ಕಾಗವಾಡ

ಶಿಕ್ಷಕರು ಸೇವೆಯಿಂದ ನಿವೃತ್ತರಾಗುತ್ತಾರೆ; ಜ್ಞಾನ ನೀಡುವುದರಿಂದಲ್ಲ: ಆರ್‌.ಎಸ್‌. ಪಾಟೀಲ

ಶಿಕ್ಷಕರು ಸೇವೆಯಿಂದ ನಿವೃತ್ತರಾಗುತ್ತಾರೆ; ಜ್ಞಾನ ನೀಡುವುದರಿಂದಲ್ಲ: ಆರ್‌.ಎಸ್‌. ಪಾಟೀಲ

ಲೋಕದರ್ಶನ ವರದಿ 

ಕಾಗವಾಡ 03 : ಶಿಕ್ಷಕರು ತಮ್ಮ ಕೆಲಸದಿಂದ ಮಾತ್ರ ನಿವೃತ್ತರಾಗುತ್ತಾರೆ. ಜ್ಞಾನವನ್ನು ನೀಡುವ ಕೆಲಸದಿಂದ ಎಂದಿಗೂ ಅವರು ನಿವೃತ್ತರಾಗುವುದಿಲ್ಲ. ಸಿದ್ಧೇಶ್ವರ ವಿದ್ಯಾಲಯದ ಶಿಕ್ಷಕ ಶಂಕರ್ ಪವಾರ್ ಶಾಲಾ ಸೇವೆಯಿಂದ ನಿವೃತ್ತರಾಗುತ್ತಿದ್ದರೂ, ಅವರು ಸಮಾಜಕ್ಕೆ ಜ್ಞಾನವನ್ನು ನೀಡುವುದನ್ನು ಮುಂದುವರಿಸಬೇಕೆಂದು ಪ್ರಥಮ ದರ್ಜೆ ಗುತ್ತಿಗೆದಾರ ರುದ್ರಗೌಡ ಪಾಟೀಲ ಹೇಳಿದ್ದಾರೆ. ಅವರು ಸೋಮವಾರ ದಿ. 29 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಸಿದ್ಧೇಶ್ವರ ವಿದ್ಯಾಲಯದಲ್ಲಿ ಶಂಕರ ಪವಾರ ಅವರು ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಿವೃತ್ತ ಶಿಕ್ಷಕ ಶಂಕರ ಪವಾರ ಮತ್ತು ಅವರ ಪತ್ನಿ ಅಂಬಿಕಾ ಪವಾರ್ ಅವರನ್ನು ಗಣ್ಯರು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. 

ಈ ವೇಳೆ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಸಂಸ್ಥೆಯ ಅಧ್ಯಕ್ಷ ಸಾತಗೌಡಾ ಪಾಟೀಲ, ಮುಖಂಡರಾದ ಐ.ಎ. ಪಾಟೀಲ, ಎಂ.ಕೆ. ಪಾಟೀಲ, ಸುಭಾಶ ಪಾಟೀಲ, ಅಶೋಕ ಕಾತ್ರಾಳೆ, ಮುಖ್ಯೋದ್ಯಾಪಕ ಎಸ್‌.ಡಿ ಬುವಾ, ಎ.ಬಿ ಶಹಾಪುರೆ, ಎ.ಎಸ್ ಪಾಟೀಲ, ಬಸವರಾಜ ಕಾಡದೇವರ, ಡಾ. ಲಕ್ಷ್ಮಣ ಪವಾರ್, ಎ.ಬಿ. ಉದಗಾವೆ, ಆರ್‌.ಎ. ಪಾಟೀಲ, ಆರ್‌.ಎನ್‌. ಚೌಗುಲಾ, ಆರ್‌.ಎ. ಪಾಟೀಲ, ಆರ್‌.ಬಿ. ಪಾಟೀಲ, ಋಷಭ ಡಿಗ್ರಜೆ, ರಾವಸಾಹೇಬ ಶಿಂಧೆ ಸೇರಿದಂತೆ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಪಾಲಕರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  


ಸುದ್ದಿ ಓದಿ