ಶಿಗ್ಗಾವ್

ತಂದೆಗೆ ಹೆಲ್ಮೆಟ್ ಧರಿಸುವಂತೆ ಮನವಿ ಪತ್ರ ಬರೆದ ಮಕ್ಕಳು

ತಂದೆಗೆ ಹೆಲ್ಮೆಟ್ ಧರಿಸುವಂತೆ ಮನವಿ ಪತ್ರ ಬರೆದ ಮಕ್ಕಳು

ಲೋಕದರ್ಶನ ವರದಿ

ಶಿಗ್ಗಾವಿ:ಪಟ್ಟಣದ ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶ್ವ ತಂದೆಯಂದಿರ ದಿನಾಚರಣೆಯನ್ನು ತಮ್ಮ ತಮ್ಮ ತಂದೆಯವರಿಗೆ ಹೆಲ್ಮೆಟ್ ಧರಿಸುವಂತೆ ಮನವಿ ಪತ್ರ ಬರೆಯುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಸಂಸ್ಕೃತಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸವಿತಾಗೌರಿಮಠ ಮತ್ತು ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಅವರ ಮಾರ್ಗದರ್ಶನದಲ್ಲಿ ವಿಶ್ವ ತಂದೆಯಂದಿರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಂದೆಗೊಂದು ಪತ್ರ ಬರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಬಹುತೇಕರು ತಮ್ಮ ಪತ್ರದ ಮೂಲಕ ದ್ವಿಚಕ್ರ ವಾಹನ ಚಲಾಯಿಸುವಾಗ ಸುರಕ್ಷಿತವಾಗಿ ಮತ್ತು ಸಂಚಾರದ ನಿಯಮಗಳನ್ನು ಪಾಲಿಸುವಂತೆಯೂ ಮತ್ತುಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ವತ್ತಾಯಿಸಿ ತಮ್ಮ ತಂದೆಯವರಿಗೆ  ಪತ್ರಬರೆದಿರುವುದು ವಿದ್ಯಾರ್ಥಿಗಳ ಸಾಮಾಜಿಕ ಹೊಣೆಗಾರಿಕೆಯಅರಿವಿನ ಮಟ್ಟ ತಿಳಿಸುತ್ತದೆ, ಮಕ್ಕಳೊಂದಿಗೆ ಈ ವಿಷಯ ಕುರಿತು ಚಚರ್ಿಸಿದಾಗ, ತಾವು ಹಣವನ್ನು ಕೂಡಿಟ್ಟು ಹೆಲ್ಮೆಟ್ ಖರೀದಿಸಿ ತಂದೆಯವರಿಗೆ ಉಡುಗರೆಯಾಗಿ ನೀಡುವುದಾಗಿ ಮಕ್ಕಳು ತಿಳಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಸಾಮಾಜಿಕ ಕಾಳಜಿ ಕಂಡು ಹೆಮ್ಮೆ ಮೂಡುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ತಿಳಿಸಿದರು 

ಸುದ್ದಿ ಓದಿ