ಬದುಕಿನಲ್ಲಿ ಅವಕಾಶವೇ ಸಿಗಲಾರದು ಕವಿ ನರಸಿಂಹ ಸ್ವಾಮಿಗಳು ಇದಕ್ಕೆ ಉತ್ತರ ಕೊಡುತ್ತ 'ಬರೀ ನೋವಿನ ಹಾಡು ಹಾಡಬೇಕೇನು? ಬೇಡವೇ ಯಾರಿಗೂ ಸಿರಿಮಲ್ಲಿಗೆ?' ಎನ್ನುತ್ತಾರೆ. ಬದುಕಿನ ಸಂಭ್ರಮ, ಖುಷಿ ಹೊರತೆಗೆಯುವ ಕೆಲಸ ಮಾಡುತ್ತ ಬಂದ ಈ ಕವಿ-ಸಾಹಿತಿಗಳ ಕಾರ್ಯವನ್ನು ನಾವು ಆದರಿಸಬೇಕಾಗಿದೆ. ಬಡತನ-ನೋವುಗಳನ್ನು ಗೆಲ್ಲಲು ದಾರಿ ಈ ಕವಿ-ಸಾಹಿತಿಗಳ ಕಾವ್ಯದ ಸಾಲುಗಳಲ್ಲಿದೆ.

ಬಡತನ ಸಿರಿತನ ಕಡೆತನಕುಳಿದಾವೇನ

ಎದೆ ಹಿಗ್ಗು ಕಡೆ ಮಟ್ಟ

ಎನ್ನುವ ಕವಿ ಬೇಂದ್ರೆಯವರ ಸಾಲುಗಳು `ಎದೆ ಹಿಗ್ಗು' ಹೆಚ್ಚಬೇಕೆನ್ನುವ  ಪ್ರತಿಯೊಬ್ಬರ ಆದರ್ಶವಾಗಬೇಕಾಗಿದೆ. ಗಡಿ-ಗಡಿಗಳು ಗುಂಡಿನ ಕದನದಲ್ಲಿ ಮುಳುಗಿರುವಾಗ ಗಡಿಯೊಳಗಡೆಯೂ ನಮ್ಮ ಸೀಮೆಗಳು ತಲ್ಲಣಗೊಳ್ಳುತ್ತಿರುವಾಗ ಬದುಕು ನಿರಂತರ ಆಕ್ರಮಣಕ್ಕೆ ಈಡಾಗುತ್ತಿರುವಾಗ ನಾವು ಈ ನೆಮ್ಮದಿಯ ದಾರಿಯನ್ನು ಒತ್ತಾಯದಿಂದ ಆರಿಸಲೇಬೇಕಾಗಿದೆ. 

ಈಸುವದು ಇದ್ದು ಜಯಿಸುವುದು

ಮುಳುಗಿ ಸಾಯುವುದಲ್ಲ ಗಮ್ಯ     

ಎಂಬ ಕವಿ ಅಡಿಗರ ಸಾಲು ಬರೀ ಆದರ್ಶವಲ್ಲ, ಆಚರಣೆಯಾಗಬೇಕಾಗಿದೆ. ಇದು ಕವಿಯ ನಿರೀಕ್ಷೆ.


ಸುದ್ದಿ ಓದಿ