ಮಗನ ಗೆಲುವಿಗೆ ಸಹಕಾರ ನೀಡಿದ ಕ್ರೀಡಾಪಟುಗಳಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ಶಾಸಕ
ಬಳ್ಳಾರಿ 28 : ನಿಮ್ಮ ಬೆಂಬಲದಿಂದ ನನ್ನ ಮಗ ಕೂಡ ಈ ಬಾರಿ ಗೆಲುವು ಸಾಧಿಸಿದ್ದಾನ್ನೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಹಾಲಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಾನೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇದ್ದಂತೆ ನನ್ನ ಮಗನ ಮೇಲೆ ಕೂಡ ಇರಲಿ ಎಂದು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ರವರು ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಭಾನುವಾರ ಬೆಳಗಿನ ಜಾವ ಕ್ರೀಡೆಯಲ್ಲಿ ತೊಡಗಿದ್ದ ಕ್ರೀಡಾಪಟುಗಳನ್ನು ಹಾಗೂ ಹಿರಿಯರನ್ನು ಭೇಟಿ ಮಾಡಿ ಮಾತನಾಡಿದ ಅವರು, ಮತದಾರರ ಗೌರವ ಉಳಿಸಬೇಕಾದದ್ದು ನನ್ನ ಧರ್ಮ. ಜನರೂ ಅದರಂತೆ ಸಹಕಾರ ನೀಡಿದ್ದಾರೆ. ಜನರ ವಿಶ್ವಾಸವನ್ನ ಉಳಿಸಿಕೊಳ್ಳಬೇಕಾದದ್ದು ನನ್ನ ಧರ್ಮ ನಿಮ್ಮೊಂದಿಗೆ ನಾವು ಇದ್ದೇವೆ ನಿಮ್ಮ ಎಲ್ಲಾ ಕಷ್ಟಗಳಲ್ಲಿ ಭಾಗಿಯಾಗಿ ನಿಮ್ಮ ಮನೆ ಮಗನಂತೆ ನನ್ನ ಮಗ ಕಾರ್ಯನಿರ್ವಹಿಸುತ್ತಾನೆ.
ಬೇರೆಯವರಂತೆ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನಲ್ಲ. ಜನರ ಸೇವೆ ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದಾನೆ. ಈ ನಿಟ್ಟಿನಲ್ಲಿ ಅಧಿಕಾರವನ್ನು ಎಂದೂ ದುರುಪಯೋಗ ಪಡಿಸಿಕೊಳ್ಳದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾನೆ ಎಂದರು.ಈ ವೇಳೆ ಕ್ರೀಡಾಪಟುಗಳು ಪ್ರತಿನಿತ್ಯ ಆಟಿಕೆಗಳಲ್ಲಿ ತೊಡಗಿ ಕೊಳ್ಳುವ ಆಟೋಪಕರಣಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಮನವಿ ಮಾಡಿದರು. ಅವರ ಮನವಿಗೆ ಸೂಕ್ತವಾಗಿ ಸ್ಪಂದಿಸಿ ಆದಷ್ಟು ಬೇಗ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ತಿಳಿಸಿದರು