ಶಿಗ್ಗಾವ್

ಕ್ಷೇತ್ರವು ಸವಾಂರ್ಗೀಣ ಅಭಿವೃದ್ಧಿ ಸಾಧಿಸಿದೆ : ಕೇಂದ್ರ ರೇಲ್ವೆ ಸಚಿವ ವಿ.ಸೋಮಣ್ಣ

ಕ್ಷೇತ್ರವು ಸವಾಂರ್ಗೀಣ ಅಭಿವೃದ್ಧಿ ಸಾಧಿಸಿದೆ : ಕೇಂದ್ರ ರೇಲ್ವೆ ಸಚಿವ ವಿ.ಸೋಮಣ್ಣ


ಕ್ಷೇತ್ರವು ಸವಾಂರ್ಗೀಣ ಅಭಿವೃದ್ಧಿ ಸಾಧಿಸಿದೆ : ಕೇಂದ್ರ ರೇಲ್ವೆ ಸಚಿವ ವಿ.ಸೋಮಣ್ಣ   


ಶಿಗ್ಗಾವಿ  07: ಬೊಮ್ಮಾಯಿ 4 ಭಾರಿ ಗೆಲುವು ಸಾಧಿಸಿದ್ದಾರೆ. ಬೊಮ್ಮಾಯಿ ಅವಧಿಯಲ್ಲಿ,  ಕ್ಷೇತ್ರವು ಸವಾಂರ್ಗೀಣ ಅಭಿವೃದ್ಧಿ ಸಾಧಿಸಿದೆ ಎಂದು ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.  

    ಪಟ್ಟಣದಲ್ಲಿ ಸುದ್ದಿ ಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ 2008 ಮುಂಚೆ ಹಿಂದೂ ಮುಸ್ಲಿಂ ಗಲಾಟೆ ಆಗುತ್ತಿತ್ತು ನಂತರ ಒಂದು ಗಲಭೆ ಸಹಿತ ಆಗಿಲ್ಲ, ಇಡೀ ರಾಜ್ಯ ಸರ್ಕಾರ ನಿಂತು ಉಪ ಚುನಾವಣೆ ಮಾಡುತ್ತಿದ್ದೆ ಅನೇಕ ಜಲ್ವಂತ ಸಮಸ್ಯೆಗಳಿದ್ದರೂ ಸಹಿತ ಅವುಗಳನ್ನು ಬಗೇಹರಿಸದೇ ಅನಾವಶ್ಯಕವಾಗಿ ಕಾಲಹರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಪಂಜರದಲ್ಲಿದ್ದಾರೆ. ಅವರ ಪಕ್ಷದವರೇ ಅವರ ಕಾಲಳೇಯುತ್ತಿದ್ದಾರೆ. ಉಪ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುವುದಿಲ್ಲ, ಬೊಮ್ಮಾಯಿ ಮಗ ಭರತ ಬೊಮ್ಮಾಯಿ ಹೆಚ್ಚು ಅಂತರದಿಂದ ಗೆಲುವು ಸಾಧಿಸುವುದರ ಜೊತೆಗೆ 3 ಕ್ಷೇತ್ರದ ಉಪಚುನಾವಣೆಯಲ್ಲಿ ಜಯಬೇರಿ ಸಾಧಿಸುತ್ತೇವೆ, ಪ್ರಧಾನಮಂತ್ರಿ ನರೇಂದ್ರ ಮೋದೀಜೀ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ಬೆಂಬಲ ವ್ಯಕ್ತಪಡಿಸೋಣ ಎಂದರು. 

  ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಕೇಂದ್ರ ಸರ್ಕಾರದ ಹಾಗೂ ಈ ಹಿಂದೆ ಭಾಜಫ ಪಕ್ಷ ಮಾಡಿರುವ ಅಭಿವೃದ್ಧಿ ದೃಷ್ಟಿಯಿಂದ ಭರತ ಬೊಮ್ಮಾಯಿ ಗೆಲುವು ಸಾಧಿಸುತ್ತಾರೆ, ಅಲ್ಪಸಂಖ್ಯಾತರ ಓಲೈಕೆ ಮೀತಿಮೀರಿದೆ, ಓಲೈಕೆ ರಾಜಕಾರಣ ಮೀತಿಮೀರಿದೆ ಬಹುಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಆಗಿದೆ, ಈಗ ಮರು ಚುನಾವಣೆ ನಡೆದರೆ 150 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ನಿಷ್ಪಕ್ಷವಾಗಿ ತನಿಖೆ ಮಾಡಿಸಬೇಕು, ಕಾಂಗ್ರೆಸ್ ಹೈ ಕಮಾಂಡ ಸಿದ್ದರಾಮಯ್ಯ ರಾಜೀನಾಮೆ ಆದಷ್ಟು ಬೇಗ ಪಡೆಯಬೇಕು ಎಂದರು. 

   ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ ಮೈಸೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನು ? ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಹಾಗೂ ಭಾಜಪ ಸರಕಾರದ ಯಡಿಯೂರ​‍್ಪ,ಬೊಮ್ಮಾಯಿ ಕಾರಣ ಅವರ ಕೊಡುಗೆ ಏನು ? ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣ  ಬೊಮ್ಮಾಯಿ ಒಳ್ಳೆಯ ಕೆಲಸದಿಂದ 4 ಭಾರಿ ಸತತ ಗೆದ್ದಿದ್ದಾರೆ ಬರಿ ಸುಳ್ಳು ಹೇಳುವದು ಕಾಂಗ್ರೆಸ್ ನಾಯಕರ ಚಾಳಿ. ಜಾತಿ  ರಾಷ್ಟ್ರದ ಬಗ್ಗೆ ಮಾತನಾಡಿದರೆ ಕೋಮುವಾದಿ, ಸತ್ಯ ಮಾತಾಡಿದರೇ ನನಗೆ ಕೇಸು ಹಾಕುತ್ತಾರೆ.ಅಲ್ಲಾವಿನ ಭೂಮಿ  ಇರುವುದು ಸೌದಿ ಅರೇಬಿಯಾದಲ್ಲಿ ಕರ್ನಾಟಕದಲ್ಲಿ ಅಲ್ಲ, ಮುಸ್ಲಿಮರ ಓಲೈಕೆಗಾಗಿ ಏನಾದರೂ ಮಾಡಲು ಕಾಂಗ್ರೇಸ ಸರ್ಕಾರ ಸಿದ್ದವಿದೆ ಎಂದರು. 

    ಸಂಸದ ಗೋವಿಂದ ಕಾರಜೋಳ ಮಾತನಾಡಿ  ಕಾಂಗ್ರೇಸ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಾಗ ಸಿ.ಎಂ. ಸಿದ್ದರಾಮಯ್ಯ ಕಾಗಿನೇಲೆ ಶ್ರೀಗಳಿಗೆ ಬೊಮ್ಮಾಯಿ ಮಗ ಭರತನಿಗೆ ಬೆಂಬಲ ವ್ಯಕ್ತಪಡಿಸಿದರೆ ನಿಮ್ಮನ್ನು ನಿಂದಿಸುತ್ತೇನೆ ಎನ್ನುವುದು ಖಂಡಿಸುತ್ತೇನೆ ಅಲ್ಲದೇ ಸಂಡೂರ ತಾಲೂಕಿನಲ್ಲಿ ವಕ್ಪ ವಿಷಯವಾಗಿ ಮಾತನಾಡಲು ಹೋದ ದಲಿತರನ್ನು ಬಂದಿಸಿದ್ದಾರೆ ಎಂದು ಆರೋಪಿಸಿದರು.  

    ಈ ಸಂದರ್ಭದಲ್ಲಿ ವಿಶ್ವನಾಥ ಹರವಿ, ಡಿ.ಎಸ್‌.ಮಾಳಗಿ, ಮಂಜುನಾಥ ಬ್ಯಾಹಟ್ಟಿ, ನಿಂಗಪ್ಪ ಹರಿಜನ, ಸಂತೋಷ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ