ಸೌಂದತ್ತಿ

ಕಲಾದೇವಿಯನ್ನು ಉಳಿಸಿ ಬೆಳೆಸುವ ಹೊಣೆ ಯುವಪೀಳಿಗೆಯ ಮೇಲಿದೆ: ವೈದ್ಯ

ಕಲಾದೇವಿಯನ್ನು ಉಳಿಸಿ ಬೆಳೆಸುವ ಹೊಣೆ ಯುವಪೀಳಿಗೆಯ ಮೇಲಿದೆ: ವೈದ್ಯ

ಲೋಕದರ್ಶನ ವರದಿ

ಉಗರಗೋಳ 20: ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳು ಇಂದು ನಶಿಸಿ ಹೋಗುತ್ತಿದ್ದು. ವೇಗವಾಗಿ ಬೆಳೆಯುತ್ತಿರುವ ಅಧುನಿಕ ಯುಗದಲ್ಲಿ, ಕಲಾದೇವಿಯನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ಕಾಂಗ್ರೇಸ್ ಮುಖಂಡ ವಿಶ್ವಾಸ ವೈದ್ಯ ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ದಂಡಿನ ದುರ್ಗಾದೇವಿ ರಂಗಮಂದಿರದಲ್ಲಿ ಸೋಮವಾರ ರಂದು ದಂಡಿನ ದುಗರ್ಾದೇವಿ ಯುವ ತರುಣ ನಾಟ್ಯ ಕಲಾ ಸಂಘ ಹಾಗೂ ಡಾ, ಬಿ ಆರ್ ಅಂಬೇಡ್ಕರ್ ಯುವಕ ಸಂಘ ಮತ್ತು ಛಲವಾದಿ ಮಹಾಸಭಾ ಅರ್ಪಿಸುವ 9ನೇ ಕಲಾಕುಸುಮ. ಹಲರ್ಾಪೂರದ ಸಣ್ಣಫಕ್ಕೀರಪ್ಪ ಗಾಂಜಿ ವಿರಚಿತ ರಾಕ್ಷಸನ ರಾಜ್ಯದಲ್ಲಿ ಸಹೋದರರ ಸವಾಲ್ (ಧರ್ಮದ ಹೆಣ್ಣಿನ ಮೇಲೆ ಕಾಮುಕನ ಕಣ್ಣು) ಎಂಬ ಸುಂದರ ಸಾಮಾಜಿಕ ನಾಟಕದ ಉಧ್ಟಾಟನೆ ನೆರವೇರಿಸಿ ಮಾತನಾಡಿದ ಅವರು. ಸಂಗೀತ, ನಾಟಕ, ಜಾನಪದ, ಕಲೆ, ಸಂಸ್ಕ್ರುತಿ, ಸಂಸ್ಕಾರವೇ ನಮ್ಮ ಭಾರತ ದೇಶದ ಆಸ್ತಿ ಎಂದರು. 

ಉಗರಗೋಳ ರಾಮಾರೂಢಮಠದ ಬ್ರಹ್ಮಾರೂಢ ಶ್ರೀಗಳು ಹಾಗೂ ನಿರ್ವಾಣೇಶ್ವರಮಠದ ಪೀಠಾಧಿಪತಿ ಗುರುಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಶರೀಫ್ ಬಾರಿಗಿಡದ ವಹಿಸಿದ್ದರು. ಸಿದ್ದನಗೌಡ ಗೂಡ್ರಾಶಿ ಜ್ಯೋತಿ ಬೆಳಗಿಸಿದರು. ಗ್ರಾಪಂ ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಕಲಾವಿದ ಮಾರಿತಿ ಬೆಂಗೇರಿ, ಕೊಳ್ಳಪ್ಪಗೌಡ ಗಂದಿಗವಾಡ, ವಾಯ್ ವಾಯ್ ಕಾಳಪ್ಪನವರ, ರಾಜೇಸಾಬ ಬೇವಿನಗಿಡದ, ಯಲ್ಲಪ್ಪ ಸಂಬರಗಿ, ವಿಠಲ ಗುಡೆನ್ನವರ, ಪ್ರಕಾಶ ಲಮಾಣಿ, ಪ್ರಲ್ಹಾದ ಕೆಳಗಡೆ, ವಿಠಲ ಸಿದ್ದಕ್ಕನವರ, ಮಹಾಂತೇಶ ಮಲ್ಲಾಡ, ಈರಪ್ಪ ಹೂಲಿ, ಪರಸಪ್ಪ ತಡಹಾಳ, ಮಾರುತಿ ಶಿಂಧೆ, ರುದ್ರಪ್ಪ ಬುಳ್ಳನ್ನವರ, ಶಿದ್ದಾರೂಢ ಬುಳ್ಳನ್ನವರ, ಯಲ್ಲಪ್ಪ ಹಿರೇಕುಂಬಿ ರಾಮು ಹಿರೇಕುಂಬಿ ಇತರರು ಇದ್ದರು.

ಸುದ್ದಿ ಓದಿ