ಮುಂದೆ ಗುರಿ ಹಿಂದೆ ಗುರು ಇದ್ದರೆ ಭವಿಷ್ಯ ರೂಪಿಸಿಕೊಳ್ಳಬಹುದು: ಬಿ.ಶ್ರೀನಿವಾಸ
ಲೋಕದರ್ಶನ ವರದಿ
ಶಿಗ್ಗಾವಿ 26: ವಿದ್ಯಾರ್ಥಿಗಳಿಗೆ ಮುಂದೆ ಒಳ್ಳೆಯ ಗುರಿ, ಹಿಂದೆ ಉತ್ತಮ ಶಿಕ್ಷಕರ ಮಾರ್ಗದರ್ಶನವಿದ್ದಾಗ ಮುಂದೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಬನ್ನೂರ ಶಾಲೆಯ ಮುಖ್ಯ ಶಿಕ್ಷಕ ಬಿ.ಶ್ರೀನಿವಾಸ ಹೇಳಿದರು.
ತಾಲೂಕಿನ ಗುಡ್ಡದಚನ್ನಾಪುರ ಚನ್ನಕೇಶವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 2 ವಾರಗಳವರೆಗೆ ನಡೆಯಲಿರುವ ಸ್ಟುಡೆಂಟ್ ಇಂಡಕ್ಷನ್ ಪ್ರೋಗ್ರಾಂ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ನಿಮ್ಮ ಮುಂದಿನ ಭವಷ್ಯವನ್ನು ನಿರ್ಧರಿಸುವ, ಈ ವಿದ್ಯಾರ್ಥಿ ಜೀವನದ ಒಂದೋಂದು ಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವಮೂಲಕ, ಡಿಪ್ಲೋಮಾ ವ್ಯಾಸಂಗದ ಸಿವಿಲ್ ಇಂಜನೀಯರಿಂಗ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಾಯೋಗಿಕ ತರಬೇತಿಯನ್ನು ಯಶಸ್ವಿಯಾಗಿ ಪಡೆದು ಈ ನಾಡಿನ ಉತ್ತಮ ಇಂಜನೀಯರಾಗಿ ಹೋರ ಹೋಮ್ಮುವಂತೆ ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಹೇಮಂತಕುಮಾರ ಕೆ.ಎಸ್. ಮಾತನಾಡಿ, ನಮ್ಮ ಕಾಲೇಜಿನ ಶಿಕ್ಷಕರು ಸೇವಾಮನೋಬಾವನೆ ಉಳ್ಳವರಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಗೆ ಪುರಕವಾದ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಅತ್ಯುತ್ತಮ ಪಲಿತಾಂಶ ಬರಲು ವಿಷೇಶ ಶ್ರಮ ವಹಿಸುತ್ತಿದ್ದಾರೆ. ಅದರ ಪ್ರತಿಫಲವಾಗಿ ಈ ಬಾರಿ ಎಲ್ಲಾ ವಿಭಾಗಗಳ ಸೀಟುಗಳು ಪರಿಪೂರ್ಣಗೊಂಡಿದ್ದು, ಅನೇಕ ವಿದ್ಯಾರ್ಥಿಗಳು ಸೀಟು ಸಿಗದೇ ಅನಿವಾರ್ಯವಾಗಿ ಬೇರೆ ಕಾಲೇಜುಗಳತ್ತ ಮುಖ ಮಾಡುವಂತಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 252 ವಿದ್ಯಾಥರ್ಿಗು ಪ್ರವೇಶ ಪಡೆದಿದ್ದು, ಕಾಲೇಜು ಪ್ರಾರಂಭವಾದಾಗಿನಿಂದ ದಾಖಲೆಯ ನೋಂದಣಿ ಈ ಬಾರಿಯಾಗಿದ್ದು, ಇದು ಕಾಲೇಜಿನ ಹಿರಿಮೆಯಲ್ಲೋಂದಾಗಿದೆ. ವಿದ್ಯಾರ್ಥಿಗಳು ತಮ್ಮ, ತಮ್ಮ ವಿಭಾಗದಲ್ಲಿ ವ್ಯಾಸಂಗಮಾಡಿ ಮುಂದಿನ ಗುರಿಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸುವುದೇ ಕಾಯರ್ಾಗಾರದ ಮುಖ್ಯ ಉದ್ದೇಶವಾಗಿದ್ದು, ಈ ಒಂದು ಕಾಯರ್ಾಗಾರದ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಕಾರ್ಯಗಾರದ ಸಂಯೋಜಕ ಡಾ.ನಾಗರಾಜ ಹಂಚಿನಮನಿ, ಶಿದ್ಧಲಿಂಗಯ್ಯ ಮಠದ, ಸಿ.ಜಿ.ಗಂಟಿಸಿದ್ದಪ್ಪನವರ, ಶಾತಾಜಬೇಗಂ ನಧಾಫ್, ರಾಮಲಿಂಗೇಶ ಪ್ಯಾಟಿ ಸೇರಿದಂತೆ ಉಪನ್ಯಾಸಕರು, ವಿಭಾಗಾಧಿಕಾರಿಗಳು, ಕುಲಸಚಿವರು, ಸಿಬ್ಬಂದಿ ಹಾಗು ವಿದ್ಯಾಥರ್ಿಗಳು ಉಪಸ್ಥಿತರಿದ್ದರು