ಬಿಜೆಪಿಗೆ ಟಾ..ಟಾ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸಲಿರುವ: ಡಾ. ಶ್ರೀನಿವಾಸ್

ಬಿಜೆಪಿಗೆ ಟಾ..ಟಾ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸಲಿರುವ: ಡಾ. ಶ್ರೀನಿವಾಸ್

ಲೋಕದರ್ಶನ ವರದಿ

ಬಳ್ಳಾರಿ 14:  ನಗರದ ಬಿಜೆಪಿ ಪಕ್ಷದಲ್ಲಿ ನನ್ನ ಸೇವೆಯನ್ನು ಪರಿಗಣಿಸಿ ಹಾಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಬಯಸಿದಂತೆ ಸ್ಪಧರ್ೆಗೆ ಟಿಕೆಟ್ ನೀಡದ ಕಾರಣ ಪಕ್ಷಕ್ಕೆ ಟಾಟಾ ಹೇಳಿದ್ದು.

   ಪಕ್ಷೇತರ ಅಭ್ಯಥರ್ಿಯಾಗಿ ನಾನು ಸ್ಪಧರ್ಿಸಲಿದ್ದೇನೆ ಎಂದು ಬಿಜೆಪಿ ಮುಖಂಡರಾದ ಡಾ|| ಶ್ರೀನಿವಾಸ್ ಅವರು ಭಾನುವಾರ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟ ಪಡಿಸಿದರು. ಸೋಮುವಾರ ಬೆಳಿಗ್ಗೆ 10:30ಕ್ಕೆ ದುರ್ಗಮ್ಮ ದೇವಸ್ಥಾನದಿಂದ ತೆರಳಿ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದರು.

     ಬಿಜೆಪಿಯ ವೈದ್ಯಕೀಯ ಪ್ರಕೋಶದ ಸಹಸಂಚಾಲಕರಾಗಿದ್ದ ನಗರದ ಖ್ಯಾತ ಮನೋ ವೈದ್ಯ ಶ್ರೀನಿವಾಸ ಕಳೆದ 5 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ದುಡಿದಿದ್ದರೂ ಅಲ್ಲದೇ ಕಳೆದ ಲೋಕಸಭಾ ಚುನಾವಣೆಗೆ ಅವರು ಟಿಕೆಟ್ ಕೇಳಿದ್ದರು ಆದರೆ ಆಗ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದ್ದರಿಂದ ಅದಕ್ಕೆ ನಾನು ಸುಮ್ಮನಾಗಿದ್ದೆ. ಅವರು ನಂತರ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪಧರ್ೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದೆ.

      ಆದರೆ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ನಿಂದ ಬಂದವರಿಗೆ ಟಿಕೆಟ್ ನೀಡುತ್ತಿದ್ದರಿಂದ ಬೇಜಾರಿಗಿದ್ದರು. ಆಗ ಬಿಜೆಪಿ ವರಿಷ್ಟರು ಕೆಲವು ಮುಖಂಡರು ಮುಂದಿನ ಲೋಕಸಭಾ ಚುನಾವಣೆಗೆ ಸಿದ್ದರಾಗಿ ಎಂದು ಹೇಳಿದ್ದರು ಎಂದರು. ಅದಕ್ಕಾಗಿ ಈ ಉಪಚುನಾವಣೆಯ ಘೋಷಣೆ ಆಗುವ ಮುನ್ನವೇ ಅನೇಕ ಗ್ರಾಮಗಳಿಗೆ ತೆರಳಿ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸಿ ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪಧರ್ಿಸಲು ತಿಳಿಸಿದ್ದರು.

    ಆದರೆ ಈ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದ ಕಾರಣ ನಾನು ಬಿಜೆಪಿಗೆ ಟಾಟಾ ಹೇಳಿ ಪಕ್ಷೇತರವಾಗಿ ಸ್ಪಧರ್ಿಸುತ್ತಿದ್ದೇನೆ.

   ನನಗೆ ನಮ್ಮ ಅಭಿಮಾನಿಗಳು, ಹಿತೈಷಿಗಳು ಎಲ್ಲರೂ ಸಹಕಾರ ಮತ್ತು ಸಲಹೆ ನೀಡಿದ್ದರಿಂದ ನಾನು ಈ ನಿರ್ಣಯವನ್ನು ಮಾಡಿದ್ದೇನೆ ಎಂದರು.

 ಈ ಪತ್ರಿಕಾಗೋಷ್ಟಿಯಲ್ಲಿ ಕುರುಬಸಂಘದ ಉಪಾಧ್ಯಕ್ಷ ಹಾವಿನಹಾಳ ವಿರೇಶ್, ಎನ್.ಜಿ.ಓ ಸಮಾಜಸೇವಕಿ ಲಕ್ಷಿ, ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ