ಹೆಚ್.ಐ.ವಿ./ಏಡ್ಸ್ ಇಳಿಮುಖವಾಗುವಲ್ಲಿ ಸಂಸ್ಥೆಗಳ ಪಾತ್ರ ಮಹತ್ವದ್ದು
ಬಳ್ಳಾರಿ 03: ವಿಶ್ವ ಏಡ್ಸ್ ದಿನಾಚರಣೆ 2018 ರ ಅಂಗವಾಗಿ ಆರೋಗ್ಯ ಇಲಾಖೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ, ಮತ್ತು ಭಾರತೀಯ ಕುಟುಂಬ ಯೋಜನಾ ಸಂಸ್ಥೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ವಿಶ್ವ ವಿದ್ಯಾಲಯ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗವರ್ಾಲ್ ಮುಂತಾದ ಶಾಲಾ ಕಾಲೇಜ್ ವಿದ್ಯಾಥರ್ಿ, ವಿದ್ಯಾಥರ್ಿನಿಯರುಗಳು ಸಹ ಭಾಗವಹಿಸಿದ್ದು ಮುಖ್ಯ ಆಕರ್ಷಣೆಯಾಗಿತ್ತು. ಜಾಥಾ ಕಾರ್ಯಕ್ರಮವನ್ನು ಹಸಿರು ಬಣ್ಣದ ಧ್ವಜ ತೋರಿಸುವ ಮೂಲಕ ಜಿಲ್ಲಾ ನ್ಯಾಯಾಧೀಶರಾದ ಅಂದ್ರಾಳ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಡಾ.ಹೆಡೆ, ಇವರು ಉದ್ಘಾಟ್ತಿಸಿದರು. ನಂತರ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳು, ಒಂದು ಕಾಲಕ್ಕೆ ಹೆಚ್.ಐ.ವಿ.ಸೊಂಕು ಪೀಡಿತರಲ್ಲಿ ದೇಶದ ಮೊದಲ 50 ನಗರಗಳಲ್ಲಿ ಒಂದಾಗಿದ್ದ ಬಳ್ಳಾರಿ ನಗರವು ಇಂದು ಈ ಜಾಡ್ಯದಿಂದ ಹೊರಬಂದಿದ್ದು ಸಂತೋಷದ ವಿಷಯವಾಗಿದೆ ಎಂದರು. ಇದಕ್ಕೆ ಸಕರ್ಾರಿ ಇಲಾಖೆಗಳ ಜೊತೆಗೆ ಕೈ ಜೋಡಿಸಿದ ದೇಶದ ಬಹಳಷ್ಟು ಸಂಘ-ಸಂಸ್ಥೆಗಳ ಪಾತ್ರವನ್ನು ಅವರು ಶ್ಲಾಘಿಸಿದರಲ್ಲದೇ ಹೆಚ್.ಐ.ವಿ. ಸೊಂಕು ದೇಶದಲ್ಲಿ ಇಳಿಮುಖ ಮಾಡುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ತರವಾದದ್ದೆಂದು ಹೇಳಿದರು. ಕಾರ್ಯಕ್ರದಲ್ಲಿ ಇಲಾಖೆಯ ವತಿಯಿಂದ, ಕುಟುಂಬ ಕಲ್ಯಾಣಾಧಿಕಾರಿಗಳಾದ, ಡಾ.ವಿಜಯಲಕ್ಷ್ಮಿ, ಡಾ.ಅನಿಲ್, ಡಾ.ನಿಜಾಮುದ್ದೀನ್, ಸಿಬ್ಬಂದಿಯಾದ ಗಿರೀಶ್ ಮುಂತಾದವರು ಭಾಗವಹಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷರು, ಶಿವಕುಮಾರ್, ಸದಸ್ಯರಾದ ಚಂದ್ರಶೇಖರ್, ರೋಟರಿ-ನಗರ ಕುಟುಂಬ ಕಲ್ಯಾಣ ಕೇಂದ್ರ ವೈದ್ಯಾಧಿಕಾರಿ ಡಾ.ಸುಧಾರಾಣಿ, ಕೇಂದ್ರದ ಸಿಬ್ಬಂದಿ, ಇತರೆ ಸಂಘ-ಸಂಸ್ಥೆಗಳ ಸಿಬ್ಬಂದಿಯೂ ಸಹ ಭಾಗವಹಿಸಿದ್ದು, ಜಾಥಾವು ನಗರದ ಮುಖ್ಯ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ಸೇರಿತು.