ಸುಕೋಬ್ಯಾಂಕಿನ ಬೆಳ್ಳಿಹಬ್ಬದ ಪ್ರಯುಕ್ತ ವರ್ಷಪೂತರ್ಿ ರಜತ ಸಂಭ್ರಮ
ಬಳ್ಳಾರಿ 15: 25ವರ್ಷಗಳ ಹಿಂದೆ ಆರಂಭಗೊಂಡು ನಗರದಲ್ಲಿ ಪ್ರಧಾನಕಛೇರಿ ಹೊಂದಿರುವ ಸುಕೋಬ್ಯಾಂಕ ಬರುವ ಜನವರಿ 01 ರಿಂದ ತನ್ನ ರಜತ ಮಹೋತ್ಸವದ ಅಂಗವಾಗಿ ವರ್ಷಪೂತರ್ಿ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಬ್ಯಾಂಕಿನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸುಕೋಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ರಜತ ಮಹೋತ್ಸವದ ಕಾರ್ಯಕ್ರಮದ ವಿವರವನ್ನು ತಿಳಿಸಿದರು.
ಜನವರಿ 05 ರಂದು ಬೆಳಿಗ್ಗೆ ನಗರದಲ್ಲಿ ಸುಸ್ಥಿರ ಕೃಷಿಗಾಗಿ ಮ್ಯಾರತನ್ ಓಟವನ್ನು ಬೆಳಿಗ್ಗೆ 6 ಗಂಟೆಗೆ ಹಮ್ಮಿಕೊಂಡಿದ್ದು. ನಗರದ ಆದಿದೇವತೆ ಕನಕದುರ್ಗಮ್ಮ ದೇವಸ್ಥಾನದಿಂದ ಗಡಗಿ ಚನ್ನಪ್ಪವೃತ್ತ, ರೈಲ್ವೇ ನಿಲ್ದಾಣ, ಗವಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಕನಕದುರ್ಗಮ್ಮ ದೇವಸ್ಥಾನಕ್ಕೆ ಬಂದು ತಲುಪಲಿದೆ. ಇದರಲ್ಲಿ ಕೃಷಿ ಸಾಧಕರು, ರೈತರು, ಸುಕೃತ ಕೃಷಿ ಪ್ರಶಸ್ತಿ ಪುರಸ್ಕುತರು, ಪ್ರಗತಿಪರರು, ಕೃಷಿ ತಜ್ಞರು, ವಿದ್ಯಾಥರ್ಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ. 14 ವರ್ಷ ಮೇಲ್ಪಟ್ಟವರು ಈ ಮ್ಯಾರತನ್ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ಸ್ಥಾನ ಪಡೆದವರಿಗೆ 25 ಸಾವಿರ, ದ್ವಿತಿಯ ಸ್ಥಾನ ಪಡೆದವರಿಗೆ 15 ಸಾವಿರ ಮತ್ತು ತೃತಿಯ ಸ್ಥಾನ ಪಡೆದವರಿಗೆ 10 ಸಾವಿರ ಬಹುಮಾನಮ ನೀಡಲಿದೆ. ನಂತರ ಮದ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರೊಂದಿಗೆ "ಬರಗೆದ್ದ" 45 ಕೃಷಿಕರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಬಸವಭವನದಲ್ಲಿ 6 ಗಂಟೆಗೆ ಸುಕೃತ ಕೃಷಿ ಪ್ರಶಸ್ತಿ ಈ ವರ್ಷ ಇಬ್ಬರು ಸಾಧಕರಿಗೆ ನೀಡುತ್ತಿದ್ದು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಪಾರಿತೋಶಕ ಮತ್ತು ಪ್ರಸಂಶಪತ್ರ ಒಳಗೊಂಡಿರುತ್ತದೆ. ನಂತರ ಜಿ.ಟಿವಿಯ ಸರಿಗಮಪ ಸರಣಿಯ ವಿಜೇತ ಮಾಸ್ಟರ್ ಜ್ಞಾನೇಶ ಪ್ರಕೃತಿ ರೆಡ್ಡಿ, ವಿಶ್ವಪ್ರಸಾದ್ ಅವರಿಂದ ಸಂಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಬ್ಯಾಂಕಿನ 14 ಜಿಲ್ಲೆಗಳ ಎಲ್ಲಾ ಶಾಖೆಗಳಲ್ಲಿ ವರ್ಷವೀಡಿ ಅಡುಗೆ ಸ್ಪಧರ್ೆಯನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮ ಬಳ್ಳಾರಿಯಲ್ಲಿ ಜನವರಿ 05ರಂದು ನಡೆಯಲಿದ್ದು ರಾಜ್ಯದ ವಿವಿದ ಜಿಲ್ಲೆಗಳ ಬೇರೆ-ಬೇರೆ ಶಾಖೆಗಳಲ್ಲಿ ಬೇರೆ-ಬೇರೆ ದಿನಾಂಕದಂದು ನಡೆಯಲಿದೆ ಎಂದರು. ಆಯಾ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪಧರ್ೆಯಲ್ಲಿ ವಿಜೇತರಾದ ಮೂವರನ್ನು 2019ರ ಡಿಸೆಂಬರ್ ನಲ್ಲಿ ನಡೆಯುವ ಮೆಗಾ ಸ್ಪಧರ್ೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಅಂತಿಮವಾಗಿ ಮೂರು ಜನರನ್ನು ಚಿತ್ರನಟ ಸಿಹಿಕಹಿ ಚಂದ್ರು ಆಯ್ಕೆ ಮಾಡಲಿದ್ದಾರೆ. ಸ್ಪಧರ್ೆಯಲ್ಲಿ ಭಾಗವಹಿಸುವವರು ಉತ್ತರ ಕನರ್ಾಟಕದ ಮರೆತುಹೋದ ತಿಂಡಿ, ತಿನಿಸು ಮತ್ತು ಸಿರಿದಾನ್ಯ ಖ್ಯಾದಗಳು ತಯಾರಿಸಬೇಕಾಗಿದೆ. ಎರಡು ಸ್ಪಧರ್ೆಗಳಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ನಮ್ಮ ಶಾಖೆಗಳು ಹೊಂದಿರುವ 14 ಜಿಲ್ಲೆಗಳಲ್ಲಿಯೂ ಹೆಸರು ನೊಂದಾಯಿಸಬಹುದು.
ಜಿಲ್ಲಾಮಟ್ಟದಲ್ಲಿ ಆಯ್ಕೆಯಾದವರಿಗೆ ಕ್ರಮವಾಗಿ ಹತ್ತು ಸಾವಿರ, ಏಳುವರೆ ಸಾವಿರ ಮತ್ತು ಐದು ಸಾವಿರ ಬಹುಮಾನ, ಅಂತಿಮಸ್ಪಧರ್ೆಯಲ್ಲಿ ಗೆದ್ದವರಿಗೆ ಕ್ರಮವಾಗಿ ಇಪ್ಪತೈದು, ಹದಿನೈದು, ಹತ್ತು ಸಾವಿರ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು. ಕಳೆದಬಾರಿ ಸುಕೃತ ಕೃಷಿಪ್ರಶಸ್ತಿ ಸಂಚಾಲಕ ಸಮಿತಿಯ ಉತ್ತಮ ಕೃಷಿಕ ಪ್ರಶಸ್ತಿಯನ್ನು ಸಾಗರದ ಮುತ್ತನ್ನ ಪೂಜಾರ ಅವರಿಗೆ ಮತ್ತು ಉತ್ತಮ ಕೃಷಿ ತಂತ್ರಜ್ಞಾನ ಪ್ರಶಸ್ತಿಯನ್ನು ಶಿರಸಿಯ ಲಕ್ಷ್ಮಿ ನಾರಾಯಣ ಹೆಗಡೆ ಅವರಿಗೆ ಪ್ರಧಾನ ಮಾಡಲಾಗಿತ್ತು. ಈ ಪ್ರಶಸ್ತಿಯನ್ನು ದರ್ಮಸ್ಥಳದ ಪಿಠಾದಿಪತಿ ವಿರೇಂಧ್ರ ಹೆಗಡೆ ಅವರಿಂದ ಪ್ರಧಾನ ಮಾಡಿದ್ದೇವು. ಅದರಂತೆ ಪ್ರತೀ ಸಲದ ಪ್ರಶಸ್ತಿ ಪ್ರಧಾನ ಮಾಡುವ ದಿನಾಂಕವನ್ನು ಮಾತ್ರ ಸುಕೋಬ್ಯಾಂಕ ನಿರ್ಧರಿಲಿದ್ದು ವಿಜೇತರನ್ನು ನಿದರ್ೇಸಿಸುವುದು ಹಾಗೂ ಅವರ ಬಗ್ಗೆ ಸಾಕ್ಷಾಚಿತ್ರ ಪುಸ್ತಕಗಳನು ಪ್ರಕಟಿಸುವುದು ಕೃಷಿ ಪ್ರಶಸ್ತಿ ಸಂಚಾಲನ ಸ್ವತಂತ್ರ ಸಮಿತಿಯ ಜವಬ್ದಾರಿಯಾಗಿತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಸೊಕೋಬ್ಯಾಂಕಿನ ವ್ಯೆವೆಸ್ಥಾಪಕ ನಿಧರ್ೇಶಕ ಪರಿಮಳ ಆಚಾರ್ ಅಗ್ನಿವೊತ್ರಿ, ಮತ್ತು ಕಾರ್ಯದಶರ್ಿ ವೆಂಕಟೇಶ್ರಾವ್ ಉಪಸ್ಥಿತರಿದ್ದರು.