ಭರತ್ ಬೊಮ್ಮಾಯಿಗೆ ಕೈಹಿಡಿದು ನಡೆಸಿರಿ : ಚನ್ನಮ್ಮ ಬೊಮ್ಮಾಯಿ
ಭರತ್ ಬೊಮ್ಮಾಯಿಗೆ ಕೈಹಿಡಿದು ನಡೆಸಿರಿ : ಚನ್ನಮ್ಮ ಬೊಮ್ಮಾಯಿ
ಶಿಗ್ಗಾವಿ 08: ಕ್ಷೇತ್ರದ ಜನತೆ ಬಸವರಾಜ ಬೊಮ್ಮಾಯಿ ಅವರನ್ನು ಕೈಹಿಡಿದಿದ್ದರಿಂದ ಅವರು ಸಿಎಂ ಆಗುವವರೆಗೂ ಸಾಧ್ಯವಾಯಿತು. ಅದರಂತೆ ಭರತ್ ಬೊಮ್ಮಾಯಿಯನ್ನು ಕೈಹಿಡಿದು ನಡೆಸಿರಿ ಎಂದು ಚನ್ನಮ್ಮ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಕ್ಷೇತ್ರದ ಹಳೆ ಮುತ್ತಳ್ಳಿ ಗ್ತಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರುಬಸವರಾಜ ಬೊಮ್ಮಾಯಿ 2008ರಿಂದ 2023ರವರೆಗೆ ಈ ಕ್ಷೇತ್ರದಲ್ಲಿ ಪಣತೊಟ್ಟು ಅಭಿವೃದ್ಧಿ ಮಾಡಿದ್ದಾರೆ. 2008ರ ಮೊದಲು ಈ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಬಂದಾಗ ಯಾವುದೆ ಅಭಿವೃದ್ಧಿಯಿಲ್ಲದೇ ಶಿಗ್ಗಾವಿ-ಸವಣೂರು ಮತಕ್ಷೇತ್ರ ಸೊರಗಿಹೋಗಿತ್ತು. ಆದರೆ, ಕ್ಷೇತ್ರದ ಜನತೆಗಾಗಿ ತಮ್ಮನ್ನು ಕೈಹಿಡಿದ ಮತದಾರರಿಗಾಗಿ ರಸ್ತೆ, ಶಾಲೆ, ನೀರು, ಮನೆಗಳ ನಿರ್ಮಾಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಗಾಗಿ ಬಸವರಾಜ ಬೊಮ್ಮಾಯಿ ದುಡಿದಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿಯವರು ಸಂಸದರಾದ ಮಾತ್ರಕ್ಕೆ ಕ್ಷೇತ್ರದ ಅಭಿವೃದ್ಧಿ ನಿಲ್ಲಬಾರದೆಂದು ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಗಾಮೆಂರ್ಟ್ಸ್ ಫ್ಯಾಕ್ಟರಿ ಬಂದು ಮಹಿಳೆಯರು ದುಡಿಯಲು ಆರಂಭಿಸಿದ್ದಕ್ಕೆ ಪುತ್ರನೇ ಕಾರಣನಾಗಿದ್ದಾನೆ. ಅವನು ನಿಮ್ಮ ಮನೆ ಮಗ. ಮಹಿಳೆಯರು ಸೇರಿದಂತೆ ಕ್ಷೇತ್ರದ ಎಲ್ಲಾ ಮತದಾರರು ಮುಂದುವರೆಯಬೇಕೆಂದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾನೆ. ಆತನನ್ನು ಕ್ಷೇತ್ರದ ಏಳಿಗೆಗಾಗಿ ಮತದಾರರು ಬೆಂಬಿಲಿಸಬೇಕೆಂದು ಮನವಿ ಮಾಡಿದರು.